ದಾವಣಗೆರೆ ಗುಂಡಿ ಮಹದೇವಪ್ಪ ಭವನದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವು ನಿಗದಿಯಂತೆ ಬೆಳಗ್ಗೆ 10.30 ಕ್ಕೆ ಪ್ರಾರಂಭವಾಗಬೇಕಿದ್ದು ಸಮಯ 12:30 ಆದರೂ ನಿಗದಿತ ಸಮಯಕ್ಕೆ ಪ್ರಾರಂಭವಾಗದೇ ಸಾವಿರಾರು ಜನ ಮಹಿಳೆಯರು ಸಾರ್ವಜನಿಕರು ಕಾದು ಕುಳಿತು ಇದರ ಮಧ್ಯೆ ಜನರನ್ನು ರಂಜಿಸಲು ಮತ್ತು ಸಮಾರಂಭದ ಪ್ರಾರಂಭದ ತನಕ ಕಾಯ್ದುಕೊಳ್ಳಲು ರಸಮಂಜರಿ ಕಾರ್ಯಕ್ರಮವಾಗಿ ಬದಲಾಗಿದೆ.

ಗ್ಯಾರಂಟಿ ಯೋಜನೆಯ ಅನುಷ್ಠಾನಗಳ ಕಾರ್ಯಕ್ರಮ ಮತ್ತು ಜಿಲ್ಲಾಮಟ್ಟದ ಕಾರ್ಯಗಾರಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದ್ದು ಇದರ ಅಂಗವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಕೂಡ ನಗರದ ಕೇಂದ್ರ ಭಾಗದ ಗುಂಡಿಮಹದೇವಪ್ಪ ಭವನದಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮ 10:30 ಕ್ಕೆ ನಿಗದಿಯಾಗಿದ್ದರೂ ಸಾವಿರಾರು ಮಹಿಳೆಯರು ಆಗಮಿಸಿದ್ದರೂ ಗಣ್ಯರ ಆಗಮನದ ವಿಳಂಬದಿಂದಾಗಿ ಕಾರ್ಯಕ್ರಮ ಆರಂಭವಾಗಿಲ್ಲ ಸುಮಾರು ಎರಡು-ಮೂರು ಗಂಟೆಗಳ ಕಾಲದಿಂದಲೂ ಮಹಿಳೆಯರು, ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳು ಕಾಯುತ್ತಿದ್ದರೂ ಕೆಲವು ಗಣ್ಯರು ಆಗಮಿಸಿಲ್ಲ ಎನ್ನುವುದು ಕಾರ್ಯಕ್ರಮ ವಿಳಂಬಕ್ಕೆ ಕಾರಣ.

ಈ ಮಧ್ಯೆ ಜನರನ್ನು ಮಹಿಳೆಯರನ್ನು ಹಿಡಿದಿಡಲು ಕಾರ್ಯಕ್ರಮದಲ್ಲಿ ಕೆಲವರು ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸುವ ಹರಸಾಹಸ ಮಾಡಬೇಕಾಗಿ ಬಂದಿತು.

ಈ ಮಧ್ಯೆ ಮೆರವಣಿಗೆ ಆಗಮಿಸದೇ ಕಾರ್ಯಕ್ರಮ ಸಮಯ ಮಧ್ಯಾಹ್ನ 12:40 ಆದರೂ ಆರಂಭವಾಗದ ಹಿನ್ನೆಲೆಯಲ್ಲಿ ಆಗಮಿಸಿದ ಮಹಿಳೆಯೊಬ್ಬರು “ನಾವು ಕೆಲಸ ಕಾರ್ಯಗಳನ್ನು ಬಿಟ್ಟು ಗ್ಯಾರಂಟಿ ಯೋಜನೆಗಳ ಮೇಲಿನ ಪ್ರೀತಿ, ವಿಶ್ವಾಸಕ್ಕೆ ಇಲ್ಲಿಗೆ ಆಗಮಿಸಿರುತ್ತೇವೆ. ಕಾರ್ಯಕ್ರಮ ಎರಡುವರೆ ಗಂಟೆ ತಡವಾದರೂ ಆರಂಭವಾಗಿಲ್ಲ ಮಹಿಳೆಯರ, ಸಾರ್ವಜನಿಕರ ಸಮಯಕ್ಕೆ ಬೆಲೆ ಇಲ್ಲವೇ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭದ್ರಾಮೇಲ್ದಂಡೆ ಕಾಮಗಾರಿ ಅನುದಾನ ಬಿಡುಗಡೆಗೆ ಜಗಳೂರಿನಲ್ಲಿ ಸಂಘಟನೆಗಳ ಪ್ರತಿಭಟನೆ
ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ತಡವಾಗಿ ಆರಂಭವಾಗುವುದು ಸಾಮಾನ್ಯ. ಆದರೆ ಎರಡೂವರೆ ಗಂಟೆಗಳ ಕಾಲ ತಡವಾದರೂ ಆರಂಭವಾಗದೆ ಜನರನ್ನು ಕಾಯಿಸಿ, ಜನರ ಸಮಯವನ್ನು ಹಾಳು ಮಾಡುವುದು ಎಷ್ಟು ಸರಿ ಎನ್ನುವುದು ಹಲವರ ಪ್ರಶ್ನೆ ಆಗಿತ್ತು? ಇದರಿಂದಾಗಿ ಬೇಸತ್ತ ಕೆಲವು ಯುವ ನಿಧಿ, ಗೃಹ ಲಕ್ಷಿ ಫಲಾನುಭವಿಗಳು ವಾಪಾಸ್ ಹಿಂತಿರುಗಿದರು.





