ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಇದೇ ಅ.13ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಮೆರವಣಿಗೆಯು ಸೋಮವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಹೊಸನಗರದ ಟಿಪ್ಪು ಸುಲ್ತಾನ ವೃತ್ತದಿಂದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದವರೆಗೆ ನಡೆಯಲಿದೆ.
ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ, ಮುನಿರ ಅಹಮದ್ ಮುಳಕೆಡ, ಚಂದ್ರಶೇಖರ ಕಡಕೋಳ, ರಾಜಕುಮಾರ ಸಿಂದಗಿರಿ, ರಮೇಶ ದಳವಾಯಿ, ಹುಯೊಗಿ ತಳ್ಳೊಳ್ಳಿ, ಸುನಿಲ್ ಮಾಗಿ, ಗುರುನಾಥ ಮುರಡಿ, ಸರಿತಾ ನಾಯಿಕ, ಪರಶುರಾಮ ನಾಯ್ಕೋಡಿ ಮಾತನಾಡಿದರು.
ಇದನ್ನೂ ಓದಿ: ವಿಜಯಪುರ | ಧರಣಿ ಕುಳಿತವರು ಯಾರೂ ಅಜ್ಞಾನಿಗಳಲ್ಲ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಅರವಿಂದ ಕುಲಕರ್ಣಿ ತಿರುಗೇಟು
ಸಭೆಯಲ್ಲಿ ಬಸವರಾಜ ಇಂಗಳಗಿ, ಶಂಕರ ಜಮಾದಾರ, ಶಿವರಾಜ ತಳವಾರ, ಇಕ್ಬಾಲ್ ಬಿಜಾಪುರ, ದಾದಾ ತಾಂಬೋಳಿ, ಆನಂದ ವಗ್ಗರ, ಪ್ರಭು ಕಡಕೋಳ, ದಯಾನಂದ ರಾಠೋಡ, ಮಲಕಪ್ಪ ಬಾಗೇವಾಡಿ, ಶಿವಾನಂದ ವಾಲೆಕಾರ, ರಾಘವೇಂದ್ರ ಗುಡಿಮನಿ, ಸಾಯಬಣ್ಣ ದಳಪತಿ, ನವೀನ ಗುತ್ತೇದಾರ, ಬೀರು ಹಳ್ಳಿ, ಪರಶುರಾಮ ಬಡಿಗೇರ ಹಾಗೂ ದಾದಾ ಶಹಪುರ ಇದ್ದರು.





