120 ಅಡಿ ಅಗಲ ಇರುವ ರಾಜಕಲುವೆಯಲ್ಲಿ ಕೇವಲ 18 ರಿಂದ 20 ಅಡಿ ಅಗಲಕ್ಕೆ ಚರಂಡಿಗಾಗಿ ತಡೆಗೋಡೆ ನಿರ್ಮಿಸುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಈ ಕಾಮಗಾರಿ ದಾವಣಗೆರೆ ಜಿಲ್ಲೆ ಹರಿಹರ ನಗರದ ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸುತ್ತಿದ್ದು ಕಾಲೇಜು ಹಿಂಭಾಗದ ಎಸ್ ಜೆ ವಿ ಪಿ ಕಾಲೇಜು ಹಿಂಭಾಗದಿಂದ ಕಟ್ಟುತ್ತಿರುವ ಈ ರಾಜಕಾಲುವೆ ಒತ್ತುವರಿಯಾಗಲು ಅಧಿಕಾರಿಗಳೇ ಸಹಕರಿಸುತ್ತಿದ್ದಾರೆಯೇ ಎನ್ನುವ ಅನುಮಾನ ದಾವಣಗೆರೆ ಜಿಲ್ಲೆ ಹರಿಹರ ನಗರದ ಸಾರ್ವಜನಿಕರಿಂದ ಕೇಳಿ ಬಂದಿದೆ.

ನಗರಸಭೆ ಮಾಜಿ ಸದಸ್ಯ ಎಂ.ಎಸ್. ಬಾಬುಲಾಲ್ ಮಾಧ್ಯಮಗಳಿಗೆ ಮಾತನಾಡಿ “ನಗರದ ಪೂರ್ವ ಭಾಗದಿಂದ ಬರುವ ಮಳೆ ನೀರು, ಬಸಿಯುವ ನೀರು ಹಾಗೂ ದೇವರಬೆಳಕೆರೆ ಕಾಲುವೆಯ ಹೆಚ್ಚುವರಿ ನೀರು ರಾಜಕಾಲುವೆಗೆ ಸೇರಿ ನಂತರ ತುಂಗಭದ್ರಾ ನದಿಗೆ ಹರಿಯುತ್ತದೆ. ಆದರೆ ಸಹಜವಾಗಿ ನೀರಿನ ಹರಿವು ಮಾರ್ಗಗಳಲ್ಲಿ ಒತ್ತುವರಿ ಆಗಿರುವುದರಿಂದ ಕಾಲುವೆಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಿಂದೆ ಮಳೆಗಾಲದಲ್ಲಿ ಈ ಹಳ್ಳದಲ್ಲಿ ಅಪಾರ ನೀರು ಹರಿದು ಜನರು ಸ್ನಾನ, ಈಜು ಹಾಗೂ ನಿತ್ಯ ಬಳಕೆಯ ಕೆಲಸಗಳನ್ನು ಮಾಡುತ್ತಿದ್ದರು. ಈಗಾಗಲೇ ಇಲ್ಲಿ ಭೂಮಿ ಒತ್ತುವರಿಯಾಗಿದೆ” ಎಂದು ಆರೋಪಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ “₹4.82 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಈ ಸ್ಥಳದ ಬದಲು ಜೆ.ಸಿ. ಬಡಾವಣೆಯ 1ನೇ ಮುಖ್ಯರಸ್ತೆಯ 4, 5, 6ನೇ ಕ್ರಾಸ್ ಬಳಿ ಕೈಗೊಂಡಿದ್ದರೆ ಜನರಿಗೆ ಹೆಚ್ಚು ಉಪಯೋಗವಾಗುತ್ತಿತ್ತು. ಜೆಸಿ ರಸ್ತೆಯ ಐದನೇ ಕ್ರಾಸ್ ನಲ್ಲಿರುವ ಸೇತುವೆಯನ್ನು ಎತ್ತರಿಸಬೇಕು. ಉತ್ತಮ ರಸ್ತೆ ನಿರ್ಮಿಸಬೇಕು ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎನ್ನುವ ಜನರ ಬೇಡಿಕೆಯನ್ನು ಬದಿಗೊತ್ತಿ ಈಗ ಕಾಮಗಾರಿ ನಡೆಸಲಾಗುತ್ತದೆ” ಎಂದು ಆರೋಪಿಸಿದರು.
e ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಅನ್ಯಾಯ ವಿರೋಧಿಸಿ ದಲಿತರ ಹೋರಾಟಕ್ಕೆ ಕಮ್ಯುನಿಸ್ಟ್ ಪಕ್ಷ ಬೆಂಬಲ
“ಪಿ.ಬಿ. ರಸ್ತೆ ಪಕ್ಕದಿಂದ ಹರಿಯುವ ಕಾಲುವೆಯನ್ನು ಮುಚ್ಚಿ ಈಗಾಗಲೇ ಹಲವು ಎಕರೆ ಜಮೀನು ಭೂಗಳ್ಳರ ಪಾಲಾಗಿದೆ; ಕಾಲುವೆ ಗಾತ್ರವನ್ನು ಕಿರಿದಾಗಿಸಿ ಇನ್ನಷ್ಟು ಸರ್ಕಾರಿ ಜಮೀನು ಒತ್ತುವರಿ ಮಾಡಲು ಈ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.





