ಧಾರವಾಡ | ಬಸವಣ್ಣ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಹೋರಾಡಿದ ಏಕೈಕ ಮಹಾಪುರುಷ: ರಂಜಾನ್ ದರ್ಗಾ

Date:

ಬುದ್ಧನ ಕಾಲಕ್ಕೆ ವರ್ಣಾಶ್ರಮ ವ್ಯವಸ್ಥೆಯನ್ನು ಅಲ್ಲಗಳೆಯುವುದೇ ದೊಡ್ಡ ಕ್ರಾಂತಿಯಾಗಿತ್ತು. ಅಂತಹ ವರ್ಣಾಶ್ರಮ ವ್ಯವಸ್ಥೆಯ ವಿರುದ್ಧ ಹೋರಾಡಿದ ಏಕೈಕ ಮಹಾಪುರುಷ ಬಸವಣ್ಣ ಎಂದು ಶರಣ ಸಾಹಿತಿ, ಚಿಂತಕ ರಂಜಾನ್ ದರ್ಗಾ ಹೇಳಿದರು.

ಧಾರವಾಡದಲ್ಲಿ ನಡೆದ ‘ಕಾಯಕ ಮತ್ತು ದಾಸೋಹ: ಸಾಮಾಜಿಕ‌ ನ್ಯಾಯದ ಶ್ರೇಷ್ಠ ಪರಿಕಲ್ಪನೆ’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಜೈನ, ಬೌದ್ಧ, ಲಿಂಗಾಯತ ಮತ್ತು ಸಿಖ್ ಧರ್ಮಗಳು ಈ ದೇಶದಲ್ಲಿ ಜನ್ಮತಾಳಿದವು. ಈ ನಾಲ್ಕೂ ಧರ್ಮಗಳು ಅವೈದಿಕವಾಗಿವೆ. ಚಾತುರ್ವರ್ಣ, ಅಸ್ಪೃಶ್ಯತೆ, ಜಾತಿಯತೆಯನ್ನು ವಿರೋಧ ಮಾಡುವ ಹೋರಾಟಗಳಿಗೆ ಈ ದೇಶದಲ್ಲಿ 3 ಸಾವಿರ ವರ್ಷದ ಇತಿಹಾಸವಿದೆ. ಆದರೆ; ಯಾರೂ ಯಾಕೆ ಬದಲಾಗಿಲ್ಲ ಎನ್ನುವುದೇ ದೊಡ್ಡ ಪ್ರಶ್ನಯಾಗಿದೆ” ಎಂದರು.

“ಅವೈದಿಕತೆಯಲ್ಲಿ ಜಾತಿಯತೆ, ಅಸ್ಪೃಶ್ಯತೆ, ಹೆಣ್ಣು ಗಂಡಿನ ಭೇದವಿಲ್ಲ. ಇಂತಹ ಸಂವಿಧಾನ ನಮಗೆ ಸಿಗಬೇಕಾದರೆ 3 ಸಾವಿರ ವರ್ಷಗಳ ಮಾನವ ಕುಲದ ಶ್ರಮವಿದೆ ಎನ್ನುವುದನ್ನು ನಾವು ಮರೆಯಬಾರದು. ಬಸವಣ್ಣನವರ ಧರ್ಮ ಸರಳ ಮತ್ತು ವೈಜ್ಞಾನಿಕವಾಗಿದೆ. ಮನಸ್ಸಿನ ಶುದ್ಧೀಕರಣ, ಮನಸ್ಸಿನ ವಿಕಸನ ಮತ್ತು ಮನಸ್ಸಿನ ಪ್ರಾಯೋಗಿಕ ಚಿಂತನೆಯುಳ್ಳ ಮೂರು ವಿಧದ ಅಂಶಗಳುಳ್ಳ ಧರ್ಮವಾಗಿದೆ. ಇಡೀ ಬಸವಧರ್ಮ ರೈತಾಪಿ ಸಂಸ್ಕೃತಿಯ ಮೇಲೆ ನಿಂತಿದೆ. ಅಷ್ಟಾವರಣಗಳು ನಮ್ಮ ಮನಸ್ಸು ಐಹಿಕ ಆಸೆಗಳಿಗೆ ಒಳಗಾಗದಂತೆ ತಡೆಯುತ್ತವೆ. ಇದಕ್ಕೆ ರೈತರು ಬೀಜೋಪಚಾರ ಅನ್ನುತ್ತಾರೆ. ಷಟ್‌ಸ್ಥಲಗಳು ಮನಸ್ಸನ್ನು ವಿಕಾಸಗೊಳಿಸುತ್ತವೆ. ಕಾಯಕವು ಬಸವಧರ್ಮದ ತಳಪಾಯವಾಗಿದೆ. ಬಸವಣ್ಣನವರ ಧರ್ಮವು ನಿಸರ್ಗದ ಧರ್ಮವಾಗಿದೆ. ಕಾಯಕವು ಸೃಷ್ಟಿಗೆ ಪೂರಕವಾಗಿರಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಲೇಖಕಿ ವಿನಯಾ ವಕ್ಕುಂದ ಮಾತನಾಡಿ, “ವಚನ ಚಳವಳಿಯು ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಅಳವಡಿಸಲು ಪ್ರಯತ್ನಿಸಿತು. ಒಂದು ಕಾಲದ ಸಮಸ್ಯೆಗಳಿಗೆ ಉತ್ತರ ಕೊಡುವ ಸಲುವಾಗಿ ಚಳವಳಿಗಳು ಜನ್ಮ ತಾಳುತ್ತವೆ. ಆ ನಿಟ್ಟಿನಲ್ಲಿ ಬಸವಣ್ಣ ವಚನ ಚಳವಳಿಯ ರೂವಾರಿಯಾಗಿ ನಿಲ್ಲುತ್ತಾರೆ. ವಚನ ಸಾಹಿತ್ಯವನ್ನು ಸಾಂಪ್ರದಾಯಿಕ ಓದು, ನಿರಾಕರಣೆ ಓದು ಮತ್ತು ವೈಚಾರಿಕ ಓದು ಎನ್ನುವ ಮೂರು ವಿಧದಲ್ಲಿ ಓದಲಾಗುತ್ತದೆ. ವಚನ ಮತ್ತು ವಚನಕಾರರನ್ನು ಧರ್ಮದ ಚೌಕಟ್ಟಿನಿಂದ ಇಚೇಗೆ ತಂದು ಇಂದಿನ ಅಗತ್ಯಗಳಿಗೆ ಅನುಸಂಧಾನಗೊಳಿಸುವ ಪರಿವರ್ತಿತ ನೆಲೆಯಾಗಿ ಗಮನಿಸಬೇಕಿದೆ” ಎಂದರು.

ಇದನ್ನೂ ಓದಿ: ಧಾರವಾಡ | ಭಾರಿ ಮಳೆಗೆ ಪ್ರವಾಹ ಸೃಷ್ಟಿ; ನಡುಗಡ್ಡೆಯ ಮನೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬದ ರಕ್ಷಣೆ

ಡಾ. ಅವಿನಾಶ ಕವಿ ಮಾತನಾಡಿ, “ಬಸವ ಕ್ರಾಂತಿಯು ಕನ್ನಡ ನಾಡಿನಲ್ಲಿ ಅಪೂರ್ವ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ನೈತಿಕ, ವೈಚಾರಿಕ, ಸಾಂಸ್ಕೃತಿಕ ಚಿಂತನೆಗಳ ಮೂಲಕ ಹೊಸ ಧರ್ಮ ಮತ್ತು ಹೊಸ ಸಾಹಿತ್ಯ ಪ್ರಕಾರದ ಮಹಾಮಾರ್ಗಕ್ಕೆ ನಾಂದಿ ಹಾಡಿತು. ಈ ಕ್ರಾಂತಿಯು ದುಡಿಯುವ ವರ್ಗದ ಕ್ರಾಂತಿಯಾಗಿ ಹೊರಹೊಮ್ಮಿದ್ದು ವಿಶೇಷವೆನಿಸುತ್ತದೆ. ಬಸವಾದಿ ಶರಣರು ಭಾರತೀಯ ದರ್ಶನಗಳಲ್ಲಿ ವಿನೂತನವಾದ ಸೈದ್ಧಾಂತಿಕ ದರ್ಶನ ನೀಡಿದವರು. ವ್ಯಕ್ತಿಯ ಶುದ್ಧೀಕರಣ, ಸಮಾಜದ ಸಬಲಿಕರಣ, ವ್ಯಕ್ತಿತ್ವದ ಉನ್ನತೀಕರಣ ಹಾಗೂ ಮಾನವತೆಯ ಏಕೀಕರಣ ಬಸವಾದಿ ಶರಣರ ಒಟ್ಟಾರೆ ಆಶಯವಾಗಿದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...