ಎನ್ಎಸ್ಎಸ್ ಶಿಬಿರಾರ್ಥಿಗಳು ಪರಿಸರದ ಸ್ವಚ್ಛತೆ ಜೊತೆಗೆ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು, ಇಂತಹ ಶಿಬಿರಗಳಲ್ಲಿ ಭಾಗವಹಿಸುವದರಿಂದ ಉತ್ತಮ ನಾಗರಿಕರಾಗಲು ಸಹಕಾರಿಯಾಗುತ್ತದೆ, ಗ್ರಾಮೀಣ ಪ್ರದೇಶದ ಸೊಗಡನ್ನು ಅರಿಯಲು ಶ್ರದ್ಧೆ, ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಧಾರವಾಡದ ಅಂಜುಮನ್ ಕಲಾ, ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಶೀರ ಅಹಮ್ಮದ್ ಜಾಹಗೀರದಾರ ಮಾತನಾಡಿದರು.
ಮುಖ್ಯ ಅತಿಥಿಗಳಾದ ಖೈರುದ್ದಿನ್ ಶೇಖ್ ಮಾತನಾಡಿ, ಸ್ವಯಂಸೇವಕರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕು. ನೈತಿಕ ಗುಣಗಳು, ಪರಸ್ಪರ ಸಹಕಾರ ಮತ್ತು ಜವಾಬ್ದಾರಿಯ ಮನೋಭಾವ ಅಳವಡಿಸಿಕೊಳ್ಳುವುದೇ ರಾಷ್ಟ್ರ ನಿರ್ಮಾಣಕ್ಕೆ ಆಧಾರವೆಂದು ತಿಳಿಸಿದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿ. ಬಿ. ಹಂದೂರ ಮಾತನಾಡಿ, ಗ್ರಾಮದ ಪರಿಸರ ಸುಧಾರಣೆಗೆ ಈ ಶಿಬಿರದಲ್ಲಿ ನಾವು ಪಾಲ್ಗೊಂಡು ನಡೆಸಿದ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿವೆ. ಇಂತಹ ಕಾರ್ಯಗಳಿಗೆ ಗ್ರಾಮ ಪಂಚಾಯತಿಯಿಂದ ಸದಾ ಸಹಕಾರ ದೊರೆಯುತ್ತದೆ ಎಂದರು. ಅತಿಥಿಗಳಾಗಿ ಆಗಮಿಸಿದ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಸುರೇಖಾ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಯಪ್ರಜ್ಞೆ, ಶಿಸ್ತು, ನಾಯಕತ್ವದ ಗುಣಗಳನ್ನು ದೃಢಸಂಕಲ್ಪದಿಂದ ಅಳವಡಿಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಲಿ. ನಮ್ಮ ಶಾಲೆಯನ್ನು ಶಿಬಿರಕ್ಕಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳ ತಿಳಿಸಿದರು.
ಅಂಜುಮನೆ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಇನ್ನೊರ್ವ ಸದಸ್ಯ ರಿಯಾಜ ಅಹಮ್ಮದ್ ನನ್ನೆಸಾಬನವರ, ಗ್ರಾಮ ಪಂಚಾಯತ ಅಧ್ಯಕ್ಷೆ ಕಾಳವ್ವ ಬಡಿಗೇರ, ಸದಸ್ಯೆ ಈರಮ್ಮ ಉದಮೀಶಿ, ಆರೋಗ್ಯ ಇಲಾಖೆಯ ಫರ್ವಿನಬಾನು ತಾಳಿಕೋಟಿ, ಶಾಲಾ ಸುಧಾರಣಾ ಸಮಿತಿಯ ಉಪಾಧ್ಯಕ್ಷ ನಯನದೇವ ದೊಡ್ಡಮನಿ, ಚಂದ್ರಯ್ಯಾ ಶಿದ್ಗಿರಿಮಠ, ಗ್ರಾಮದ ಮುಖಂಡ ಯಲ್ಲಪ್ಪ ಉದಮೀಶಿ, ಪ್ರಾಚಾರ್ಯ ಡಾ. ಎನ್ ಬಿ ನಾಲತವಾಡ ವೇದಿಕೆ ಮೇಲಿದ್ದರು.
ಇದನ್ನೂ ಓದಿ ಧಾರವಾಡ | ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಬಹುತ್ವವನ್ನು ಎತ್ತಿ ಹಿಡಿದ ಲೇಖಕ: ದಾಮೋದರ ಮೌಜೋ
ಪ್ರೊ. ಉಲ್ಲಾಸ ದೊಡ್ಡಮನಿ ನಿರೂಪಿಸಿದರು. ರಾಸೇಯೋ ಕಾರ್ಯಕ್ರಮಾಧಿಕಾರಿ ಡಾ. ಸಯ್ಯದ್ ತಾಜುನ್ನಿಸ್ಸಾ ಸ್ವಾಗತಿಸಿದರು. ಇನ್ನೊರ್ವ ಅಧಿಕಾರಿ ಪ್ರೊ. ನಾಗರಾಜ ಕನಕನಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಎನ್‌ಎಸ್ಎಸ್ ಅಧಿಕಾರಿ ಪ್ರೊ. ಶೃತಿ ಯಾವಗಲಮಠ, ಪ್ರೊ. ಶಮೀನಾ ನದಾಫ್, ಪ್ರೊ. ಶಿರಿನ್ ಶಿರಗುಪ್ಪಿ, ಪ್ರೊ. ಚಾಂದಸುಲ್ತಾನ್ ಮುಲ್ಲಾ, ಪ್ರೊ. ಶಬೀನಾ ಬೀಡಿ, ಪ್ರೊ.ಆಸ್ಮಾ ನದಾಫ್, ಶಾಲಾ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಭಾಗವಹಿಸಿದ್ದರು.





