ಭಾವಿ ಪತ್ನಿಯ ಮನೆಗೆ ರಂಜಾನ್ ಸಲಾಮಿ ಕೊಟ್ಟು ಮರಳುವಾಗ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಧಾರವಾಡದ ಕೆಲಗೇರಿ ಸೇತುವೆ ಬಳಿ ನಡೆದಿದೆ.
ತಾಲೂಕಿನ ಲಕಮಾಪುರ ನಿವಾಸಿ ಇಮಾಮಸಾಬ ಖಲೀಲಸಾಬ ಹೆಬ್ಬಳ್ಳಿ (21) ಮೃತಪಟ್ಟ ಯುವಕ. ಬೈಕ್‌ನಲ್ಲಿದ್ದ ಮತ್ತೊಬ್ಬ ಯುವಕ ಮೊಹ್ಮದಯೂನೂಸ್ ಮುಲ್ಲಾನವರ (17) ಗಾಯಗೊಂಡಿದ್ದಾನೆ. ಮೃತ ಇಮಾಮಸಾಬನಿಗೆ ಕಂಬಾರಗಣವಿ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಹಬ್ಬದ ಪ್ರಯುಕ್ತ ಹುಡುಗಿಯ ಮನೆಗೆ ಹೋಗಿ ಮರಳಿ ಬರುವಾಗ ಈ ಘಟನೆ ನಡೆದಿದೆ.
ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





