ಧಾರವಾಡ | ವ್ಯಸನ ಮುಕ್ತಿಯೇ ವ್ಯಕ್ತಿತ್ವ ಪರಿವರ್ತನೆಯ ಮೊದಲ ಪ್ರಯತ್ನ: ನ್ಯಾ. ಪರಶುರಾಮ್ ದೊಡ್ಡಮನಿ

Date:

ವ್ಯಸನಗಳಿಂದ ವ್ಯಕ್ತಿಯ ಬದುಕು ಕಷ್ಟಕರವಾಗುತ್ತದೆ. ವ್ಯಸನದಿಂದ ಮುಕ್ತವಾಗುವುದು ವ್ಯಕ್ತಿತ್ವದ ಪರಿವರ್ತನೆಯ ಮೊದಲ ಪ್ರಯತ್ನವಾಗಿದೆ ಎಂದು ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ದೊಡ್ಡಮನಿ ಹೇಳಿದರು.

ನಗರದ ಕೇಂದ್ರ ಕಾರಾಗೃಹದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಇಲಾಖೆ, ಪೊಲೀಸ್ ಇಲಾಖೆ, ಬೆಂಗಳೂರಿನ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಹಾಗೂ ಕೇಂದ್ರ ಕಾರಾಗೃಹ ಸಂಯುಕ್ತ ಆಶ್ರಯದಲ್ಲಿ ಇಲಕಲ್ ಡಾ. ಮಹಾಂತ ಅಪ್ಪಗಳ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಉದ್ಘಾಟಿಸಿ, ಮಾತನಾಡುತ್ತಾ, “ಸಮಾಜದಲ್ಲಿ ಜನರು ಸಾಮಾಜಿಕವಾಗಿ, ಕೌಟುಂಬಿಕವಾಗಿ ನೆಮ್ಮದಿಯಿಂದ ಇರಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಮತ್ತು ದುಶ್ಚಟಗಳಿಗೆ ಬಲಿಯಾದವರು ಅದರಿಂದ ಹೊರಗೆ ಬಂದರೆ ಅದು ಸಾಧ್ಯವಾಗುತ್ತದೆ. ಒಂದು ಸಾರಿ ವ್ಯಸನಗಳನ್ನು ತ್ಯಜಿಸಿದ ನಂತರ ಮತ್ತೆ ಅದನ್ನು ಸೇವಿಸಿದರೆ ಡಾ.ಮಹಾಂತಪ್ಪನವರಿಗೆ ದ್ರೋಹ ಮಾಡಿದಂತೆ” ಎಂದರು.

“ವ್ಯಸನದಿಂದ ದೂರವಾದ ಮೇಲೆ ಮತ್ತೆ ಆ ಬಗ್ಗೆ ಯೋಚಿಸಬಾರದು. ವ್ಯಸನಿಗಳ ಸಹವಾಸದಿಂದ ದೂರವಿರಬೇಕು. ಚಟಗಳನ್ನು ಹತ್ತಿಸಿಕೊಳ್ಳುವುದಕ್ಕೂ ಮುನ್ನ ಅದು ಯಾವ ರೀತಿ ಮನಸ್ಸಿನ ಮೇಲೆ, ದೇಹದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥೈಸಿಕೊಂಡು, ಹೆಜ್ಜೆ ಇಡಬೇಕು. ಮನ ಪರಿವರ್ತನೆ ಆಗುವಂತಹ ಒಳ್ಳೆಯ ಪುಸ್ತಕಗಳನ್ನು ಓದಬೇಕು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, “ಅನೇಕರಿಗೆ ತಪ್ಪು ನಿರ್ಧಾರ, ಸ್ನೇಹಿತರ ಒತ್ತಡ ಅಥವಾ ಮಾನಸಿಕ ಒತ್ತಡದಿಂದಾಗಿ ಚಟ ಶುರುವಾಗುತ್ತದೆ. ವ್ಯಸನವೆಂಬುದು ಕೇವಲ ಒಂದು ಕೆಟ್ಟ ಚಟವಲ್ಲ. ಅದೊಂದು ಮಾರಣಾಂತಿಕ ಕಾಯಿಲೆ. ಅದು ಮೊದಲು ನಿಮ್ಮ ದೇಹವನ್ನು, ನಂತರ ನಿಮ್ಮ ಮನಸ್ಸನ್ನು, ಆ ಬಳಿಕ ನಿಮ್ಮ ಕುಟುಂಬವನ್ನು ಮತ್ತು ಕೊನೆಗೆ ನಿಮ್ಮ ಇಡೀ ಬದುಕನ್ನೇ ನಾಶಮಾಡುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ಧಾರವಾಡ | ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿ: ಭುವನೇಶ್ ಪಾಟೀಲ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಮಹಾದೇವ ನಾಯ್ಕ ಮಾತನಾಡಿ, “ಇಲಕಲ್ ಡಾ. ಮಹಾಂತಪ್ಪಗಳ ಬದುಕಿನ ಪ್ರೇರಣೆ ಎಲ್ಲರಿಗೂ ಸಿಗಬೇಕು. ವ್ಯಸನಗಳ ಕಾರಣಗಳಿಂದಾಗಿ ಕಾರಾಗೃಹ ಸೇರಿರುವ ಮನಸ್ಸುಗಳಲ್ಲಿ ಬದಲಾವಣೆ ಆಗಬೇಕು. ಇಂದಿನಿಂದ ಎಲ್ಲ ಚಟ, ವ್ಯಸನಗಳಿಂದ ಮುಕ್ತರಾಗುತ್ತೇವೆ ಮತ್ತು ಉತ್ತಮ ಜೀವನ ರೂಪಿಸಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡೋಣ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾದಕ ವಸ್ತು ಹಾಗೂ ವ್ಯಸನ ಮುಕ್ತತೆಯ ಉಪಾಯಗಳ ವಿಷಯದ ಕುರಿತು ಡಿಮ್ಹಾನ್ಸ್‍ನ ಮನೋವೈದ್ಯ ಡಾ.ಮಹೇಶ ಎಂ. ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ನಿರ್ಮಲ ಬಿ.ಆರ್., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್. ಎಂ. ಹಿರೇಮಠ, ಕೇಂದ್ರ ಕಾರಾಗೃಹದ ಶಿಕ್ಷಕ ಪಿ.ಬಿ.ಕುರುಬೆಟ್ಟ, ಕಾರಾಗೃಹದ ಮನೋವೈದ್ಯ ಡಾ. ಲೋಕನಾಥ ಪುಠಾಣಿಕರ ಮತ್ತು ಜೈಲರ್‌ಗಳಾದ ಮಹಾದೇವಿ ಮರಕಟ್ಟಿ, ದೀಪಾ ರಾಮದುರ್ಗ, ಸುರೇಶ ಕರಗಾವಿ, ಚೇತನ ಕರೋಳಿ, ಸತೀಶ ವಡ್ಡರ ಸೇರಿದಂತೆ ಕೇಂದ್ರ ಕಾರಾಗೃಹದ ಸಿಬ್ಬಂದಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...