ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಕಾಮಗಾರಿ ನಡೆಯುತ್ತಿದ್ದ ವೇಳೆ ಬೋರ್ಡ್ ಬಿದ್ದು ಮಹಿಳೆಯೊಬ್ಬರಿಗೆ ಕಾಲು ಮುರಿದಿರುವ ಘಟನೆ ದೇವದುರ್ಗ ತಾಲ್ಲೂಕು ಪಲಕನಮರಡಿ ಪಂಚಾಯತ್ ವ್ಯಾಪ್ತಿಯ ವಂದ್ಲಿಯಲ್ಲಿ ನಡೆದಿದೆ.
ಅಮರಮ್ಮ ಚೌಡಪ್ಪ ಗಾಯಗೊಂಡ ಮಹಿಳೆ ಎನ್ನಲಾಗಿದೆ. ನರೇಗಾ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಚಾನಕ್‌ವಾಗಿ ಸ್ಥಳದಲ್ಲಿದ್ದ ಸಿಮೆಂಟ್ ಬೋರ್ಡ್ ಕುಸಿದು ಬಿದ್ದು ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಸ್ಥಳೀಯರು ಹಟ್ಟಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳೀಯರು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಸಕ ಮಾನಪ್ಪ ವಜ್ಜಲ್ ಕಾಣೆಯಾಗಿದ್ದಾರೆ; ಪೋಸ್ಟರ್ ವೈರಲ್
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಾಯಗೊಂಡ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.





