ಪೂರ್ವ ವಲಯದಲ್ಲಿ ಇದೇ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ದಾವಣಗೆರೆಯಿಂದ ಬಳ್ಳಾರಿ ಜೈಲಿಗೆ ರವಾನೆ ಮಾಡಿದ್ದು, ಪೂರ್ವ ವಲಯದ ಜಿಲ್ಲೆಗಳಲ್ಲಿ ಅಕ್ರಮ ಮಾದಕ ವಸ್ತುಗಳ ಸಂಗ್ರಹ, ಸಾಗಾಟ ಹಾಗೂ ಮಾರಾಟವನ್ನು ಕಟ್ಟು ನಿಟ್ಟಾಗಿ ತಡೆಗಟ್ಟುವ ಉದ್ದೇಶದಿಂದ ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾ ನಿರೀಕ್ಷಕರಾದ ಡಾ.ರವಿಕಾಂತೇಗೌಡ, ಬಿ.ಆರ್. ಐಪಿಎಸ್ ಇವರ ನಿರ್ದೇಶನದಂತೆ ಈ ಕ್ರಮ ಜರುಗಿಸಿದ್ದು, ಪೂರ್ವ ವಲಯದಲ್ಲಿಯೇ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೈಗೊಂಡ ಮೊದಲ ಪ್ರಕರಣವಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಸಂಗ್ರಹ, ಸಾಗಾಟ ಹಾಗೂ ಮಾರಾಟ ನಡೆಸುತ್ತಿದ್ದ ಆರೋಪಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂತೇಬೆನ್ನೂರು ಗ್ರಾಮ ನಿವಾಸಿ ಜಾಕೀರ್ (55 ವರ್ಷ) ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ–1988 ಕಲಂ 3(1) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ನಿಷೇಧಿತ ಮಾದಕ ವಸ್ತುಗಳ ಅಕ್ರಮ ಚಟುವಟಿಕೆಯನ್ನು ಜಾಕೀರ್ ನಿರಂತರವಾಗಿ ಮುಂದುವರೆಸುತ್ತಿರುವುದು ಹಾಗೂ ಮುಂದೆಯೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವುದರಿಂದ, PIಖಿ ಓಆPS ಕಾಯ್ದೆ 1988 ಕಲಂ 2(ಇ) ಅನ್ವಯ ಆರೋಪಗಳು ದೃಢಪಟ್ಟಿವೆ.
ಆರೋಪಿ ಜಾಕೀರ್ ವಿರುದ್ಧ ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳ ಅಕ್ರಮ ಸಂಗ್ರಹ, ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು 06 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 04 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯ ದಂಡ ಹಾಗೂ ಶಿಕ್ಷೆ ವಿಧಿಸಿದ್ದು, ಉಳಿದ 02 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಈ ಹಿನ್ನೆಲೆಯಲ್ಲಿ, ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ ದಾವಣಗೆರೆ ಇವರ ಆದೇಶದಂತೆ, ಜಾಕೀರ್ ಅನ್ನು ದಿನಾಂಕ 25/02/2026ರಂದು ಬಳ್ಳಾರಿ ಕಾರಾಗೃಹಕ್ಕೆ ರವಾನಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ತರಳಬಾಳು ಬಡಾವಣೆಯಲ್ಲಿ ಶಿವಸಂಚಾರ-25 ನಾಟಕೋತ್ಸವ ಪ್ರದರ್ಶನ
ಆರೋಪಿತನನ್ನು PIಖಿ ಓಆPS ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ರವಾನಿಸುವಲ್ಲಿ ಯಶಸ್ವಿಯಾದ ಸಂತೆಬೆನ್ನೂರು ಸಿಪಿಐ ಶ್ರೀಮತಿ ಮಲ್ಲಮ್ಮ ಚೌಬೆ, ಪಿಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರು ಪ್ರಶಂಸಿಸಿದ್ದಾರೆ.





