ನೂತನ ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ (ಡಿಐಸಿಸಿಐ-ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ) ಜಿಲ್ಲಾ ಪ್ರಧಾನ ಕಚೇರಿಯನ್ನು ದಿನಾಂಕ ಎಪ್ರಿಲ್ 19, 2025ರ ಶನಿವಾರ ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ನಗರದ ಸರಸ್ವತಿ ನಗರದ ದುರ್ಗಾಂಬಿಕಾ ಸ್ಕೂಲ್ ಎದುರಿನ ಮನೀಶ್ ಕಾಂಪ್ಲೆಕ್‌ನ ಒಂದನೇ ಮಹಡಿಯಲ್ಲಿ ಉದ್ಘಾಟಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಾವಣಗೆರೆ ಜಿಲ್ಲೆಯ ಪ್ರಧಾನ ಕಛೇರಿಯನ್ನು ನೂತನವಾಗಿ ಉದ್ಘಾಟಿಸಲಾಗುತ್ತಿದ್ದು, ಕಚೇರಿಯ ಉದ್ಘಾಟನೆಯನ್ನು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪನವರು ನೆರವೇರಿಸಲಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರರ 134ನೇ ಜಯಂತ್ಯುತ್ಸವವನ್ನು ಆಚರಿಸಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ್ ಕಬ್ಬೂರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆಯ ಸಹೋದರನ ಹಸ್ತಕ್ಷೇಪ, ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಬೀಗ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಐಸಿಸಿಐ ಬುಡಕಟ್ಟು ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ರಾಜಾನಾಯಕ ವಹಿಸಲಿದ್ದಾರೆ. ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಮಂಜಣ್ಣ ಆಶಯ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಸದಸ್ಯ ವೀರೇಶ್ ಕೆ.ಎಸ್., ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಕೇಶ್ ಶಾನುಭೋಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಪರಶುರಾಮ್, ಪಾಲಿಕೆ ಸದಸ್ಯ ಮಂಜಾನಾಯ್ಕ, ಟಿವಿ 9 ವರದಿಗಾರರಾದ ಬಸವರಾಜ ದೊಡ್ಡಮನಿ ಆಗಮಿಸಲಿದ್ದು, ಡಿಐಸಿಸಿಐ ಜಿಲ್ಲಾಧ್ಯಕ್ಷ ಮಂಜುನಾಥ್ ವೈ. ಕಣ್ಣೂರು, ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿ. ಗೋಶಾಲೆ ಉಪಸ್ಥಿತರಿರುವರು.





