ದಾವಣಗೆರೆ | ದಲಿತ ಸಂಘಟನೆಗಳ ಮುಖಂಡರಿಂದ ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ ಕೃಷ್ಣಪ್ಪನವರ 88ನೇ ಜನ್ಮದಿನ ಆಚರಣೆ

Date:

ಕರ್ನಾಟಕದ ಅಂಬೇಡ್ಕರ್ ಎಂದೇ ಹೆಸರಾಗಿರುವ ಸಾಮಾಜಿಕ, ದಲಿತ ಹಕ್ಕುಗಳ ಹೋರಾಟಗಾರ, ದಲಿತ ಸಾಹಿತ್ಯ ಸಂಘಟನೆಯ ಪ್ರವರ್ತಕ, ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ದಲಿತ ಚೇತನ ಪ್ರೊ.ಬಿ ಕೃಷ್ಣಪ್ಪನವರ 88ನೇ ಜನ್ಮದಿನಾಚರಣೆಯನ್ನು ದಾವಣಗೆರೆ ಜಿಲ್ಲೆ ಹರಿಹರ ನಗರದ ರಾಷ್ಟ್ರೀಯ ಹೆದ್ದಾರಿ ಬಳಿಯ ಮೈತ್ರಿವನದ ಅವರ ಸಮಾದಿ ಬಳಿ ದಲಿತ ಸಂಘಟನೆಗಳು ಹೋರಾಟಗಾರರು ಸೇರಿ ಆಚರಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಿದರು.

IMG 20250609 WA0083

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ, “ಎಲ್ಲಾ ದಲಿತ ಸಂಘಟನೆಗಳು ಹುಟ್ಟಲು ಪ್ರೊ.ಕೃಷ್ಣಪ್ಪನವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಮೂಲಕಾರಣ. ದಲಿತರ, ಶೋಷಿತರ ಹಕ್ಕುಗಳಿಗೆ ಹೋರಾಟ ನಡೆಸಿ ಸ್ವಾಭಿಮಾನದ ಬದುಕು ತಿಳಿಸಿ ಕೊಟ್ಟವರು. ಅವರ ಹೋರಾಟ, ಆದರ್ಶಗಳೇ ಇಂದಿನವರಿಗೆ ಸ್ಪೂರ್ತಿ” ಎಂದು ಸ್ಮರಿಸಿದರು.

1002126274

ಈ ವೇಳೆ ಮುಖಂಡರಾದ ಹರಿಹರ ಮಹಾಂತೇಶ, ಹರೋಸಾಗರ ಸಿದ್ದರಾಮಣ್ಣ, ವಿಜಯಲಕ್ಷ್ಮಿ, ನಾಗರಾಜ್ ಚಿತ್ತಾನಳ್ಳಿ, ಪ್ರದೀಪ್, ದಲಿತ ವಾಣಿಜ್ಯ ಮಂಡಳಿ ಅಧ್ಯಕ್ಷ ಮಂಜು ಕಬ್ಬೂರು, ಶಾಂತಿನಗರ ಮಂಜುನಾಥ್, ಹುಲಿಕಟ್ಟೆ ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002126275 1

ದಲಿತ ಚೇತನ ಪ್ರೊ.ಬಿ ಕೃಷ್ಣಪ್ಪ;
ಜೂನ್ 9, 1938ರಲ್ಲಿ ಹರಿಹರದಲ್ಲಿ ಜನಿಸಿದ ಪ್ರೊ.ಬಸಪ್ಪ ಕೃಷ್ಣಪ್ಪನವರು ಸುಮಾರು ಮೂವತ್ತು ವರ್ಷಗಳ ಕಾಲ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ನಿವೃತ್ತರಾದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬಾಲ್ಯ ವಿವಾಹಕ್ಕೆ ಯತ್ನ ಮದುವೆ ಬೇಡವೆಂದು ಅಂಗಲಾಚಿದ ಬಾಲಕಿಯ ರಕ್ಷಣೆ; ಐವರ ಮೇಲೆ ದೂರು ದಾಖಲು

70ರ ದಶಕದಲ್ಲಿ ಬಸವಲಿಂಗಪ್ಪ ಸಚಿವರಾಗಿದ್ದಾಗ ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಕರೆದಿದ್ದು, ನಂತರದಲ್ಲಿ ಆದ ಬೆಳವಣಿಗೆಗೆಳಿಂದ ಪ್ರಭಾವಿತರಾದ ಕೃಷ್ಣಪ್ಪನವರು
ಸಮಾನ ಮನಸ್ಕರೊಂದಿಗೆ ದಲಿತ ಸಾಹಿತ್ಯ ಚಳುವಳಿ ಹುಟ್ಟಿಗೆ ಕಾರಣರಾದರು.‌ ಮುಂದೆ ಅದು ದಲಿತ ಸಂಘರ್ಷ ಸಮಿತಿಯ ರೂಪ ತಳೆದು ಅದರ ಸಂಸ್ಥಾಪಕ ಅಧ್ಯಕ್ಷರಾಗಿ ದಲಿತ ಹಕ್ಕುಗಳಿಗೆ, ಅಸ್ಪೃಶ್ಯತೆ ನಿವಾರಣೆಗೆ, ಶೋಷಣೆ ತಡೆಯಲು ಅನೇಕ ಹೋರಾಟ ಕೈಗೊಂಡರು.‌ ಕೇವಲ ದಲಿತರಲ್ಲದೇ ಎಲ್ಲಾ ವರ್ಗದ ಬಡ ಜನರಿಗಾಗುವ ಶೋಷಣೆ, ದೌರ್ಜನ್ಯವನ್ನು ಖಂಡಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೃಷ್ಣಪ್ಪನವರು ಕಾರ್ಯನಿರ್ವಹಿಸಿದ್ದು ಅವರ ಹಿರಿಮೆ.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...