ಧಾರವಾಡ | ಮಧ್ಯಪ್ರದೇಶದ ಕಳ್ಳರ ತಂಡದಲ್ಲಿದ್ದ ಬಾಲಕ ಪೊಲೀಸ್‌ ವಶಕ್ಕೆ

Date:

ಧಾರವಾಡ ನಗರದ ರೆಸಾರ್ಟ್‌ನಲ್ಲಿ ಆರತಕ್ಷತೆ ವೇಳೆ ನಡೆದ ಕಳವು ಪ್ರಕರಣದ ಬೆನ್ನುಬಿದ್ದ ಧಾರವಾಡ ಪೊಲೀಸರು ಮಧ್ಯಪ್ರದೇಶ ರಾಜ್ಯದ ಕಳ್ಳರ ತಂಡದಲ್ಲಿದ್ದ ಬಾಲಕನನ್ನು ವಶಕ್ಕೆ ಪಡೆದಿದ್ದು, ಇದರೊಂದಿಗೆ 61.14 ಲಕ್ಷ ರೂ. ಮೌಲ್ಯದ 964 ಗ್ರಾಂ. ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.

ಬಾಲಕನನ್ನು ಬಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಶೋಧ ಕಾರ್ಯಾ ಮುಂದುವರಿದಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದರು.

ಧಾರವಾಡದ ಅಧ್ಯಾಪ‍ಕ ನಗರದ ಅರುಣಕುಮಾರ ಗಿರಿಯಾಪುರ ಅವರ ಪುತ್ರಿಯ ಆರತಕ್ಷತೆಯಲ್ಲಿ ಮಾರ್ಚ್‌ 6ರಂದು ಚಿನ್ನಾಭರಣದ ಚೀಲವನ್ನು ಕಳ್ಳರು ಕದ್ದೊಯ್ದಿದ್ದರು ಈ ಸಂಬಂಧ ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಕರಣದ ತನಿಖೆಗಾಗಿ ಎಸಿಪಿ ಬಿ.ಎಸ್‌. ಬಸವರಾಜ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಗಮೇಶ ದಿಡಿಗಿನಾಳ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಸಿ.ಸಿ ಟಿವಿ ಕ್ಯಾಮೆರಾ ಫೂಟೇಜ್‌ ಆಧರಿಸಿ ಕಳ್ಳರ ಜಾಡು ಪತ್ತೆಗೆ ಶೋಧ ನಡೆಸಿತ್ತು. ಬಾಲಕನೊಬ್ಬ ಬ್ಯಾಗ್‌ ಒಯ್ಯುವುದು ಸಿ.ಸಿ ಟಿವಿಯಲ್ಲಿ ದಾಖಲಾಗಿತ್ತು. ಸುಳಿವು ಆಧರಿಸಿ ತಂಡ ಕಾರ್ಯಾಚರಣೆ ಮುಂದುವರಿಸಿ, ಮಧ್ಯಪ್ರದೇಶಕ್ಕೆ ತೆರಳಿತ್ತು ಎಂದು ಮಾಹಿತಿ ನೀಡಿದರು.

ಆರಂಭದಲ್ಲಿ ತನಿಖಾ ತಂಡವು ಸ್ಥಳೀಯವಾಗಿ ಮಾಹಿತಿ ಕಲೆ ಹಾಕಿತ್ತು. ವಾಹನದ (ಬಳಸಿದ್ ಟ್ಯಾಗ್‌ ಆಧಾರ) ಸುಳಿವು ಆಧರಿಸಿ ತಂಡವು ಗುಜರಾತ್‌ ಅಹಮದಾಬಾದ್, ಮಧ್ಯಪ್ರದೇಶದ ಉಜ್ಜೈನ್‌, ಇಂದೋರ್‌ ಮೊದಲಾದ ಕಡೆಗಳಲ್ಲಿ ತೆರಳಿ 10 ದಿನಗಳು ಪರಿಶೀಲನೆ ನಡೆಸಿದ್ದರು. ಮಧ್ಯಪ್ರದೇಶದ ರಾಜಗಡ ಜಿಲ್ಲೆಯ ಪಚೋರ ತಾಲೂಕಿನಲ್ಲಿ ಕಳ್ಳರ ತಂಡವನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು.

ತಂಡವು ಮೊದಲು ಹೋದಾಗ ಊರಿನವರು ವಿರೋಧ ವ್ಯಕ್ತಪಡಿಸಿದ್ಧಾರೆ. ಆನಂತರ, ತಂಡದವರು ಅಲ್ಲಿನ ಸ್ಥಳೀಯ ಪೊಲೀಸರ ನೆರವು ಪಡೆದು ಪರಿಶೀಲನೆ, ವಿಚಾರಣೆ ನಡೆಸಿ ಬಾಲಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆ ಕೈಗೊಂಡಿದ್ದ ತಂಡಕ್ಕೆ ನಗದು ಬಹುಮಾನ ನೀಡಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಬೇರೆ ಬೇರೆ ಕಡೆಯಿಂದ ಹುಡುಗರನ್ನು ಕರೆತಂದು ಕಳ್ಳತನದಲ್ಲಿ ತೊಡಗಿಸುವ ತಂಡವೊಂದು ಮಧ್ಯಪ್ರದೇಶದ ಪಚೋರ ಭಾಗದಲ್ಲಿ ಕಾರ್ಯಪ್ರವೃತವಾಗಿದೆ. ‘ಬ್ಯಾಂಡ್‌ ಬಾಜಾ ಬಾರಾತ್‌ ಗ್ಯಾಂಗ್‌’ ಎಂದು ಹೆಸರು ಇಟ್ಟುಕೊಂಡಿದೆ. ಮದುವೆ ಸ್ಥಳಗಳಲ್ಲಿ ಕಳವು ಮಾಡುವುದೇ ಈ ತಂಡದ ದಂಧೆ ಎಂದು ರೇಣುಕಾ ಸುಕುಮಾರ ತಿಳಿಸಿದರು.

ಕಳವು ಕೃತ್ಯಕ್ಕೆ ಬಾಲಕರನ್ನು ಬಳಸಿಕೊಂಡು ಅವರ ಪೋಷಕರಿಗೆ ಕಳ್ಳರ ತಂಡವು ವರ್ಷಕ್ಕೆ ಒಂದಿಷ್ಟು ಹಣ ಕೊಡುತ್ತಾರೆ. ಧಾರವಾಡದ ಕಳವು ಪ್ರಕರಣಕ್ಕಿಂತ ಮುಂಚೆ ಬೇರೆ ಕಡೆಗಳಲ್ಲೂ ಕಳವು ಮಾಡಿದ್ದಾರೆ. ಬೇರೊಂದು ರಾಜ್ಯದಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲೂ ಇದೇ ಬಾಲಕ ಸಿಕ್ಕಿಬಿದ್ದಿದ್ದ. ಯಾವುದೇ ಸುಳಿವು ಸಿಗದ ಕಾರಣ ಅಲ್ಲಿನ ಪೊಲೀಸರು ಕೈ ಬಿಟ್ಟಿದ್ದರು. ದೇಶದ ವಿವಿಧೆಡೆ ಈ ‘ಬ್ಯಾಂಡ್‌ ಬಾಜಾ ಬಾರಾತ್‌ ಗ್ಯಾಂಗ್‌ʼ ಅಪರಾಧ ಕೃತ್ಯ ಎಸಗಿದೆ. ಕಳ್ಳರ ತಂಡವು ಮಧ್ಯಪ್ರದೇಶಕ್ಕೆ ತಲುಪುವ ಮುನ್ನವೇ ಧಾರವಾಡದ ತನಿಖಾ ತಂಡವು ಅಲ್ಲಿಗೆ ತಲುಪಿತ್ತು. ಪ್ರಕರಣ ಭೇದಿಸುವ ನಿಟ್ಟಿನಲ್ಲಿ ಇದು ಅನುಕೂಲವಾಯಿತು ಎಂದರು.

ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿ ಸಂಬಂಧಿಕರೊಬ್ಬರ ಮೊಬೈಲ್‌ ಫೋನನ್ನು ತನಿಖಾ ತಂಡವು ಪರಿಶೀಲಿಸಿದೆ. ಅಂತರ್ಜಾಲದಲ್ಲಿ ‘ಹುಬ್ಬಳ್ಳಿ ಮ್ಯಾರೇಜಸ್‌’ ಇತ್ಯಾದಿ ಸರ್ಚ್‌ ಮಾಡಿರುವುದು ಪತ್ತೆಯಾಯಿತು. ದೊಡ್ಡ ಛತ್ರ ಸಭಾಂಗಣಗಳಲ್ಲಿ ಮದುವೆ ಇರುವುದನ್ನು ತಿಳಿದುಕೊಂಡು ಮೊದಲೇ ಸಂಚು ರೂಪಿಸಿರುತ್ತಾರೆ. ಒಳ್ಳೆಯ ಉಡುಪು ಧರಿಸಿ ಮದುವೆಯಲ್ಲಿ ಪಾಲ್ಗೊಂಡು ಚಿನ್ನಾಭರಣ ಇತ್ಯಾದಿ ಮೇಲೆ ಕಣ್ಣಿಟ್ಟು ಗಮನ ಬೇರೆಡೆಗೆ ಸೆಳೆದು ಕೃತ್ಯ ಎಸಗುತ್ತಾರೆ. ಕಳವು ಮಾಡಿಕೊಂಡು ಹೋಗುವಾಗ ಸ್ವಲ್ಪ ದೂರ ಸಾಗಿದ ತಕ್ಷಣ ವಾಹನ ಬದಲಾಯಿಸಿಕೊಂಡು ತೆರಳುತ್ತಾರೆ. ಟೋಲ್‌ ಬಳಕೆ ಮಾಡದಿರುವುದು ಫೋನ್‌ ಆಫ್‌ ಮಾಡಿ ಸಾಗುವುದು ಈ ತಂಡದ ಕಳವು ನಡೆಸುವ ಕಾರ್ಯವಿಧಾನ ಎಂದು ಅವರು ವಿವರಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...