ಡಿಸೆಂಬರ್ 28, 2025 ರ ಭಾನುವಾರ ಬೆಳಗ್ಗೆ 9:00 ಗಂಟೆಗೆ ಮಾಜಿ ಸೈನಿಕರಿಂದ ಯೂತ್ ಫಾರ್ ನೇಷನ್ ಮತ್ತು ಸ್ವದೇಶಿ ಜಾಗರಣ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿ ಕೊಂಡಿರುವ “ಸ್ವದೇಶಿ ಉದ್ಯಮ ಜಾಗೃತಿ ಸೈಕಲ್ ಜಾಥಾ” ದಾವಣಗೆರೆ ಜಿಲ್ಲೆ ಹೊನ್ನಾಳಿ ನಗರಕ್ಕೆ ಆಗಮಿಸುತ್ತಿದೆ. ಎಲ್ಲರೂ ಆಗಮಿಸಿ ಮಾಜಿ ಸೈನಿಕರ ಸ್ವದೇಶಿ ಉದ್ಯಮ ಜಾಗೃತಿ ಸೈಕಲ್ ಜಾಥಾವನ್ನು ಆದರದಿಂದ ಸ್ವಾಗತಿಸಬೇಕು ಎಂದು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವಾಸಪ್ಪ ಮನವಿ ಮಾಡಿದರು.
ಸಾರ್ವಜನಿಕರು, ಮಾಜಿ ಸೈನಿಕರೆಲ್ಲರೂ ಬರಬೇಕು ಎಂಬ ಎಂದು ಸಂಘದ ಪರವಾಗಿ ವಿನಂತಿಸಿದ್ದಾರೆ. ಅಲ್ಲದೇ ವಿಶೇಷವಾಗಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಮಾಜಿ ಸೈನಿಕರಾದ ರಮೇಶ್ ದಿಡಗೂರ್ ಸಹ ಈ ಒಂದು ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಿರುವುದು ತಂಡದಲ್ಲಿರುವುದು ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಅನೈರ್ಮಲ್ಯ; ಕುಡುಕರ ತಾಣವಾಗಿ ಬದಲಾದ ಅಂಗಳ
ಮಾಜಿ ಸೈನಿಕರ ಸ್ವದೇಶಿ ಉದ್ಯಮ ಜಾಗೃತಿ ಸೈಕಲ್ ಜಾಥಾವನ್ನು ಸೈನಿಕರಕ್ಷೇಮಾಭಿವೃದ್ದಿ ಸಂಘದ ಸಂಸ್ಥಾಪಕರು, ಹಾಲಿ ಗೌರವಾಧ್ಯಕ್ಷರು, ಅಧ್ಯಕ್ಷರು ಕಾರ್ಯದರ್ಶಿಗಳು, ಖಜಾಂಚಿಗಳು, ಸಂಘದ ನಿರ್ದೇಶಕರು ಮತ್ತು ಸಂಘದ ಸರ್ವ ಸದಸ್ಯರು ಜೊತೆಗಿದ್ದು ಸ್ವಾಗತಿಸಬೇಕು ಎಂದು ತಿಳಿಸಿದ್ದಾರೆ.





