ಧಾರವಾಡ | ಪ್ರತಿ ಟನ್ ಕಬ್ಬು ಬೆಳೆಗೆ 4800ರೂ. ಬೆಲೆ ನಿಗದಿ ಮಾಡಲು ಆಗ್ರಹ

Date:

ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ 4800ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ, ಅಖಿಲ ಭಾರತ ರೈತ ಸಂಘಟನೆಯ ವತಿಯಿಂದ ಧಾರವಾಡ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರು ಮಾತನಾಡುತ್ತಾ, ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರ ರೈತರು ಹಲವಾರು ಕಷ್ಟ-ನಷ್ಟಗಳ ನಡುವೆ ಪ್ರತಿ ವರ್ಷ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆದು ದೇಶವಾಸಿಗಳಿಗೆ ಸಿಹಿ ತಿನ್ನಿಸಿ ತಾವು ಮಾತ್ರ ಕಹಿ ತಿಂದು ಕಾರ್ಖಾನೆ ಮಾಲೀಕರ ಶೋಷಣೆಯಿಂದ ಬಸವಳಿದ್ದಾರೆ. ಲಾಭವಿಲ್ಲದ ಬೆಲೆ ನಿಗಧಿ, ವಿಳಂಬ ಕಟಾವು, ಬಾಕಿ ಪಾವತಿ ಉಳಿಸಿಕೊಂಡಿರುವುದು, ಪ್ರಕೃತಿ ವಿಕೋಪ, ಹಲವು ವರ್ಷಗಳಿಂದ ಉತ್ಪಾದನಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ರೈತರಿಗೆ ದೊರೆಯುತ್ತಿರುವ ಕಬ್ಬಿನ ಬೆಲೆ ಆ ವೆಚ್ಚವನ್ನು ಕೂಡಾ ಮುಟ್ಟಲಾರದೆ ಇದ್ದು, ರೈತರು ಆರ್ಥಿಕ ಹಿನ್ನಡೆಯತ್ತ ಸಾಗುತ್ತಿದ್ದಾರೆ.

ಕಬ್ಬು ಬೆಳೆ ಮಾಡಲು ಪ್ರತಿ ಎಕರೆಗೆ ಸರಾಸರಿ ₹60,000 ರಿಂದ ₹80,000 ಖರ್ಚಾಗುತ್ತಿದೆ. ಗೊಬ್ಬರ, ಬೀಜ, ಕಾರ್ಮಿಕರ ವೇತನ, ನೀರಾವರಿ, ಡೀಸೆಲ್, ಯಂತ್ರೋಪಕರಣ ಮತ್ತು ಸಾರಿಗೆ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಸಮರ್ಪಕ ಹಾಗೂ ನ್ಯಾಯಯುತ ಬೆಲೆಯನ್ನು ನೀಡುತ್ತಿಲ್ಲ. ನೀಡುತ್ತಿಲ್ಲ ಇದು ಕೈಗಾರಿಕಾ ಮಾಲೀಕರ ಲಾಭ ಹೆಚ್ಚಿಸುವ ನೀತಿಯಾಗಿದೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತರು ಬೆಳೆದ ಕಬ್ಬಿಗೆ ನ್ಯಾಯಸಮ್ಮತ ಬೆಲೆ ನೀಡದೆ, ಕಾರ್ಖಾನೆಗಳು ಬಹುಮುಖ ಲಾಭ ಗಳಿಸುತ್ತಿರುವುದು ತುಂಬಾ ಅನ್ಯಾಯಕರವಾಗಿದೆ. ರೈತರ ಕಷ್ಟದಿಂದಲೇ ಕಾರ್ಖಾನೆಗಳು ನಿಲ್ಲುತ್ತಿವೆ; ಆದ್ದರಿಂದ ಈ ಲಾಭದ ಒಂದು ನ್ಯಾಯಯುತ ಭಾಗ ರೈತರಿಗೆ ಹಂಚಿಕೆಯಾಗಬೇಕು. ಕೇಂದ್ರ ಸರ್ಕಾರ 2025-2026 ಸಾಲಿನಲ್ಲಿ ಕಬ್ಬಿನಲ್ಲಿ ದೊರೆಯುವ ಸಕ್ಕರೆಯ ಪ್ರಮಾಣವು ಶೇಕಡ 10.25 ಇದ್ದರೆ 3550 ರೂಪಾಯಿಗಳನ್ನು ಮತ್ತು ಹೆಚ್ಚುವರಿ ಪ್ರಮಾಣದ ಪ್ರತಿ ಶೇಕಡ 1 ಕ್ಕೆ ರೂ. 34.6 ಹೆಚ್ಚಿಸಬೇಕು ಎಂದು ತೀರ್ಮಾನಿಸಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಒಂದು ಟನ್ ಕಬ್ಬಿಗೆ 4000 ರೂಗಳನ್ನು ರೈತರಿಗೆ ನೀಡಲಾಗುತ್ತಿದೆ ಹಾಗೂ ಕೇರಳ ಮತ್ತು ತಮಿಳುನಾಡಿನಲ್ಲಿ ಕರ್ನಾಟಕದ ಕಬ್ಬಿನ ಗುಣಮಟ್ಟ ಇಲ್ಲದಿದ್ದರೂ ಕರ್ನಾಟಕಕ್ಕಿಂತ ಹೆಚ್ಚಿನ ಬೆಲೆ ನೀಡಲಾಗುತ್ತಿದೆ.

ಕಬ್ಬು ಉತ್ಪಾದನೆ ಮತ್ತು ಮಾರುಕಟ್ಟೆ ಬೆಲೆಗಳ ಹಿನ್ನಲೆ ಪರಿಗಣಿಸಿ, ಪ್ರತಿ ಟನ್ ಗೆ ಕನಿಷ್ಠ ₹4800 ನಿಗದಿ ಮಾಡುವುದು ಮಾತ್ರ ನ್ಯಾಯಸಮ್ಮತ ಕ್ರಮ. ಹೀಗಾಗಿ, ಸರ್ಕಾರವು ತಕ್ಷಣವೇ ಕಬ್ಬಿನ ಎಫ್‌ಆರ್‌ಪಿ (FRP) ಬೆಲೆಯನ್ನು ಪರಿಷ್ಕರಿಸಿ ಪ್ರತಿ ಟನ್ ಗೆ ₹4800 ಎಂದು ನಿಗದಿ ಮಾಡಿ, ಈ ದರವನ್ನು ಎಲ್ಲ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಲು ಆದೇಶಿಸಬೇಕು. ಅಲ್ಲದೆ, ಕಾರ್ಖಾನೆಗಳು ರೈತರ ಕಬ್ಬು ಹಣವನ್ನು ತಿಂಗಳುಗಟ್ಟಲೆ ಬಾಕಿ ಇಡುವುದನ್ನು ತಡೆದು, ತಕ್ಷಣ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಕೇವಲ ಸಕ್ಕರೆಯಷ್ಟೇ ಅಲ್ಲ ಅನೇಕ ಉಪ ಉತ್ಪನ್ನಗಳಿಂದ ಭಾರೀ ಲಾಭ ಗಳಿಸುತ್ತಿವೆ ಎಂದರು.

ಬೇಡಿಕೆಗಳು:
ಕಬ್ಬಿನ ಬೆಲೆಯನ್ನು ತಕ್ಷಣ ರೂ. 4800 ಟನ್ ಗೆ ನಿಗದಿ ಮಾಡಬೇಕು.
ರಂಗರಾಜನ್ ವರದಿಯಂತೆ ಉಪ ಉತ್ಪನ್ನಗಳ ಬಾಬ್ತು ಕಳೆದ ಸಾಲಿನ ಬಾಕಿ ಒಂದು ಟನ್ ಗೆ ₹ 150/- ಗಳನ್ನು ಬಡ್ಡಿ ಸಹಿತ ಕೊಡಬೇಕು.
ಬಾಕಿ ಉಳಿದ ಕಬ್ಬು ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
ಭವಿಷ್ಯದಲ್ಲಿ ಕಬ್ಬಿನ ದರ ನಿಗದಿಗೆ ರೈತರ ಪ್ರತಿನಿಧಿಗಳನ್ನೂ ಒಳಗೊಂಡ ಸಮಿತಿಯನ್ನು ರಚಿಸಬೇಕು.

ಇದನ್ನೂ ಓದಿ ಧಾರವಾಡ | ಕನ್ನೇರಿ ಸ್ವಾಮೀಜಿ ಜಿಲ್ಲೆಗೆ ಬರದಂತೆ ಜಿಲ್ಲಾಧಿಕಾರಿ ಆದೇಶ

    ರಾಜ್ಯ ಅಧ್ಯಕ್ಷ ಎಂ ಶಶಿಧರ್, ರಾಜ್ಯ ಕಾರ್ಯದರ್ಶಿ ಬಿ ಭಗವಾನ ರೆಡ್ಡಿ ಹಾಗೂ ಧಾರವಾಡ ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನೆಯಲ್ಲಿ ಎಸ್ ಎನ್ ಸ್ವಾಮಿ, ವಿ ನಾಗಮ್ಮಳ್, ಶಿವಪ್ರಕಾಶ್, ಹನುಮಂತಪ್ಪ, ಗೋವಿಂದ, ಮಲ್ಲನಗೌಡ, ರಾಜ ಗುರಳ್ಳಿ, ಜಮಾಲ್ ಸಾಬ್, ಉಳುವಪ್ಪ ದೇವಟಗಿ ಮುಂತಾದವರು ಇದ್ದರು.

    eedina
    ಈ ದಿನ ಡೆಸ್ಕ್‌
    Website |  + posts

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

    ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

    ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

    "ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

    ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

    ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

    ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

    ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...