ಅಕ್ರಮ ಸ್ಪಿರೀಟ್ ಪತ್ತೆಯಾದ ಪ್ರಕರಣದ ಆರೋಪಿಗಳ ಪತ್ತೆಗೆ ಜಾಲ ಬೀಸಿದಾಗ, ಆರೋಪಿತರ ಬಳಿ ಇದ್ದ ಅಂದಾಜು 51 ಕೆ.ಜಿ ಗಾಂಜಾವನ್ನು ಧಾರವಾಡ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ನವೆಂಬರ 24, ರಂದು ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ತೇಗೂರ ಗ್ರಾಮದ ಭಾರತ ಪ್ಯಾಲೇಸ್ ಹೋಟೆಲ್ ಹತ್ತಿರ ಅಕ್ರಮವಾಗಿ 35 ಲೀಟರ್ ಸ್ಟೀರಿಟ್ ತುಂಬಿದ 844 ಕ್ಯಾನಗಳನ್ನು ವಶಕ್ಕೆ ಪಡೆದುಕೊಂಡು ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾರ್ಗದರ್ಶನದಲ್ಲಿ ತನಿಖೆ ಹಾಗೂ ಪರಾರಿಯಾಗಿದ್ದ ಆರೋಪಿತರ ಪತ್ತೆ ಕಾರ್ಯ ಕೈಗೊಂಡಾಗ ಒಟ್ಟು 51 ಕೆಜಿ 460 ಗ್ರಾಂ ಒಣಗಿದ ಮಾದಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿನ ಪರಾರಿ ಆರೋಪಿತರ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಾನಂದ ಕಟಗಿ, ಪೊಲೀಸ್ ಉಪ ಅಧೀಕ್ಷಕ ವಿನೋದ ಮುಕ್ತದಾರ ಮಾರ್ಗದರ್ಶನದಲ್ಲಿ ಗರಗ ಠಾಣೆಯ ಶಿವಯೋಗಿ ಲೋಹಾರ, ಪಿಎಸ್‌ಐ ಸಿದ್ರಾಮಪ್ಪ ಉನ್ನದ ನೇತೃತ್ವದಲ್ಲಿ ಪರಾರಿ ಆರೋಪಿತರು ತಮ್ಮ ವಾಸಸ್ಥಳದಲ್ಲಿ ಅಕ್ರಮವಾಗಿ ಸ್ಪಿರಿಟ ಹಾಗೂ ಇನ್ನಿತರೇ ನಿಷೇಧಿತ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿರಬಹುದು ಎಂದು ಮಾಹಿತಿ ಬರುತ್ತದೆ.
ಈ ಬಗ್ಗೆ ನ್ಯಾಯಾಲಯದಿಂದ ಸರ್ಚ ವಾರಂಟನ್ನು ಪಡೆದುಕೊಂಡು ಡಿಸೇಂಬರ್ 05ರಂದು ಬೆಂಗಳೂರ ನಗರ ಜಿಲ್ಲೆ, ಆನೆಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಕೆಹೆಚ್‌ಬಿ ನಿವೇಶನ 300 ನೇದ್ದರಲ್ಲಿ ಆರೋಪಿಗಳು ವಾಸವಿರುವ ಬಾಡಿಗೆ ಮನೆಗೆ ಹೋಗಿ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದು ಅವರಿಂದ ಒಟ್ಟು 51 ಕೆಜಿ 460ಗ್ರಾಂ ಒಣಗಿದ ಮಾದಕ ಗಾಂಜಾವನ್ನು 12,86,500/- ಗಾಂಜಾ ತೂಕ ಮಾಡುವ ಒಂದು ಡಿಜಿಟಲ್ ಮಶೀನ್ ಹಾಗೂ 3 ಮೋಬೈಲ್‌ಗಳನ್ನು ವಶಪಡಿಸಿಕೊಂಡು ಸ್ಥಳದಲ್ಲಿ ಪಂಚನಾಮೆ ಕೈಕೊಂಡು ವಶಪಡಿಸಿಕೊಂಡ ಮುದ್ದೆ ಮಾಲಗಳನ್ನು ಪ್ರಕರಣಕ್ಕೆ ಅಳವಡಿಸಿಕೊಂಡಿದ್ದಾರೆ. ಆರೋಪಿತರನ್ನು ಬೆಂಗಳೂರಿನಿಂದ ಕರೆತಂದು ದಸ್ತಗೀರ ನಿಯಮಗಳನ್ನು ಪಾಲನೆ ಮಾಡಿ ಡಿ. 06 ರಂದು ಇಬ್ಬರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ ಹುಬ್ಬಳ್ಳಿ | ತಾಯಿಯ ಮನಸ್ಸು ಎಷ್ಟೇ ಸುಟ್ಟರೂ ಮಕ್ಕಳ ಆನಂದದಲ್ಲಿರುತ್ತಾಳೆ: ಡಾ. ಸುಪ್ರೀಯಾ ಮಲಶೆಟ್ಟಿ
ಈ ಪ್ರಕರಣದಲ್ಲಿನ ಪರಾರಿ ಆರೋಪಿತರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪಿಎಸ್‌ಐ ಎಸ್.ಪಿ ಉನ್ನದ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ ಹಾಗೂ ಸಿಬ್ಬಂದಿ ಯು.ಆರ್.ಸಂಪಗಾಂವಿ, ವಿಜಯ ಉಪ್ಪಿನ, ಆರ್.ಕೆ.ಕೊಪ್ಪದ, ಪಿ.ಎಸ್.ಟಕ್ಕಳಕಿ, ಪ್ರಸಾದ ಬಡಿಗೇರ, ಸೋಮು ರಾಠೋಡ, ಧಾರವಾಡ ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿ ವಿಠಲ ಡಂಗನವರ, ಪಿಸಿ ರವೀಂದ್ರ ಪಟೇದ್ ಅವರುಗಳನ್ನು ಒಳಗೊಂಡ ತಂಡ ಪ್ರಮುಖ ಪಾತ್ರ ವಹಿಸಿದ್ದರು. ಆರೋಪಿತರ ಮತ್ತು ಗಾಂಜಾ ವಶ ಪಡಿಸಿಕೊಂಡ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.





