ಧರ್ಮಸ್ಥಳ ಪ್ರಕರಣ | 13ನೇ ಪಾಯಿಂಟ್ ಶೋಧ ಕಾರ್ಯ ಬುಧವಾರವೂ ಮುಂದುವರಿಕೆ

Date:

ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮೂಹಿಕವಾಗಿ ಮೃತದೇಹಗಳನ್ನು ಹೂತಿರುವುದಾಗಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಮಂಗಳವಾರ ಜಿಪಿಆರ್ ಉಪಯೋಗಿಸಿ ಪರಿಶೀಲಿಸುವ ಕಾರ್ಯವನ್ನು ಎಸ್‌ಐಟಿ ಅಧಿಕಾರಿಗಳು ನಡೆಸಿದರು.

ಮಂಗಳವಾರ ಮಧ್ಯಾಹ್ನದಿಂದ ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ಚಿಕ್ಕ ಹಿಟಾಚಿ ಬಳಸಿ ಭೂಮಿ ಅಗೆಯುವ ಕಾರ್ಯವನ್ನು ಪ್ರಾರಂಭಿಸಿ, ನಂತರ ದೊಡ್ಡ ಹಿಟಾಚಿಯ ಸಹಾಯದಿಂದ ಶೋಧ‌ ಕಾರ್ಯಾಚರಣೆ ಆರಂಭಿಸಿದ್ದು, ಅಗೆಯವ ಕಾರ್ಯ ಮಾಡಲಾಗಿದೆ. ಈ ಸ್ಥಳದಿಂದ ಯಾವುದೇ ಕಳೇಬರಗಳು ಕುರುಹುಗಳು ಪತ್ತೆಯಾಗಿಲ್ಲವೆಂದು ಎಸ್‌ಐಟಿ ಮೂಲಗಳಿಂದ‌‌ ಮಾಹಿತಿ ಸಿಕ್ಕಿದೆ.

ದೂರುದಾರ ಹಾಗೂ ಇತರ ಅಧಿಕಾರಿಗಳೊಂದಿಗೆ ಆಗಮಿಸಿದ ಎಸ್‌ಐಟಿ ತಂಡ ಆರಂಭದಲ್ಲಿ ಜಿಪಿಆರ್ ತಂತ್ರಜ್ಞಾನವನ್ನು ಉಪಯೋಗಿಸಿ ಪರಿಶೀಲನೆ ಮಾಡಿತು. ದೂರುದಾರ ಗುರುತಿಸಿದ 13ನೇ ಪಾಯಿಂಟ್ ಸ್ಥಳದಲ್ಲಿ ನೇತ್ರಾವತಿ ಅಜಿಕುರಿ ರಸ್ತೆಬದಿಯಲ್ಲಿ ಸುಮಾರು ನೂರು ಮೀಟರ್ ದೂರದವರೆಗೂ ಜಿಪಿಆರ್ ಮೂಲಕ ಪರಿಶೀಲನೆ ನಡೆಸಲಾಯಿತು. ಆದರೆ ಪರಿಶೀಲನೆಯಿಂದ ಯಾವುದೇ ಹೆಚ್ಚಿನ‌ ಮಾಹಿತಿಗಳು ಲಭ್ಯವಾಗಿರುವುದಾಗಿ ತಿಳಿದುಬಂದಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಜಿಪಿಆರ್ ಉಪಯೋಗಿಸಿ ಸ್ಥಳದಲ್ಲಿ‌ ಶೋಧ‌‌ ಕಾರ್ಯ ನಡೆಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡು ಹಿಟಾಚಿ ಬಳಸಿ ಕಾರ್ಯಾಚರಣೆ

ಜಿಪಿಆರ್ ಮೂಲಕ ಮಣ್ಣಿನ ಅಡಿಯಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ಪೂರ್ಣಗೊಳಿಸಿದ ನಂತರ ಎಸ್‌ಐಟಿ ತಂಡ ಹಿಟಾಚಿಯನ್ನು ಉಪಯೋಗಿಸಿ ಅಗೆಯುವ ಕಾರ್ಯಕ್ಕೆ ಮುಂದಾದರು.

ಧರ್ಮಸ್ಥಳ ಶೋಧ ಕಾರ್ಯ

ನೇತ್ರಾವತಿ ನದಿಗೆ ಅಡ್ಡಲಾಗಿರುವ ಕಿಂಡಿ ಅಣೆಕಟ್ಟಿನ ಬದಿಯಲ್ಲಿರುವ ಈ 13ನೇ ಪಾಯಿಂಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿಸಿರುವ ಹಿನ್ನಲೆ ಈ ಜಾಗದಲ್ಲಿ ತುಂಬಾ ಆಳಕ್ಕೆ ಅಗೆದು ಪರಿಶೀಲನೆ ಮಾಡಲಾಯಿತು. ಈ ಸ್ಥಳದಲ್ಲಿ ಸುಮಾರು 20 ಅಡಿ ಅಗಲಕ್ಕೆ 30 ಅಡಿ ಉದ್ದಕ್ಕೆ ಅಗೆದು ಪರಿಶೀಲನೆ ನಡೆಸಲಾಯಿತು.

ನದಿಯ ಹಾಗೂ ಕಿಂಡಿ ಅಣೆಕಟ್ಟಿನ ಬದಿಯಲ್ಲಿ ಈ‌ ಜಾಗ ಇರುವ ಕಾರಣ ಅಗೆಯುವ ವೇಳೆ ಗುಂಡಿಯಲ್ಲಿ ನೀರು ತುಂಬಲು ಪ್ರಾರಂಭ‌ ಹಿನ್ನೆಲೆ ಕೆಲಕಾಲ ಕಾರ್ಯಾಚರಣೆಗೆ ಅಡಿ ಉಂಟಾಗಿತ್ತು. ಬಳಿಕ ಡೀಸೆಲ್‌ ಪಂಪ್ ಬಳಸಿ ಗುಂಡಿಯಲ್ಲಿ ಇರುವ ನೀರನ್ನು ತೆಗೆದು ಅಗೆಯುವ ಕಾರ್ಯಾಚರಣೆ ಮುಂದುವರಿಸಲಾಯಿತು.

ಧರ್ಮಸ್ಥಳ ಶೋಧ ಕಾರ್ಯ 1 1

13ನೇ ಪಾಯಿಂಟ್ ತುಂಬಾ ವಿಸ್ತಾರವಾಗಿ ಇರುವ ಕಾರಣ ಅಧಿಕಾರಿಗಳು ಇಂದು ಅರ್ಧ ಭಾಗವನ್ನು ಮಾತ್ರ ಅಗೆದಿದ್ದು, ಇನ್ನೂ ಅರ್ಧ ಭಾಗವನ್ನು ನಾಳೆ ಅಗೆಯಲಿದ್ದಾರೆ. ಇಂದು ಅಗೆದ 13ನೇ ಪಾಯಿಂಟ್‌ನ ಅರ್ಧ ಭಾಗದಲ್ಲಿ ಯಾವುದೇ ಅಸ್ತಿಪಂಜರದ ಕುರುಹುಗಳು ಪತ್ತೆಯಾಗಿಲ್ಲ ಎಂದು ಎಸ್‌ಐಟಿ ಮೂಲಗಳು ಮಾಹಿತಿ‌ ನೀಡಿದೆ.

“ಅಧಿಕಾರಿಗಳು ಈ ಹಿಂದೆ ಉತ್ಖನನ ಜಾಗದಲ್ಲಿ ಗ್ರೀನ್ ನೆಟ್‌ಅನ್ನು ಮಾಧ್ಯಮದ ಕ್ಯಾಮೆರಾಗಳಿಗೆ ಅಡ್ಡಲಾಗಿ ಕಟ್ಟಿ, ಶೋಧ ಕಾರ್ಯ ಕ್ಯಾಮರಾಕ್ಕೆ ಕಾಣದಂತೆ ಶೋಧ ಕಾರ್ಯಾಚರಣೆವನ್ನು ಮಾಡುತ್ತಿದ್ದರು. ಆದರೆ ಇಂದು ಯಾವುದೇ ಮುಚ್ಚು ಮರೆಯಿಲ್ಲದೆ ಕಾರ್ಯಾಚರಣೆ ಜರುಗಿತು. ಇತ್ತ ಕಾರ್ಯಾಚರಣೆ ವೀಕ್ಷಿಸಲು ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸ್ಥಳಕ್ಕೆ‌ ಬಂದು ಕುತೂಹಲದಿಂದ ಕಾರ್ಯಾಚರಣೆ ವೀಕ್ಷಿಸಿದರು. ದೂರುದಾರನು ತಾನು ಮುಂದೆ ನಿಂತು ಹಿಟಾಚಿ ಚಾಲಕನಿಗೆ ಸೂಚನೆಗಳನ್ನು ನೋಡುತ್ತ ಸ್ಥಳವನ್ನು ಅಗೆಸುತ್ತಿರುವುದು ಕಂಡುಬಂದಿತು.

ಕಾರ್ಯಾಚರಣೆಯಲ್ಲಿ ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ, ಸೈಮನೆ, ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಪೃಥ್ಯ ಸಾನಿಕಮ್, ಅರಣ್ಯ ಕಂದಾಯ, ವಿಧಿವಿಜ್ಞಾನ ಪ್ರಯೋಗಾಲಯ ಸೇರಿದಂತೆ ಸುಮಾರು‌ 50 ರಿಂದ 60ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಸ್ಥಳದಲ್ಲಿ ಇದ್ದರು.

ಎಸ್‌ಐಟಿ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಾಂತಿ ಭೇಟಿ

ನೇತ್ರಾವತಿ ಸ್ನಾನಘಟ್ಟದ ಬಳಿಯ 13ನೇ ಪಾಯಿಂಟ್‌ನಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಯುವ ವೇಳೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಾಂತಿ ಅವರು ಭೇಟಿ ನೀಡಿ ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಮಾಹಿತಿ‌ ಪಡೆದು‌ ಬಳಿಕ ಈ ಪಾಯಿಂಟ್ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಮಾರ್ಗದರ್ಶನ ನೀಡಿದರು. ಜಿಪಿಆರ್ ಶೋಧ ಕಾರ್ಯ ಮುಗಿಯುವ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ ಅವರು ಅಧಿಕಾರಿಗಳೊಂದಿಗೆ ಅಲ್ಲಿಯೇ ಒಂದು ಸುತ್ತು ಮಾತುಕತೆ ನಡೆಸಿ ‌ಬಳಿಕ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹಿಂತಿರುಗಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಭೇಟಿ

ನೇತ್ರಾವತಿ ನದಿ ಪಕ್ಕದ 13ನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡ ಭೇಟಿ ನೀಡಿ ಎಸ್‌ಐಟಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ‌ ಮಾಹಿತಿ ಪಡೆದು ತೆರಳಿದರು.‌

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಬಾಲಕಿಯರ ವಸತಿ ನಿಲಯದ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಭೂಮಿಪೂಜೆ

ನಾಳೆಯು ಕಾರ್ಯಾಚರಣೆ ಮುಂದುವರಿಕೆ

ದೂರುದಾರ ತಾನು ನೇತ್ರಾವತಿ ಸ್ನಾನಘಟ್ಟದ ಅಜಿಕುರಿ ರಸ್ತೆಯ ಬದಿಯಲ್ಲಿ ಗುರುತಿಸಿದ 13ನೇ ಪಾಯಿಂಟ್‌ನಲ್ಲಿ ಸಾಮೂಹಿಕವಾಗಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ತಿಳಿಸಿದ್ದಾನೆ. ಇಲ್ಲಿ ಅತ್ಯಂತ ವಿಸ್ತಾರವಾದ ಜಾಗವನ್ನು ಆತ ಗುರುತಿಸಿದ್ದ. ಇಂದು ಪರಿಶೀಲನೆಯನ್ನು ಅತ್ಯಂತ ವಿಸ್ತಾರವಾದ ಜಾಗದಲ್ಲಿ ನಡೆಸಲಾಗಿತ್ತು. ಈ ಹಿನ್ನೆಲೆ ದೂರುದಾರ ಗುರುತಿಸಿದ 13ನೇ ಪಾಯಿಂಟ್ ‌ಸೇರಿದಂತೆ ಇತರ ಭಾಗಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಇಂದು ಅಗೆದು ಪರಿಶೀಲಿಲನೆ ನಡೆಸಲಿದ್ದಾರೆ.

ಬೀಗಿ ಖಾಕಿ ಬಂದೋಬಸ್ತ್

ಎಸ್‌ಐಟಿ ಕಾರ್ಯಾಚರಣೆಯ ನಡುವೆಯೇ ಯುಟ್ಯೂಬರ್‌ಗಳ ಮೇಲೆ ಹಲ್ಲೆ ಹಾಗೂ ಬಳಿಕ ನಡೆದ ಘರ್ಷಣೆಗಳ ಹಿನ್ನೆಲೆಯಲ್ಲಿ 13ನೇ ಪಾಯಿಂಟ್ ಅಗೆಯುವ ಕಾರ್ಯ ನಡೆಯುವ ವೇಳೆ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಾಂಗಳ ತಿರುವು ಹಾಗೂ ಕಾರ್ಯಾಚರಣೆ ನಡೆಯುವ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...