ಭಾರತೀಯ ಕಾರ್ಮಿಕ ಸಂಘಗಳ ಒಕ್ಕೂಟದ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು ಸಮಿತಿಯಿಂದ ಚನ್ನಗಿರಿ ನಗರದ ಮಿಲತ್ ಶಾದಿಮಹಲ್ ನಲ್ಲಿ ಪ್ರಥಮ ತಾಲೂಕು ಸಮ್ಮೇಳನ ನಡೆಸಲಾಯಿತು. ಸಮ್ಮೇಳನಕ್ಕೆ ಮುನ್ನಾ ಬೆಳಗ್ಗೆ 11 ಗಂಟೆಗೆ ಚನ್ನಗಿರಿ ತಾಲೂಕು ಕ್ರೀಡಾಂಗಣದಿಂದ ಮಿಲತ್ ಶಾದಿ ಮಹಲ್ ವರೆಗೆ ಬೃಹತ್ ಮೆರವಣಿಗೆ ಮೂಲಕ ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ಬಿಸಿಯೂಟದ ಕಾರ್ಯಕರ್ತರು ಸೇರಿದಂತೆ ನೂರಾರು ಜನ ಮೆರವಣಿಗೆಯಲ್ಲಿ ಸಾಗಿದರು.

ಪ್ರಥಮ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಶ್ರೀಗಳು “ಅಂಗನವಾಡಿ ಬಿಸಿ ಊಟದ ಕಾರ್ಯಕರ್ತರು ಮಕ್ಕಳನ್ನು ಲಾಲನೆ ಮಾಡುವ ಜೊತೆಗೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ. ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಏಳಿಗೆಗಾಗಿ ಉತ್ತಮ ಕೆಲಸ ಮಾಡುತ್ತಿವೆ” ಎಂದು ಶ್ಲಾಘಿಸಿದರು.

ಭಾರತೀಯ ಕಾರ್ಮಿಕ ಸಂಘಗಳ ಒಕ್ಕೂಟದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಮರಿಯಮ್ಮನವರ್ ಮಾತನಾಡಿ “ಸರ್ಕಾರಗಳು ಕಷ್ಟಪಟ್ಟು ದುಡಿಯುವ ಅಂಗನವಾಡಿ, ಬಿಸಿಯೂಟದ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಿಲ್ಲ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಗಮನ ಹರಿಸಲಿಲ್ಲ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರವನ್ನು ಗಮನಸೆಳೆಯುವ ದೊಡ್ಡ ಹೋರಾಟವನ್ನು ಕೈಗೊಳ್ಳಬೇಕಾಗಿದೆ. ಕಾರ್ಮಿಕರ ಮತ್ತು ಕಾರ್ಯಕರ್ತರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೋರ್ಟ್ ಗೆ ಬಾಂಬ್ ಬೆದರಿಕೆ ಸಂದೇಶ; ಪೊಲೀಸ್ ತನಿಖೆ ಬಳಿಕ ಕಲಾಪ ಆರಂಭ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಎಫ್ ಟಿ ಯು ಜಿಲ್ಲಾ ಸಂಚಾಲಕ ಮಹಮದ್ ರಫೀಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಶನ್ ತಾಲೂಕು ಘಟಕದ ಕೆಪಿ ಪುಷ್ಪಾವತಿ ಕಗತೂರು, ಸುಮಾ, ಐ ಎಫ್ ಟಿ ಯು ರಾಜ್ಯ ಸಮಿತಿಯ ಶಾರದಮ್ಮ, ಪೀರ್ ಜಾತೆ, ಮಹಮ್ಮದ್ ಬಾಷಾ, ಟಿಎಸ್ ನಾಗರಾಜ್, ಅವರಗೆರೆ ವಾಸು, ಜಿಲ್ಲಾ ಸಮಿತಿಯ ಸರ್ವಮ್ಮ, ಮಂಜುನಾಥ್, ಲತಾ ಹಿರೇಮಠ, ರಾಜೇಶ್ವರಿ ಪಾಟೀಲ್, ನದೀಮ್ ಖಾನ್, ಮೊಹಮ್ಮದ್ ಅಫ್ತಾಬ್, ಕುಮಾರ್, ಮುಕ್ತಿಯರ್, ಮನೋಹರ್, ರಮೇಶ್, ಸವಿತಾ, ಗೀತಾ ರಾಣಿ, ಸಿ ವೆಂಕಟೇಶ್ ಸೇರಿದಂತೆ ಅಂಗನವಾಡಿ , ಆಶಾ ಮತ್ತು ಕಾರ್ಯಕರ್ತರು ಇದರ ಕಟ್ಟಡ ಕಾರ್ಮಿಕರ ಅಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.





