ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ದಾವಣಗೆರೆ ಜಿಲ್ಲೆ ಹರಿಹರ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಹರಿಹರ ತಾಲೂಕು ಸಂಘಟನಾ ಸಂಚಾಲಕರಾಗಿ ಚೌಡಪ್ಪ ಸಿ.ಭಾನುವಳ್ಳಿ, ಎಂ.ಎಸ್.ಮಂಜುನಾಥ ಕೊಕ್ಕನೂರು, ಸುರೇಶ್ ಡಿ. ಕೆಂಚನಹಳ್ಳಿ, ಯುವರಾಜ್ ಹೊಸಪಾಳ್ಯ, ತಿಮ್ಮಣ್ಣ ಕಡ್ಲೆಗೊಂದಿ, ರಾಮಪ್ಪ ಹಿಂಡಸಘಟ್ಟ, ಅಲೆಮಾರಿ ಸಮುದಾಯದ ದುರ್ಗಪ್ಪ, ಧರ್ಮರಾಜ್ ಹಳ್ಳಿಹಾಳ್, ಮಂಜಪ್ಪ ಗುಳದಹಳ್ಳಿ, ವಿಜಯ ಕುಮಾರ್ ಪಿ.ಎನ್. ಕೆ.ಬೇವಿನಹಳ್ಳಿ ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, “ಗ್ರಾಮೀಣ ಭಾಗದ ಅಹಿಂದ ಸಮುದಾಯದ ಜನರು ಈಗಲೂ ಸಂಕಷ್ಟದಲ್ಲಿದ್ದಾರೆ. ತಾಲೂಕಿನ ಹಲವಾರು ಗ್ರಾಮಗಳಲ್ಲಿ ಈಗಲೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ.
ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಸಂಘಟನೆಯ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರ ಹೆಸರಿಡುವುದು, ಅವರ ಹುಟ್ಟೂರಾದ ಹರಿಹರದ ಸೂಕ್ತ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಬೇಕಾಗಿದೆ” ಎಂದು ತಿಳಿಸಿದರು.
“ಸಮುದಾಯದ ವಿದ್ಯಾರ್ಥಿಗಳು, ನವ ಉದ್ಯಮಿಗಳು, ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಈ ಕುರಿತು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲು ನೂತನ ಪದಾಧಿಕಾರಿಗಳು ಶ್ರಮಿಸಬೇಕು” ಎಂದು ಹೇಳಿದರು.
“ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಗೆ ಮೀಸಲಿಟ್ಟ ಶೇ.24.1 ರಷ್ಟು ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು, ದುರ್ಬಳಕೆ ತಡೆಯಲು ಸೆಕ್ಷನ್ 7ಸಿ ರದ್ದುಗೊಳಿಸುವುದು, ಗ್ಯಾರಂಟಿ ಬಳಿಸಿದ ರೂ.25 ಸಾವಿರ ಕೋಟಿ ಅನುದಾನವನ್ನು ವಾಪಸ್ ನೀಡುವುದು ಸೇರಿದಂತೆ ವಿವಿದ ಬೇಡಿಕೆಗಳಿಗಾಗಿ ಮಾ.11 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನೆ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೊಸ ಕಾನೂನು ರದ್ದು ಹಾಗೂ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಎಐಟಿಯುಸಿ ಪ್ರತಿಭಟನೆ
ಸಭೆಯಲ್ಲಿ ಆಕಾಶ್ ಎಂ.ಆರ್., ಪುನೀತ್ ಎಂ.ಎಲ್. ಮಾರುತಿ, ಚಂದ್ರು, ಈರಣ್ಣ, ಮರಿಯಾ, ವಿಶ್ವ, ಅಭಿ, ಧನುಷ್, ಅರುಣ್, ಡಿ.ಹನುಮಂತಪ್ಪ, ಪ್ರಕಾಶ್, ನಿಂಗಪ್ಪ, ದುರುಗಪ್ಪ, ವಿನಾಯಕ, ಗಿರೀಶ್, ಮಧು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





