ಸಂಗೀತ ಗುರುಗಳು ಕೇಳುವುದನ್ನು ಅಭ್ಯಾಸ ಮಾಡಬೇಕು. ಶಾಸ್ತ್ರೀಯ ಸಂಗೀತ ಕಲಿಯುವ ಮಕ್ಕಳು ಹಾಡುವಾಗ ಸರಿಯಾಗಲಿ, ತಪ್ಪಾಗಲಿ ಹಾಡಲು ಹೆದರಬಾರದು. ಧಾರವಾಡವು ಹಿರಿಯ ಸಾಹಿತಿಗಳು ಮತ್ತು ಸುಪ್ರಸಿದ್ದ ಸಂಗೀತಗಾರರನ್ನು ಬೆಳೆಸಿದೆ ಎಂದು ಸಂಗೀತಾ ಕಟ್ಟಿ ಹೇಳಿದರು.
ನಗರದ ಮಂಗಳವಾರ ಪೇಟೆಯ ಮುದಿಮಾರುತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರಾದ ಸುಜಾತಾ ಕಮ್ಮಾರ, ವಿಜಯ ಗೋನಹಾಳು, ಬಸವರಾಜ ವಂದಲಿ, ಸೇರಿದಂತೆ ಅನೇಕರಿಗೆ ಸಾಧಕ ಶಿವ ಮತ್ತು ಕಲಾ ಪೋಷಕ ಸಾಧಕ ಶಿವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದನ್ನೂ ಓದಿ ಧಾರವಾಡ | ‘ಆಕಾಶ ಆಕಾರ ಚಂದಾತಲೇ ಬಹು ಪರಾಕ’ ಕಾರ್ಣಿಕ ನುಡಿದ ಗೊರವಯ್ಯ ಸಿರಿಮಲ್ಲ ತಿಪ್ಪಣ್ಣ
ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ ಆಚರಣಾ ಸಮಿತಿ ಹಾಗೂ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಕಾರ್ಯಾಧ್ಯಕ್ಷ ವೀರಣ್ಣ ಪತ್ತಾರ ಮಾತನಾಡಿ, 1976ರಲ್ಲಿ ಸಣ್ಣ ಪ್ರಮಾಣದ ಮಹಾಶಿವರಾತ್ರಿ ಸಂಗೀತ ಕಾರ್ಯಕ್ರಮ ಪ್ರಾರಂಭಿಸಿ ಇಂದು ಸಾವಿರಾರು ಜನರು ಹಾಗೂ ನೂರಾರು ಸಂಗೀತ ಕಲಾವಿದರು, ಸಂಗೀತಗಾರರು ಹೊರಹೊಮ್ಮಲು ಸಹಾಯ, ಸಹಕಾರ ನೀಡಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಡಾ. ಶಶಿಧರ ನರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.





