ಡಿವೈಡರ್‌ಗೆ ಡಿಕ್ಕಿಹೊಡೆದು ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಹಾವೇರಿಯ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಪಂಚಾಕ್ಷರಯ್ಯಾ ಸಾಲಿಮಠ ಜೀವಂತ ದಹನವಾಗಿರುವ ಘಟನೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿಯ ಅರೆರಾ ಸೇತುವೆಯ ಹತ್ತಿರ ನಡೆದಿದೆ.
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಗದಗಕ್ಕೆ ಹೋಗುವ ಸಮಯದಲ್ಲಿ ಡಿ. 5ರ ರಾತ್ರಿ 7.30ರ ಹೊತ್ತಿಗೆ ಈ ಘಟನೆ ನಡೆದಿದೆ. ಮೃತ ಪಂಚಾಕ್ಷರಯ್ಯಾ ಸಾಲಿಮಠ (45) ಕಾರು ಚಾಲನೆ ಮಾಡುತ್ತಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಣ್ಣಿಗೇರಿ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ ಧಾವಿಸಿದ್ದಾರೆ.




