ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪವನ್ನು ಸೌಲಭ್ಯ ಒದಗಿಸಲು ಕೋರಿ ಕರ್ನಾಟಕ ಜನಶಕ್ತಿಯ ದಾವಣಗೆರೆ ಘಟಕದ ಮುಖಂಡರು ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “ದಾವಣಗೆರೆ ನಗರದ ಬೂದಾಳ್ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಮೆಹಕ್ ಶಾದಿ ಮಹಲ್ ಮುಂಭಾಗದ ತಾಜ್ ಲೇಔಟ್ 1ನೇ ಮುಖ್ಯ ರಸ್ತೆಗೆ ಹೊಂದಿಕೊಂಡ ಹೆಲಿಕಾಪ್ಟರ್ ಲೇ ಔಟ್ ನಲ್ಲಿ 128 ನಿವೇಶನಗಳಿದ್ದು, ಈಗಾಗಲೇ 15 ನಿವೇಶನದಾರರು ಮನೆಯನ್ನು ಕಟ್ಟಿಕೊಂಡಿದ್ದು ಬಿ ಖಾತೆಯನ್ನು ಕೂಡ ಪಡೆದಿದ್ದಾರೆ. ಆದರೆ ಈ ಪ್ರದೇಶದಲ್ಲಿ ಮೂಲಸೌಕರ್ಯಗಳಿಲ್ಲದೇ ಜನ ಸಮಸ್ಯೆ ಎದುರಿಸುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕಳೆದ 2 ವರ್ಷಗಳಿಂದ ಇಲ್ಲಿನ ಜನರಿಗೆ ದಾರಿಯಿಲ್ಲ, ದಿನನಿತ್ಯ ಬಳಸುವ ಹಾಗೂ ಕುಡಿಯುವ ನೀರಿನ ಸಂಪರ್ಕವು ಕಲ್ಪಿಸಿಲ್ಲ, ಮತ್ತು ರಾತ್ರಿ ಸಮಯದಲ್ಲಿ ಬೀದಿ ದೀಪಾಗಳಿಲ್ಲದೆ ಮಕ್ಕಳು ಮತ್ತು ಹಿರಿಯ ನಾಗರೀಕರು ಓಡಾಡಲು ತೊಂದರೆ ಆಗುತ್ತಿದೆ. ಕೆಲವರು ರಸ್ತೆಯಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳಾದ ಘಟನೆಗಳೂ ನಡೆದಿವೆ. ನಿರಂತರ ಮಳೆಯಿಂದಾಗಿ ಗಿಡ-ಗಂಟಿಗಳು ಪೊದೆಗಳು ಬೆಳೆದು, ಹಾವುಗಳ ಹಾವಳಿಯು ಜಾಸ್ತಿ ಆಗಿದೆ. ಅದರಿಂದ ಮಹಾನಗರ ಪಾಲಿಕೆಯಿಂದ ನಿವೇಶನದಾರರಿಗೆ 24*7 ಕುಡಿಯುವ ನೀರಿನ ವ್ಯವಸ್ಥೆ, ಸುರಕ್ಷತವಾಗಿ ಓಡಾಡಲು ರಸ್ತೆ ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು” ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? http://ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶಾದ್ಯಂತ ಮದ್ಯ ನಿಷೇಧಕ್ಕೆ, ಮಹಿಳಾ ಗ್ರಾಮ ಸಭೆಗೆ ಪರಮಾಧಿಕಾರಕ್ಕೆ ಒತ್ತಾಯ
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶಾದ್ಯಂತ ಮದ್ಯ ನಿಷೇಧಕ್ಕೆ, ಮಹಿಳಾ ಗ್ರಾಮ ಸಭೆಗೆ ಪರಮಾಧಿಕಾರಕ್ಕೆ ಒತ್ತಾಯ

ಕರ್ನಾಟಕ ಜನಶಕ್ತಿಯ ಮುಖಂಡರಾದ ಸೈಯದ್ ಅಸ್ಪಾಕ್, ಪವಿತ್ರ, ಸತೀಶ್ ಅರವಿಂದ್, ಜಾಫರ್ ಶರೀಪ್, ಸಮೀರ್, ರಫೀಕ್ ಖಾನ್, ರಿಯಾಜ್, ಮೆಹಬೂಬ್, ಬುಡೇನ್ ಸಾಬ್, ಮಾಹೀರ್ ಸೇರಿದಂತೆ ಹಲವಾರು ನಿವಾಸಿಗಳು ಹಾಜರಿದ್ದರು.





