ದಾವಣಗೆರೆ | ಗೋಮಾಳ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ, ಸ್ಥಳೀಯ ಆಡಳಿತದ ದೌರ್ಜನ್ಯ ಆರೋಪ

Date:

ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ವ್ಯಾಪ್ತಿಯ ರವೀಂದ್ರನಾಥ್ ನಗರದ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ ಎನ್ನಲಾದ 38 ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನಗರಪಾಲಿಕೆ, ಜಿಲ್ಲಾಡಳಿತ, ಸ್ಥಳೀಯ ಆಡಳಿತದ ಪರವಾಗಿ ತಹಶೀಲ್ದಾರರು ನೂರಾರು ಪೊಲೀಸರು ಮತ್ತು ಜೆಸಿಬಿ ಯಂತ್ರಗಳೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕುಟುಂಬಗಳಿಗೆ ಸೂಕ್ತ ವಸತಿ, ಸೌಕರ್ಯ ವ್ಯವಸ್ಥೆ ಕಲ್ಪಿಸದೇ ಅಕ್ಷರಶಃ ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.

ಜೆಸಿಬಿಗಳು, ಟ್ರಾಕ್ಟರ್, ನೂರಾರು ಪೊಲೀಸರೊಂದಿಗೆ ಬೆಳ್ಳಂಬೆಳಗ್ಗೆ ಆರು ಗಂಟೆಗೆ ಆಗಮಿಸಿದ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸಾಮಾನು ಸರಂಜಾಮುಗಳನ್ನು ಹೊರಗೆ ಹಾಕಿ, ಹೆಂಚು ಚಾವಣಿ ಶೀಟುಗಳನ್ನು ಗೋಡೆಗಳನ್ನು ಕೆಡವಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

1002875040

ಈ ವೇಳೆ ಸ್ಥಳೀಯವಾಗಿ ತೆರವುಗೊಂಡ ನಿವಾಸಿಗಳು ಮಾತನಾಡಿ “ಕೋರ್ಟ್ ಅಕ್ಟೋಬರ್ 15ರ ಒಳಗೆ ಬೇರೆ ಸೂಕ್ತ ವಸತಿ ಸೌಕರ್ಯ ಕಲ್ಪಿಸಿ ತೆರವು ಗೊಳಿಸಲು ಸಮಯ ನೀಡಿದ್ದರೂ, ಅಲ್ಲಿಯವರೆಗೂ ಸಮಯ ನೀಡದೇ ಇಂದು ಬೆಳಗ್ಗೆ 6ಕ್ಕೆ ಬಂದು ಮನೆಯಲ್ಲಿದ್ದ ಮಕ್ಕಳು, ಮಹಿಳೆಯರು, ವಯೋವೃದ್ಧರನ್ನು ಹೊರಗೆ ಹಾಕಿ ದೌರ್ಜನ್ಯವೆಸಗಿದ್ದಾರೆ. ಸಮಯಾವಕಾಶಕ್ಕಾಗಿ ಬೇಡಿಕೊಂಡರೂ, ಮಹಿಳೆ, ವೃದ್ದರೆನ್ನದೇ ಎಳೆದಾಡಿ ತಳ್ಳಾಡಿ ಎಳೆದು ಹಾಕಲಾಗಿದೆ” ಎಂದು ಅಳಲು ತೋಡಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002875038

“ಮನೆಯ ಚಾವಣಿ ಶೀಟುಗಳನ್ನು, ಹೆಂಚು, ಇತರೆ ಮರಮುಟ್ಟು ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಬಿಟ್ಟಿಲ್ಲ. ಸಂಪೂರ್ಣವಾಗಿ ಎಲ್ಲವನ್ನೂ ನಾಶಗೊಳಿಸಿ ಅಕ್ಷರಶಃ ಬೀದಿಗೆ ತಳ್ಳಿದ್ದಾರೆ.‌ ಶುಕ್ರವಾರ ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸಮಯ ಕೇಳಿದ್ದು, ಅವರು ತೆರವು ಗೊಳಿಸಲು ಸಮಯ ನೀಡುತ್ತೇವೆ ಎಂದು ಹೇಳಿದ್ದು, ಅದನ್ನು ಪಾಲಿಸದೇ ಅಮಾನವೀಯವಾಗಿ ತೆರವು ಗೊಳಿಸಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಹೋರಾಟಗಾರರಾದ ಸಿಪಿಐನ ಮುಖಂಡ ಚಂದ್ರು ಆವರಗೆರೆ, ನೆರಳು ಸಂಘಟನೆಯ ಜಬೀನಾ ಖಾನಂ, ವಕೀಲ ರಾಘವೇಂದ್ರ, ಮಾಜಿ ಕಾರ್ಪೊರೇಟರ್ ಪಾಮೇನಳ್ಳಿ ನಾಗರಾಜ್ ಸೇರಿದಂತೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

1002875039

“ಬೇರೆ ಕಡೆ ಜಾಗ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಆಗ ಜಾಗದಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು.‌ ಖಾಲಿ ಜಾಗವಿದೆ. ಅಲ್ಲಿ ಮನೆ ಕಟ್ಟಲು ಯಾರು ನೆರವು ಒದಗಿಸಿಲ್ಲ. ಹೀಗೆ ಒಂದೇ ಕ್ಷಣದಲ್ಲಿ ಬೀದಿಗೆ ತಳ್ಳಿದರೆ, ಅಲ್ಲಿ ಏಕಾಏಕಿ ಮನೆ, ಸೂರು ಕಟ್ಟಿಕೊಳ್ಳಲು ಸಾಧ್ಯವೇ” ಎಂದು ಸ್ಥಳೀಯರು ಪ್ರಶ್ನಿಸಿದರು.

1002875036
ಬುಲ್ಡೋಜರ್ ಗೆ ಅಡ್ಡಲಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು

ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆ ಯಾರೊಬ್ಬರೂ ನೊಂದವರ ಪರವಾಗಿ ಬಂದಿಲ್ಲ.‌ ಚುನಾವಣೆ ಬಂದಾಗ ಮಾತ್ರ ನಾವು ಇವರಿಗೆ ನೆನಪಾಗುತ್ತೇವೆ. ನಗರಸಭೆ, ತಾಲೂಕು ಕಛೇರಿ ಪೊಲೀಸರು ಸೇರಿದಂತೆ ಅಧಿಕಾರಿಗಳು ಕೂಲಿ ಕಾರ್ಮಿಕರು, ಬಡ, ಸಾಮಾನ್ಯ ಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಹಿಡಿಶಾಪ ಹಾಕುತ್ತಾ ಇದ್ದುದು ಕಂಡು ಬಂದಿತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬ್ಯಾಂಕ್ ಖಾತೆಯಿಂದ ಹಣ ವಂಚನೆ: ಸೈಬರ್ ಪೊಲೀಸರಿಂದ ಅಂತಾರಾಜ್ಯ ಆರೋಪಿ ಬಂಧನ

ಜಯ್ಯಣ್ಣ, ಜಯಮ್ಮ, ನೇತ್ರಾವತಿ, ಹೊನ್ನಮ್ಮ, ರುದ್ರಪ್ಪ, ಜ್ಯೋತಿ, ಪಾಪಮ್ಮ, ಶಕುಂತಲಾ, ಅನಿತಾ, ರಾಜಪ್ಪ, ಮುರಿಗೆಮ್ಮ, ಬಸಮ್ಮ, ಸಾಕಮ್ಮ, ಗಿರಿಜಮ್ಮ, ರಂಜಿತಾ, ಲಕ್ಷ್ಮಿ, ಗಂಗಮ್ಮ, ಲಲಿತಮ್ಮ, ಬಸವರಾಜ, ವೀಣಾ, ನೀಲಮ್ಮ,, ಪ್ರೇಮ, ಚೈತನ್ಯ, ಹುಲಗಮ್ಮ, ಲಕ್ಷ್ಮಿ, ಗಿರೀಶ, ಖಾಸಿಂಸಾಬ್, ಮಂಜಮ್ಮ ಸೇರಿದಂತೆ ಇತರ ಮನೆ ಕಳೆದುಕೊಂಡ ಸದಸ್ಯರು ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...