ಸೂಫಿಸಂತ ಕಲೀಮ್ ಮುಲ್ಲಾ ಶಾಹ್ ಖಾದ್ರಿ ಅವರ ಜನ್ಮ ದಿನದ ಅಂಗವಾಗಿ
ಧಾರವಾಡದ ಲಕ್ಷ್ಮೀ ಸಿಂಗಂಕೇರಿ ನಗರದ ಟ್ರಸ್ಟ್ ನ ವತಿಯಿಂದ ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕಿವುಡು ಮಕ್ಕಳ ಉಚಿತ ವಸತಿಯುತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಸಿಹಿ ಮತ್ತು ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಹಸನಸಾಬ್ ಮೇಲಿನಮನಿ ಮಾತನಾಡಿ, ಜಗತ್ತಿನಲ್ಲಿರುವ ಮೂಕರು, ಕಿವುಡರು, ಕುಂಟರನ್ನು ಮತ್ತು ವಿಶೇಷ ಚೇತನ ಮಕ್ಕಳನ್ನು ಕೀಳುತನದಿಂದ ಕಾಣುವುದು ಸರಿಯಲ್ಲ. ಅಂತವರಿಗೆ ನಮ್ಮ ಕೈಲಾದ ಸಹಾಯ, ಸಹಕಾರ ನೀಡಬೇಕು. ಅದಕ್ಕಿಂತ ದೊಡ್ಡದಾದ ಪುಣ್ಯದ ಕೆಲಸ ಮತ್ತೊಂದಿಲ್ಲ. ತಂದೆ ತಾಯಿ ತೀರಿಕೊಂಡು ಉಳಿದು ಅನಾಥವಾಗಿರುವ ಮಕ್ಕಳ ತಲೆಯ ಮೇಲೆ ಕೈಯಾಡಿಸಿ ಸಂತೈಸಿದರೆ ಪಾಪ ಪರಿಹಾರ ಆಗುತ್ತದೆ ಎಂದು ನನ್ನ ಗುರುಗಳಾದ ಕಲೀಮ್ ಮುಲ್ಲಾ ಶಾಹ್ ಖಾದ್ರಿ ಅವರು ಹೇಳುತ್ತಿದ್ದರು ಎನ್ನುತ್ತಾ ಕಿವುಡು ಮತ್ತು ಮೂಕ ಮಕ್ಕಳ ಪಾಲಿಸುತ್ತಿರುವ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯ ಬಸವರಾಜ್ ಮುತ್ತಳ್ಳಿ ಮಾತನಾಡಿ, ವಿಶೇಷ ಚೇತನ ಮತ್ತು ಕಿವುಡು ಮಕ್ಕಳನ್ನು ಇರಿಸಿಕೊಂಡು ಜೋಪಾನ ಮಾಡುತ್ತಿರುವ ಈ ಸಂಸ್ಥೆಯು ನಿಜವಾಗಲೂ ಗ್ರೇಟ್ ಆಗಿದೆ. ಇಂತಹ ಕೆಲಸಕ್ಕೆ ಶಬ್ಬಾಷ ಹೇಳಲೇಬೇಕು ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ ಧಾರವಾಡ | ದ.ರಾ. ಬೇಂದ್ರೆ ಅವರಿಗೆ ಸರ್ಕಾರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಬೇಕು: ಡಾ. ಸರಜು ಕಾಟಕರ್
ವೇದಿಕೆ ಮೇಲಿದ್ದ ಪೂಜ್ಯರು ಹಾಗೂ ಹಿರಿಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಅಸ್ಲಮ್, ಸಮೀರ್, ಸೈಯ್ಯದ್ ಕಲೆಗಾರ, ರಫೀಕಸಬ್, ಇಮಾಮಸಾಬ್ ಕಟ್ಟಿಮನಿ, ದಾದಾಪಿರ್ ಮೋಕಾಶಿ, ಇಂತ್ಯಾಜ್ ಶೇಕ್, ಜಾಫರ್ ಶೇಕ್, ಆಸೀಫ್ ಇವರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಉಪಷ್ಠಿತರಿದ್ದ ಶಬ್ಬೀರ್ ಅಹ್ಮದ್ ಗುರುಗಳು, ಪುಂಡಲೀಕ್ ಲೋಕುರ್, ಶಾಲೆಯ ಗುರುಮಾತೆ ಕವಿತಾ, ಇನ್ನಿತರರು ಇದ್ದರು. ಶಾಲೆಯ ವಾರ್ಡನ್ ಹನುಮಂತ ಹಂಡಿ ನಿರೂಪಿಸಿದರು.





