ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ 2024-25 ಹಾಗೂ 2025-26 ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರ್‍ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಂದ ಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕ್ರೀಡೆ, ಸಂಗೀತ, ನೃತ್ಯ, ಬಹುಮುಖ ಪ್ರತಿಭೆ, ನಟನೆ, ಚಿತ್ರಕಲೆ, ಹಾಗೂ ವಿಜ್ಞಾನ ಮತ್ತು ಸಂಶೋಧನೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿ ಪ್ರಶಸ್ತಿ ಪಡೆದ ಪುರಸ್ಕೃತ ಮಗುವಾಗಿರಬೇಕು. ಇಂತಹ ಮಕ್ಕಳು ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳು ಹಾಗೂ ಸ್ವವಿವರಗಳ ಮನವಿಯೊಂದಿಗೆ ಅರ್ಜಿಯನ್ನು ಫೆಬ್ರವರಿ 20, 2026 ರೊಳಗಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:
8050392209, 7204396275, 9448981944 ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





