ಧಾರವಾಡ | ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ; ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿರುವ ಜನ್ನತ್ ನಗರ

Date:

ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ವ್ಯಾಪ್ತಿಗೆ ಬರುವ ಜನ್ನತ್ ನಗರದ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಮೂಲ ಸೌಕರ್ಯಗಳ ಅಭಾವದಲ್ಲಿ ನರಳುತ್ತಿದ್ದಾರೆ. ನೀರು, ರಸ್ತೆ, ಒಳಚರಂಡಿ, ವಿದ್ಯುತ್, ಕಸ ನಿರ್ವಹಣೆ ಸೇರಿದಂತೆ ಬದುಕಿಗೆ ಅವಶ್ಯಕವಾದ ಅನೇಕ ವಿಷಯಗಳಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಸಮಸ್ಯೆ ಪರಿಹರಿಸುವತ್ತ ಯಾವೊಬ್ಬ ಅಧಿಕಾರಿಯೂ ಗಮನಹರಿಸುತ್ತಿಲ್ಲ ಎನ್ನುವುದು ಜನ್ನತ್‌ ನಗರ ನಿವಾಸಿಗಳ ಅಳಲು.

ಮಳೆಗಾಲದಲ್ಲಿ ಸುಸೂತ್ರವಾಗಿ ಬದುಕು ಸಾಗಿಸಲು ಸಾಧ್ಯವಾಗದೆ ಚರಂಡಿಯ ಗಲೀಜು ನೀರು ಮನೆಗಳನ್ನು ಸೇರಿ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ಇನ್ನು ಬಡಾವಣೆಯ ಓಣಿಗಳಲ್ಲಿ ಗಟಾರುಗಳೇ ಇಲ್ಲ. ಗಟಾರುಗಳಿದ್ದ ಕಡೆಗೆ ಸ್ವಚ್ಛತೆಯಿಲ್ಲ. ಚೇಂಬರ್ (ಒಳಚರಂಡಿ) ತುಂಬಿ ಗಲೀಜು ನೀರು ಒಮ್ಮೊಮ್ಮೆ ಮನೆಗಳಿಗೆ ನುಗ್ಗಿದ್ದೂ ಉಂಟು. ಜೊತೆಗೆ ವಿದ್ಯುತ್ ಕಂಬವೊಂದು ಬಿರುಕು ಬಿದ್ದು ಬಾಗಿ ನಿಂತಿದೆ. ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ವಿದ್ಯಾಗಿರಿ ಕೆಇಬಿ ಕಚೇರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಈದಿನ.ಕಾಮ್ ಜೊತೆಗೆ ಸ್ಥಳೀಯ ನಿವಾಸಿ ದೀಪಾ ಮಾತನಾಡಿ, “ಕಳೆದ 15 ದಿನಗಳಿಂದ ಚೇಂಬರ್ ತುಂಬಿ ಹರಿಯುತ್ತಿದ್ದು, ಇಲ್ಲಿಯೇ ಹಾದು ಹೋಗುವಾಗ ಕಾರ್ಪೊರೇಟರ್ ಗಮನಕ್ಕೆ ತಂದಿದ್ದೇವೆ. ಆದರೂ ಇನ್ನುವರೆಗೂ ಈ ಸಮಸ್ಯೆ ಬಗೆಹರಿದಿಲ್ಲ. ಇಲ್ಲೊಂದು ನೇತು ಹಾಕಿರುವ ಸಿಸಿ ಕ್ಯಾಮೆರಾ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ ರಾತ್ರಿ ಆದರೆ ಸಾಕು ದಿನಂಪ್ರತಿ ಜಗಳಗಳು ನಡೆಯುತ್ತವೆ. ಅವರುಗಳ ಕೈಗಳಲ್ಲಿ ಚಾಕು, ಚೂರಿ ಇರುತ್ತವೆ. ಇದರಿಂದ ನಾವು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನಾವೇ ಸ್ವಂತ ಖರ್ಚಿನಲ್ಲಿ ಹಣ ಸಂಗ್ರಹಿಸಿ ರಿಪೇರಿ ಮಾಡಿಸುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಸರಿಯಾಗಿ ರಸ್ತೆ ಇಲ್ಲದೆ, ಒಳಚರಂಡಿ ಸಂಪರ್ಕವಿಲ್ಲದೆ, ಸಣ್ಣ ಗಟಾರುಗಳಿಲ್ಲದೆ ಒದ್ದಾಡುತ್ತಿದ್ದೇವೆ. ಇನ್ನು ಧ್ವನಿ ಇಲ್ಲದವರ ತುಳಿಯುತ್ತಾ ಮಹಾನಗರ ಪಾಲಿಕೆಯು ತನ್ನ ಕಾರ್ಯವನ್ನು ಮುನ್ನಡೆಸಿಕೊಂಡು ನಡೆಯುತ್ತಿದೆ. ಬಡವರ ಧ್ವನಿಯನ್ನು ಕೇಳುವವರು ಯಾರು ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ವೋಟ್ ಕೇಳಲೆಂದು ಮಾತ್ರ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿನ ಜನ ಮಾತ್ರ ಸಮಸ್ಯೆಯಲ್ಲಿಯೇ ಕೈ ತೊಳೆಯುತ್ತಿದ್ದಾರೆ. ಮಳೆ ಬಂದರೆ ಸಾಕು ಮೊಣಕಾಲುದ್ದ ನೀರು ಬಂದು ಮನೆಯ ಒಳಗೂ ಸೇರಿ ಬಿಡುತ್ತದೆ. ಆ ನೀರನ್ನು ಹೊರ ಹಾಕಬೇಕಾದರೆ ಹರಸಾಹಸವೇ ಪಡಬೇಕು. ನಮ್ಮ ಏರಿಯಾದ ಕಡೆಗೆ ಟೋಲ್ ನಾಕಾ, ತೇಜಸ್ವಿ ನಗರ, ಎನ್.ಟಿ.ಟಿ.ಎಫ್ ಸೇರಿದಂತೆ ವಿವಿಧ ಬಡಾವಣೆಗಳ ಕೊಳಚೆ ನೀರು ಬಂದು ಸೇರುತ್ತದೆ. ವಿಪರೀತ ನೀರು ಬಂದು ಕೆಲವೊಂದು ಬಾರಿ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ವೋಟರ್ ಐಡಿ ಇತ್ಯಾದಿ ದಾಖಲೆಗಳನ್ನು ಕಳೆದುಕೊಂಡಿದ್ದೇವೆ” ಎನ್ನುತ್ತಾರೆ ಸ್ಥಳೀಯ ನಿವಾಸಿ ಮಾಬುಬಬಲಿ ನದಾಫ್.

ಶನ್ನು ಎನ್ನುವವರು ಮಾತನಾಡಿ, “ಕಳೆದ ಎರಡು ಮೂರು ತಿಂಗಳ ಹಿಂದೆಯೇ ಬಿರುಕು ಬಿದ್ದಿರುವ ವಿದ್ಯುತ್ ಕಂಬವನ್ನು ಸರಿಪಡಿಸಲು ಹಲವು ಬಾರಿ ಕೆಇಬಿ ಕಚೇರಿಗೆ ದೂರು ನೀಡಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಕಡೆಗೆ ಯಾರೂ ತಿರುಗಿ ನೋಡುತ್ತಿಲ್ಲ. ಹಲವು ಬಾರಿ ಕೆಇಬಿ ಕಚೇರಿಗೆ ಹೋಗಿ ನೇರವಾಗಿ ಹೇಳಿದರೂ ಕೆಇಬಿ ಅಧಿಕಾರಿಗಳು ಯಾರಿಗೆ ಕಂಪ್ಲೇಂಟ್ ಕೊಟ್ಟಿದ್ದೀರಿ ಎಂದು ನಮ್ಮನ್ನೇ ಗದರಿಸಿ ಕಳುಹಿಸುತ್ತಾರೆ. ಒಂದೆರಡು ಸಲ ನಾಲ್ಕೈದು ಜನರನ್ನು ಕಳುಹಿಸಿದ್ದರು. ಅವರು ಬಂದು ನೋಡಿ ಇಲ್ಲಿಯ ಸಮಸ್ಯೆಯನ್ನು ಬಗೆಹರಿಸದೆ ಸುಮ್ಮನೆ ಹೋಗಿಬಿಟ್ಟರು. ಕಾರಣ ಕೇಳಿದರೆ ಈ ಕಂಬ ಇರುವುದು ಸಂದಿಯಲ್ಲಿ ಹೀಗಾಗಿ ಇದನ್ನು ರಿಪೇರಿ ಮಾಡುವುದು ಕಷ್ಟ ಎಂದು ಹೇಳಿ ಸುಮ್ಮನಾಗಿಬಿಟ್ಟರು. ಒಂದು ವೇಳೆ ಈ ವಿದ್ಯುತ್ ಕಂಬ ಮುರಿದುಕೊಂಡು ಯಾರ ಮೇಲಾದರೂ ಬಿದ್ದು ಏನಾದರೂ ಅನಾಹುತಗಳು ಸಂಭವಿಸಿದರೆ ನೇರವಾಗಿ ಕೆಇಬಿ ಅವರೇ ನೇರ ಹೊಣೆ ಆಗುತ್ತಾರೆ. ಅಂತಹ ಅಹಿತಕರ ಘಟನೆಗಳು ನಡೆದರೆ ಕೆಇಬಿ ಕಚೇರಿಗೆ ಬೆಂಕಿ ಹಚ್ಚುತ್ತೇವೆ” ಎಂದು ಎಚ್ಚರಿಸಿದರು.

ಈ ಕುರಿತು ವಾರ್ಡ್ ಕಾರ್ಪೊರೇಟರ್ ಎ ಎಮ್ ಮುಲ್ಲಾ ಮಾತನಾಡಿ, “ಇಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮತ್ತು ಕಾರ್ಪೊರೇಷನ್ ವತಿಯಿಂದ ಕಡಿಮೆ ಅನುದಾನ ಬರುತ್ತದೆ. ಆದರೂ ನಮ್ಮ ಶಕ್ತಿ ಮೀರಿ ಕಾಮಗಾರಿಗಳನ್ನು ಮಾಡಿಸಿದ್ದೇವೆ. ಜನರು 99 ಒಳ್ಳೆಯ ಕೆಲಸಗಳನ್ನು ಕೈಬಿಟ್ಟು 1 ಸಮಸ್ಯೆಯ ಬಗ್ಗೆ ಮಾತನಾಡುತ್ತಾರೆ” ಎಂದರು.

WhatsApp Image 2025 10 13 at 6.10.44 PM 1

“ವಿದ್ಯುತ್ ಕಂಬ ಬಿರುಕು ಬಿಟ್ಟಿದ್ದು ಯಾವಾಗ ಮುರಿದು ಬೀಳುವುದೋ ಎನ್ನುವ ಭಯದ ವಾತಾವರಣದಲ್ಲಿ ಬದುಕುತ್ತಿರುವ ನಮ್ಮಂತ ಬಡವರನ್ನು ಯಾರು ತಿರುಗಿ ನೋಡುತ್ತಿಲ್ಲ. ಹಲವು ಬಾರಿ ರಾಜಕಾರಣಿಗಳ ಮನೆ ಬಾಗಿಲು ಕಾದಿದ್ದೇವೆ. ಆದರೂ ಕೂಡ ಪ್ರಯೋಜನವಾಗಿಲ್ಲ. ಮತ್ತೆ ನಾವೆಲ್ಲಿ ಹೋಗಿ ನ್ಯಾಯವನ್ನು ಕೇಳಬೇಕು? ಚೇಂಬರ್ ಗಳು ತುಂಬಿ ಗಲೀಜು ನೀರೆಲ್ಲ ಮನೆಗಳನ್ನು ಸೇರಿಕೊಳ್ಳುತ್ತವೆ. ಅಂತ ಸಮಯದಲ್ಲಿ ಕೆಲಸ ಬಿಟ್ಟು ಅದನ್ನು ನಾವೇ ಸ್ವತಃ ಕ್ಲೀನ್ ಮಾಡಿದ್ದೇವೆ. ನಾವೇ ವಯಕ್ತಿಕವಾಗಿ ಹಣ ಸಂಗ್ರಹಿಸಿ ದುಡ್ಡು ಕೊಟ್ಟು ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದೇವೆ ಆದರೆ ರಾಜಕಾರಣಿಗಳು ಯಾರು ಕೂಡ ತಿರುಗಿ ನೋಡುತ್ತಿಲ್ಲ” ಎನ್ನುತ್ತಾರೆ ಮುನೇರ ಬೇಗಂ.

ಇದನ್ನೂ ಓದಿ: ಧಾರವಾಡ | ಚಿಗರಿ ಬಸ್ಸಿನಲ್ಲಿ ಬೆಂಕಿ; ಅಗ್ನಿಶಾಮಕದಳ ದೌಡು

ಈ ಬಡಾವಣೆಯಲ್ಲಿ ಅನೇಕ ಸಮಸ್ಯೆಗಳು ಎದ್ದು ಕಾಣುತ್ತಿವೆ. ಅದೇ ರೀತಿಯಾಗಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಆವರಣಕ್ಕೆ ವಿಪರೀತ ಮಳೆಯಾದರೆ ದೊಡ್ಡ ಗಟಾರಿನ ಕೊಳಚೆ ನೀರು ಬಂದು ಸೇರಿಕೊಳ್ಳುತ್ತದೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಕೂಡ ಸಮಸ್ಯೆಯಲ್ಲಿ ಸಿಲುಕಿಕೊಂಡು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಸಣ್ಣ ಸಣ್ಣ ಸಂದಿ, ಗೊಂದಿಯಲ್ಲಿ ಇರುವವರ ಕಷ್ಟದ ಬಗ್ಗೆ ಕೇಳುವವರೇ ಇಲ್ಲ. ಅನೇಕ ವರ್ಷಗಳಿಂದ ಸ್ವಂತ ಮನೆ ಇಲ್ಲದೆ, ಬಾಡಿಗೆ ಮನೆಯಲ್ಲೇ ಬದುಕು ಸಾಗಿಸುತ್ತಿರುವುದು, ದುಡಿಮೆಗಳಿಲ್ಲದೆ ಅವರಿವರ ಮನೆಯ ಮುಸುರೆ ತೊಳೆಯುವುದು, ಸರಿಯಾಗಿ ರಸ್ತೆ ಇಲ್ಲದಿರುವುದು, ಮನೆಯ ಮುಂದೆ ಸಣ್ಣ ಚರಂಡಿಗಳೂ ಇಲ್ಲದಿರುವುದು, ಮತ್ತು ಜನ್ನತ್ ನಗರದಿಂದ ವಿದ್ಯಾಗಿರಿ ಕೆಡೆಗೆ ಹೋಗುವ ಮಾರ್ಗದುದ್ದಕ್ಕೂ ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಇವಿಷ್ಟು ದೊಡ್ಡ ಸಮಸ್ಯೆಗಳಾಗಿವೆ. ಇವುಗಳ ಹಿಂದೆ ಕಾಣದ ಸಣ್ಣ ಸಮಸ್ಯೆಗಳೇಷ್ಟೋ ಇವೆ.

ನಮ್ಮ ನೆಚ್ಚಿನ ಶಾಸಕ ಅರವಿಂದ ಬೆಲ್ಲದ ಅವರು ಇಂತಹ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಅಭಿವೃದ್ಧಿ ಕಡೆಗೆ ಗಮನಹರಿಸದೆ ಅನ್ಯವಿಷಯಗಳ ಕುರಿತು ಹೇಳಿಕೆ ಕೊಡುತ್ತಾರೆ. ಹೀಗಾದರೆ ನಮ್ಮ ನೋವು ಕೇಳುವವರಾರು? ನಮ್ಮ ಸಮಸ್ಯೆಗಳು ಬಗೆಹರಿಯುವುದೆಂತು? ಎಂದು ತಮ್ಮ ನೋವನ್ನು ಹಂಚಿಕೊಳ್ಳುತ್ತಾರೆ ಸ್ಥಳೀಯ ನಿವಾಸಿಗಳು.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...