ದಾವಣಗೆರೆ | ಚುನಾವಣಾ ಆಯ್ಕೆ ಸಭೆಯಲ್ಲಿ ಅಹಿಂದಕ್ಕೆ ಪ್ರತಿಯಾಗಿ ‘ಐನೂರು ಸಾವಿರ’ ಘೋಷಣೆ: ಮುಸ್ಲಿಂರ ಆಕ್ರೋಶ

Date:

ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪತ್ರ ಸಮರ್ಥ ಶಾಮನೂರು ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಬೆಂಗಳೂರಿಗೆ ಹೋಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಭೇಟಿ ವೇಳೆ ಭಾಗವಹಿಸಿದ ಮುಸ್ಲಿಂ ಮುಖಂಡರಿಗೆ ಸ್ಥಳೀಯ ಮುಸ್ಲಿಂ ಸಮುದಾಯದವರು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಅಲ್ಲದೆ ಮಂಗಳವಾರ ದಾವಣಗೆರೆ ಚುನಾವಣಾ ಆಯ್ಕೆ ಸಮಿತಿಯ ಸಭೆಯಲ್ಲಿ ಅಹಿಂದ ಹೇಳಿಕೆಗೆ ಪ್ರತಿಯಾಗಿ “ಐನೂರು, ಸಾವಿರ” ಎಂದು ಅವಮಾನಕರವಾಗಿ ಕೂಗಿದ ಹೇಳಿಕೆಯ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

IMG 20260318 WA0180

ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಿ ಪುತ್ರ ಸಮರ್ಥ್ ಶಾಮನೂರುಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಂದೆ 2000ಕ್ಕೂ ಅಧಿಕ ಜನರನ್ನು ಕರೆದೊಯ್ದು ಕಸರತ್ತು ನಡೆಸಿದ್ದರು. ಈ ವೇಳೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಲವು ಮುಸ್ಲಿಂ ಮುಖಂಡರು ಅವರೊಂದಿಗೆ ತೆರಳಿ ಸಮರ್ಥ ಶಾಮನೂರುಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಲ್ಲಿ ಗೆಲ್ಲಿಸಿಕೊಂಡು ಬರುವುದಾಗಿ ತಿಳಿಸಿ ನಾಯಕರ ಮುಂದೆ ಹೇಳಿಕೆ ನೀಡಿದರು ಎನ್ನಲಾಗಿದೆ.

ಬೆಂಗಳೂರಿಗೆ ತೆರಳಿ ಶಾಮನೂರು ಕುಟುಂಬಕ್ಕೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದು ಮತ್ತು ಗೆಲ್ಲಿಸಿಕೊಂಡು ಬರುವುದಾಗಿ ಕಾಂಗ್ರೆಸ್ ಹಿರಿಯ ನಾಯಕರ ಮುಂದೆ ಹೇಳಿರುವುದು ದಾವಣಗೆರೆ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಮೂಡಿಸಿದ್ದು ಅದರ ಆಕ್ರೋಶದ ಕಿಡಿ ಮಂಗಳವಾರ ಸಂಜೆ ನಡೆದ ಚುನಾವಣಾ ಆಯ್ಕೆ ಸಮಿತಿ ಸಭೆಯಲ್ಲೂ ಕಂಡು ಬಂದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1003918524

ಅದರ ಮುಂದುವರೆದ ಭಾಗವಾಗಿ ಇಂದು ಮಧ್ಯಾಹ್ನ ತಂಜೀಂ ಕಮಿಟಿಯ ಆವರಣದಲ್ಲಿ ಬೆಂಗಳೂರಿಗೆ ತೆರಳಿದ್ದ ಕೆಲವು ನಾಯಕರನ್ನು ಕರೆಸಿಕೊಂಡು ಪ್ರಶ್ನಿಸಿದ ಸಮುದಾಯದ ಹಿರಿಯರು, ಯುವಕರು ಹಾಗೂ ಸಮುದಾಯದ ಮುಖಂಡರು ಅವರಿಗೆ ‘ನೀವು ಈ ಕೂಡಲೇ ಸಮುದಾಯದ ವ್ಯಕ್ತಿಗೆ ಟಿಕೆಟ್ ಗೆ ಪ್ರಯತ್ನಿಸುವಿರೋ? ಅಥವಾ ಶಾಮನೂರು ಕುಟುಂಬವನ್ನು ಬೆಂಬಲಿಸುತ್ತಿರೋ ತಿಳಿಸಬೇಕು, ನೀವು ಸಮುದಾಯದ ಪರ ಇದ್ದೀರೋ? ಇಲ್ಲವೋ ಎಂಬುದನ್ನು ಈಗಲೇ ಸ್ಪಷ್ಟಪಡಿಸಬೇಕು’ ಎಂದು ಸುತ್ತುವರೆದು ಘೇರಾವ್ ಹಾಕಿ ಆಗ್ರಹಪಡಿಸಿದರು. ಈ ವೇಳೆ ತಂಜೀಂ ಕಮಿಟಿಯ ನೂರಾನಿ ಶಾದಿ ಮಹಲ್ ಮುಂಭಾಗದಲ್ಲಿ ಕೆಲಕಾಲ ವಾಗ್ವಾದದ ವಾತಾವರಣ ಮುಂದುವರೆದಿತ್ತು.

ಅಲ್ಲದೆ ನೆನ್ನೆ ನಡೆದ ಕಾಂಗ್ರೆಸ್ ಚುನಾವಣಾ ಆಯ್ಕೆ ಸಮಿತಿಯ ಸಭೆಯಲ್ಲಿ ಅಹಿಂದ ಎಂದು ಘೋಷಣೆ ಕೂಗುವ ಸಮಯದಲ್ಲಿ ಅದಕ್ಕೆ ಪ್ರತಿಯಾಗಿ ಸಮರ್ಥ ಶಾಮನೂರು ಬೆಂಬಲಿಗರು “ಐನೂರು ಸಾವಿರ” ಎಂದು ಕೂಗಿ ಮುಸ್ಲಿಂ ಸಮುದಾಯಕ್ಕೆ ಹಾಗೂ ಅಹಿಂದ ಸಮುದಾಯದವರಿಗೆ ಐನೂರು, ಸಾವಿರ ರೂಪಾಯಿ ಕೊಟ್ಟರೆ ಮತ ಹಾಕುತ್ತಾರೆ ಎಂಬರ್ಥದಲ್ಲಿ ನಿಂದಿಸಿದ್ದಾರೆ’ ಎಂದು ಆಕ್ರೋಶ ಕೂಡ ವ್ಯಕ್ತವಾಯಿತು.

1003918555

ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಮಾನವ ಹಕ್ಕುಗಳ ಕಾರ್ಯಕರ್ತ ಅಸೀಂ ಖಾದ್ರಿ “ಮುಸ್ಲಿಂ ಸಮುದಾಯ ಕಳೆದ 35 ವರ್ಷಗಳಿಂದಲೂ ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾ ಬಂದಿದೆ. ಶಾಮನೂರು ಮನೆತನಕ್ಕೆ ಬೆಂಬಲ ನೀಡಿ ಗೆಲ್ಲಿಸಿದೆ. ಈ ಬಾರಿ ಮುಸ್ಲಿಂ ಸಮುದಾಯದಲ್ಲಿ ಅಥವಾ ಅಹಿಂದ ವರ್ಗದ ಯಾರಿಗೇ ಟಿಕೆಟ್ ನೀಡಲಿ, ನಾವು ಬೆಂಬಲಿಸುತ್ತೇವೆ. ಶಾಮನೂರು ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದಲ್ಲಿ ನಾವು ಅವರನ್ನು ಬೆಂಬಲಿಸುವುದಿಲ್ಲ, ತಕ್ಕ ಪಾಠ ಕಲಿಸುತ್ತೇವೆ. ಯಾರಿಗೂ ಮತ ನೀಡದೆ ನಾವು ನೋಟ ಚಲಾಯಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

“ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬಹಳ ಹಿಂದುಳಿದಿದೆ. ಯಾವುದೇ ಅಭಿವೃದ್ಧಿಯಲ್ಲಿ ಆಗಿಲ್ಲ. ರಸ್ತೆ, ಚರಂಡಿ, ನೀರು ಸೇರಿದಂತೆ ಸಮರ್ಪಕ ಮೂಲ ಸೌಲಭ್ಯಗಳಿಲ್ಲ. ಉತ್ತಮ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಗಳಿಲ್ಲ. ದಕ್ಷಿಣದಲ್ಲಿ ಶಾಸಕರ ಕಚೇರಿ ಕೂಡ ಇಲ್ಲ. ಶಾಸಕರನ್ನು ಕಾಣಬೇಕಾದರೆ 100-200 ರೂ. ಆಟೋಗೆ ಖರ್ಚು ಮಾಡಿ ಉತ್ತರ ಕ್ಷೇತ್ರಕ್ಕೆ ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯ ಅಥವಾ ಅಹಿಂದ ವರ್ಗಕ್ಕೆ ಟಿಕೆಟ್ ನೀಡಿದರೆ ನಾವು ಬೆಂಬಲಿಸಿ ಗೆಲ್ಲಿಸಿಕೊಂಡು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿಕೊಳ್ಳುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರಿಫ್ ಹಾಕಿ ಮಾತನಾಡಿ “35 ವರ್ಷದಿಂದ ಶಾಮನೂರು ಕುಟುಂಬಕ್ಕೆ ನಾವು ಬೆಂಬಲಿಸುತ್ತಾ ಬಂದಿದ್ದು, ಈ ಬಾರಿ ಕಾಂಗ್ರೆಸ್ ಮುಖಂಡರು, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಎಲ್ಲರೂ ಸೇರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿಸಬೇಕು. ಎಲ್ಲ ಸಮುದಾಯದವರು ನಮಗೆ ಬೆಂಬಲಿಸುತ್ತಾರೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದಿದ್ದಲ್ಲಿ ನಾವು ಸ್ಥಳೀಯ ಮುಸ್ಲಿಂ ಮುಖಂಡರು ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ತಕ್ಕ ಪಾಠ ಕಲಿಸಲಿದ್ದೇವೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಉಪಚುನಾವಣೆ ಟಿಕೆಟ್ ಗೆ ಬೆಂಬಲಿಗರ ಹೈಡ್ರಾಮ ಹಾಗೂ ಅಲ್ಪಸಂಖ್ಯಾತರ ಬಿಗಿಪಟ್ಟು

ತಂಜೀಂ ಕಮಿಟಿಯ ಮಾಜಿ ಕಾರ್ಯದರ್ಶಿ ಡಿ. ಸೈಯದ್ ಮಾತನಾಡಿ “ಬೆಂಗಳೂರಿಗೆ ಹೋಗಿದ್ದ ಮುಸ್ಲಿಂ ಮುಖಂಡರನ್ನು ಕರೆದು ವಿಚಾರಿಸಿದ್ದೇವೆ. ನಾವು ಆ ರೀತಿ ಹೇಳಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮುಸ್ಲಿಂ ಸಮುದಾಯದ ಪರ ಇರಬೇಕು ಎಂದು ಎಚ್ಚರಿಸಿದ್ದೇವೆ. ಈ ಬಾರಿ ಉಪಚುನಾವಣೆಯಲ್ಲಿ ಅಹಿಂದ ವರ್ಗ ಅಥವಾ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಶಾಮನೂರು ಕುಟುಂಬಕ್ಕೆ ಹೊರತುಪಡಿಸಿ ಅಹಿಂದ ವರ್ಗದ ಯಾರಿಗೆ ಟಿಕೆಟ್ ನೀಡಿದರೂ ನಾವು ಕಾಂಗ್ರೆಸ್ಗೆ ದುಡಿಯುತ್ತೇವೆ. ಶಾಮನೂರು ಕುಟುಂಬಕ್ಕೆ ಮತ್ತೆ ಟಿಕೆಟ್ ನೀಡಿದಲ್ಲಿ ನಾವು ತಕ್ಕ ಪಾಠ ಕಲಿಸುತ್ತೇವೆ. ಇದುವರೆಗೂ ಶಾಮನೂರು ಶಿವಶಂಕರಪ್ಪನವರನ್ನು ನಾವು ಗೆಲ್ಲಿಸಿದ್ದೇವೆ. ಅದೇ ರೀತಿ ನಮಗೆ ಟಿಕೆಟ್ ಕೊಡಿಸಿ ನೀವು ಗೆಲ್ಲಿಸಬೇಕು. ಕ್ಷೇತ್ರದಲ್ಲಿ 85,000 ದಷ್ಟಿರುವ ಮುಸ್ಲಿಮರು ವೋಟ್ ಹಾಕಲು ಸೀಮಿತವಲ್ಲ. ನಿಮಗೆ ಮಾತ್ರ ಯಾವಾಗಲೂ ಅಧಿಕಾರ ಬೇಕಾ? ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...