ದಾವಣಗೆರೆ | ಪಿಯುಸಿ ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ 3ನೇ ರ್ಯಾಂಕ್, 21ನೇ ಸ್ಥಾನಕ್ಕೆ ಕುಸಿತ.‌

Date:

ಮಂಗಳವಾರ ರಾಜ್ಯಾದ್ಯಂತ ಪದವಿಪೂರ್ವ ಶಿಕ್ಷಣ ಇಲಾಖೆಯ (ಪಿಯುಸಿ) ಫಲಿತಾಂಶ ಪ್ರಕಟವಾಗಿದ್ದು, ವಿಧ್ಯಾರ್ಥಿಗಳು ಫಲಿತಾಂಶದ ಸಂಭ್ರಮದಲ್ಲಿದ್ದಾರೆ. ಈ ನಡುವೆ ದಾವಣಗೆರೆಯ ಪ್ರತಿಷ್ಠಿತ ಹಲವು ಕಾಲೇಜುಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದು ವಿದ್ಯಾರ್ಥಿಗಳು ರ್ಯಾಂಕ್ ಗಳನ್ನು ಪಡೆದಿದ್ದಾರೆ. ಒಟ್ಟಾರೆ 2024-25ನೇ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶ 69.45 ಕ್ಕೆ ಕುಸಿದಿದ್ದು , ಕಳೆದ ಬಾರಿ ಶೇಕಡ 80.96 ರಷ್ಟು ದಾಖಲಾಗಿತ್ತು.

ದಾವಣಗೆರೆಯ ಪ್ರತಿಷ್ಠಿತ ಸರ್ ಎಂ ವಿ ಕಾಲೇಜಿನ ವಿದ್ಯಾರ್ಥಿನಿ ‘ಅದಿತಿ’ ವಿಜ್ಞಾನ ವಿಭಾಗದಲ್ಲಿ 597 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.‌ ವೈದ್ಯ ಹಿನ್ನಲೆಯ ಕುಟುಂಬದಿಂದ ಬಂದಿರುವ ಅವರು ಮುಂದೆ ವೈದ್ಯರಾಗಿ ಸೇವೆ ಸಲ್ಲಿಸುವ ಅಭಿಲಾಷೆಯಿದ್ದು, ಉತ್ತಮ ಓದು, ಪೋಷಕರ ಮತ್ತು ಬೋಧಕರ ಸಹಕಾರ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದಿದ್ದಾರೆ.

ತಂದೆ ಇಲ್ಲದೆ, ಕಿವಿಯ ಆರೋಗ್ಯ ಸಮಸ್ಯೆಯಿಂದ ಬಳಲುವ ತಾಯಿ, ಕುಟುಂಬಕ್ಕೆ ಆಧಾರವಾಗಿರುವ ಅಣ್ಣನ ಸಣ್ಣ ಸಂಪಾದನೆಯಲ್ಲಿ ಪ್ರತಿನಿತ್ಯ ಹರಿಹರದಿಂದ ದಾವಣಗೆರೆಗೆ ಬಸ್ನಲ್ಲಿ ಸಂಚರಿಸಿ ಕಷ್ಟಪಟ್ಟು ಅಭ್ಯಾಸ ಮಾಡಿ, ಇಂಗ್ಲೀಷ್ ವಿಷಯದಲ್ಲಿ 93 ಅಂಕ ಪಡೆದು, ಉಳಿದೆಲ್ಲ ವಿಷಯದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ 593 (98.83) ಅಂಕ ಗಳಿಸಿರುವ ಸಾಕ್ಷಿ ಕೆ.ಎಲ್. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆಗೈದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಿಯುಸಿಯಲ್ಲಿ ಅನುತ್ತೀರ್ಣ, ದಾವಣಗೆರೆ ಖಾಸಗಿ ಕಾಲೇಜು ವಿಧ್ಯಾರ್ಥಿನಿ ಆತ್ಮಹತ್ಯೆ.‌

‘ಕೇಂದ್ರದ ಪಠ್ಯಪುಸ್ತಕಗಳನ್ನು ಸತತವಾಗಿ ಅಭ್ಯಾಸ ಮಾಡುತ್ತಿದ್ದ ಸಾಕ್ಷಿ ಪ್ರತಿನಿತ್ಯ ಹರಿಹರದಿಂದ ದಾವಣಗೆರೆ ಸರ್ ಎಂ ವಿ ಕಾಲೇಜಿಗೆ ಓಡಾಡುತ್ತಲೇ ಮುಂಜಾನೆ ಎರಡು ಗಂಟೆ, ಸಂಜೆ ಐದು ಗಂಟೆ ವಿದ್ಯಾಭ್ಯಾಸದ ಜೊತೆಗೆ ಧ್ಯಾನವನ್ನು ಹವ್ಯಾಸ ಮಾಡಿಕೊಂಡಿದ್ದು ಹೆಚ್ಚು ಅಂಕಗಳಿಸಲು ಸಾಧ್ಯವಾಗಿದೆ. ಚಾರ್ಟೆಡ್ ಅಕೌಂಟೆಂಟ್ ವಿಭಾಗದಲ್ಲಿ ಹೆಚ್ಚಿನ ಅವಕಾಶಗಳಿದ್ದು ಸಿಎ ಮಾಡುವ ಕನಸು ಇದೆ’ ಎಂದಿದ್ದಾರೆ.

ಸರ್ ಎಂ ವಿ ಕಾಲೇಜಿನ ಎನ್.ಎಂ. ಜಯಲಕ್ಷ್ಮೀ, ರಾಹುಲ್ ಆರ್. ಮಠದ, ಸಿದ್ದಗಂಗಾ ಪಪೂ ಕಾಲೇಜಿನ ಎನ್. ರವಿಕಿರಣ ಹಾಗೂ ದಿ ಟೀಮ್ ಅಕಾಡೆಮಿ ಕಾಲೇಜಿನ ಸೃಜನ ಎಸ್. ಗೌಡ ವಿಜ್ಞಾನ ವಿಭಾಗದಲ್ಲಿ ತಲಾ 595 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಶ್ವಚೇತನ ಪಪೂ ಕಾಲೇಜಿನ ಜಿ.ವಿ. ಶ್ರೇಯಾ, ಸರ್.ಎಂ. ವಿ ಕಾಲೇಜಿನ ಎ. ನಂದನಾ ತಲಾ 594 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

ದಾವಣಗೆರೆಯ ಆರ್.ಜಿ. ಪಪೂ ಕಾಲೇಜಿನ ಧನ್ಯಾ ಎಂ. ಪಾಲ್ 589 ಅಂಕದೊಂದಿಗೆ ದ್ವಿತೀಯ ದವನ್ ಕಾಲೇಜಿನ ಅಮಿಷಾ ಪಿ. ಪದಗಳ್ 588 ಅಂಕ ಸಂಪಾದಿಸಿ ತೃತೀಯ ಸ್ಥಾನ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಜಗಳೂರಿನ ನಲಂದಾ ಪಪೂ ಕಾಲೇಜಿನ ಎಲ್. ಕಾವ್ಯ 565 ( ಶೇ. 94.16) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜಗಳೂರಿನ ಸರ್ಕಾರಿ ಪಪೂ ಕಾಲೇಜಿನ ಕಾಲೇಜಿನ ಜಿ.ಜಿ. ಸಿದ್ದೇಶ್ 559 ಅಂಕದೊಂದಿಗೆ ದ್ವಿತೀಯ, ಅಥಣಿ ಸಂಯುಕ್ತ ಪಪೂ ಕಾಲೇಜಿನ ಕುಸುಮಾ ಎಸ್. ಮಾಳಿಗೇರ್ 557 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 3790 ವಿಧ್ಯಾರ್ಥಿಗಳಲ್ಲಿ 2296 ವಿಧ್ಯಾರ್ಥಿಗಳು (60.58) ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.82.89 ರಷ್ಟು ಫಲಿತಾಂಶ ಲಭಿಸಿದ್ದು , 11402 ಅಭ್ಯರ್ಥಿಗಳ ಪೈಕಿ 9451 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ನೋಂದಾಯಿತ 3969 ವಿಧ್ಯಾರ್ಥಿಗಳಲ್ಲಿ 1561 ವಿದ್ಯಾರ್ಥಿಗಳು (ಶೇ.39.33) ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 21ನೇ ಸ್ಥಾನ ಪಡೆದು, ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ 19161 ಅಭ್ಯರ್ಥಿಗಳ ಪೈಕಿ 13308 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ

ಪವಿತ್ರ ರಂಜಾನ್ (ಈದ್ ಉಲ್ ಫಿತುರ್) ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದ...

ದಾವಣಗೆರೆ | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಮರ್ಥ್ ಶಾಮನೂರು: ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್...

ದಾವಣಗೆರೆ | ದಕ್ಷಿಣ ಕ್ಷೇತ್ರ ಉಪಚುನಾವಣೆ; ಎಸ್ ಟಿ ಮೋರ್ಚಾದ ಶ್ರೀನಿವಾಸ್ ಗೆ ಒಲಿದ ಬಿಜೆಪಿ ಟಿಕೆಟ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮ...

ದಾವಣಗೆರೆ | ಒಳಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯಕ್ಕೆ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಹೋರಾಟ

ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠವು ಒಳ ಮೀಸಲಾತಿ ವರ್ಗೀಕರಣ ಹಾಗೂ ಜಾರಿಯ...