ಧಾರವಾಡ | ಗಜಾನನ ಮಹಾಲೆ ಬಡತನದಲ್ಲಿಯೂ ಬಾಳಿ ಬದುಕಿದರು: ಡಾ. ವೀರಣ್ಣ ರಾಜೂರ

Date:

ಗಜಾನನ ಮಹಾಲೆಯವರು ಪ್ರಸಾದನದಲ್ಲಿ ಪ್ರಾವಿಣ್ಯತೆಯನ್ನು ಪಡೆದವರಾಗಿದ್ದು, ಅನೇಕ ನಾಟಕ, ಸಂಗೀತ ಮತ್ತು ಚಿತ್ರಕಲೆಗಳಲ್ಲಿಯೂ ಪರಿಣತೆಯನ್ನು ಪಡೆದವರಾಗಿದ್ದು ಸರಕಾರಿ ಅನುದಾನಿತ ಟ್ರಸ್ಟ್ಗಿಂತ, ಈ ಪ್ರತಿಷ್ಠಾನ ಗಜಾನನ ಮಹಾಲೆಯವರ ವ್ಯಕ್ತಿತ್ವದಿಂದ ಅವರ ಅಭಿಮಾನಗಳಿಂದ ರಚಿತವಾಗಿದ್ದು ಇದಕ್ಕೆ ಮಹತ್ವವಿದೆ ಎಂದು ನುಡಿದರಲ್ಲದೆ ಪ್ರಸಾಧನದಲ್ಲಿ ಹೊಸ ಹೊಸ ಸೂಕ್ಷ್ಮ ರೀತಿಯಿಂದ ಬಣ್ಣದಲ್ಲಿ ಹೊಸತನವನ್ನು ಕಂಡುಕೊಂಡವರು ಅಲ್ಲದೆ, ತಮ್ಮ ಬಡತನದ ಜೀವನದಲ್ಲಿಯೂ ನಮ್ಮ ನಡುವೆ ಬದುಕಿ ಬಾಳಿ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಹಿರಿಯ ವಿದ್ವಾಂಸ ಡಾ. ವೀರಣ್ಣ ರಾಜೂರ ಹೇಳಿದರು.

ದಿ. ಗಜಾನನ ಮಹಾಲೆ ಕಲಾ ಪ್ರತಿಷ್ಠಾನ ವತಿಯಿಂದ ಜ. 27ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾಭವನದಲ್ಲಿ ನಾಡಿನ ಶ್ರೇಷ್ಠ ಪ್ರಸಾದನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ದಿ. ಶ್ರೀ ಗಜಾನನ ಮಹಾಲೆಯವರ 94ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಲಾ ಉಪಾಸಕ ಪ್ರಶಸ್ತಿ 2026 ಅನ್ನು ಪ್ರದಾನ ಮಾಡಿ ಮಾತನಾಡಿದರು.

ಅಭಿನಯ, ಆಂಗೀಕ, ವಾಚಿಕ ಹಾಗೂ ಸಾತ್ವಿಕ, ಆಹರ‍್ಯ ಇವು ವ್ಯಕ್ತಿಯನ್ನು ಕಲಾವಿದರನ್ನಾಗಿ ರೂಪಿಸುತ್ತವೆ. ಅವರು ಪಾತ್ರಕ್ಕೆ ಪ್ರಸಾದನ ವೇಷಭೂಷಣದ ಮೂಲಕ ಜೀವ ತುಂಬುತ್ತಿದ್ದರು. ಅವರು ಮನೆತನದ ಪರಂಪರೆಯ ವೃತ್ತಿಗೆ ಘನತೆ ತಂದುಕೊಟ್ಟ ಅವರು ಹವ್ಯಾಸವಾಗಿ ಮೆಕಪ್, ಚಿತ್ರಕಲೆ, ಸಂಗೀತ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದರು. ಇಂಥವರ ನಡೆ, ನುಡಿ, ಸಾಧನೆಯಿಂದಲೇ ಧಾರವಾಡ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿರಿಯ ಸಾಹಿತಿ ಡಾ. ಬಾಳಣ್ಣಾ ಶೀಗೀಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಜಾನನ ಮಹಾಲೆ ಅವರು ಉತ್ತರ ಕರ್ನಾಟಕದ ಪ್ರಸಾದನ ಕಲೆಯಲ್ಲಿ ದಿಗ್ಗಜರಾಗಿ ಜನಮಾನಸದಲ್ಲಿ ಇಂದಿಗೂ ನೆಲೆಸಿದ್ದಾರೆ. ಅವರೊಬ್ಬ ಶ್ರೇಷ್ಠ ಕಲಾವಿದರಾಗಿದ್ದು, ಸಾಮಾನ್ಯ ನಾಗರಿಕರಂತೆ ತಮ್ಮ ಹವ್ಯಾಸಿ ಕಲೆಯೊಂದಿಗೆ ತಮ್ಮ ವೃತ್ತಿಯನ್ನು ಅಷ್ಟೇ ಶೃದ್ಧಾ ಭಕ್ತಿಯಿಂದ ಮತ್ತು ಸರಳತೆಯಿಂದ ಬದುಕಿ ತಮ್ಮ ಕುಟುಂಬದ ಜೊತೆಗೆ ಸಮಾಜದಲ್ಲಿ ಕಲೆಯ ನೆಲೆಯನ್ನ ಉಳಿಸಿದ ಮಹಾನ್ ಕಲಾವಿದ ಎಂದು ಹೇಳಿದರು.

ಇದನ್ನೂ ಓದಿ ಧಾರವಾಡ | ಮತದಾನ ನಮ್ಮ ಹಕ್ಕು, ಹೆಮ್ಮೆ, ಗೌರವದ ಸಂಕೇತ; ಅದು ಮಾರಾಟಕ್ಕಲ್ಲ: ಸಿಇಓ ಭುವನೇಶ ಪಾಟೀಲ

ಅನುರಾಗ ಸಾಂಸ್ಕೃತಿಕ ತಂಡದ ಡಾ. ಅನೀಲ ಮೇತ್ರಿ ಹಾಗೂ ಹೇಮಂತ ಲಮಾಣಿ, ಸೋಹೇಲ್ ಸೈಯದ, ಸೋಮಿಬಾಯಿ ಕುರಿಗಾರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿದವು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ವೇದಿಕೆ ಮೇಲೆ ಅಪೂರ್ವಾ ಮಹಾಲೆ ಉಪಸ್ಥಿತರಿದ್ದರು. ಕಲಾವಿದ ಬಿ. ಮಾರುತಿ ಸ್ವಾಗತಿಸಿದರು, ಬಿ.ಆಯ್. ಈಳಿಗೇರ ವಂದಿಸಿದರು. ಕೆ.ಎಚ್.ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಬಿ.ಐ ಈಳಿಗೇರ ವಂದಿಸಿದರು.

ಸಂತೋಷ ಮಹಾಲೆ ಸೇರಿದಂತೆ ಹಿರಿಯ ಗಣ್ಯರಾದ ವಿದೂಷಿ ನಾಗರತ್ನಾ ಹಡಗಲಿ, ಶಶಿಧರ ತೋಡಕರ, ಎಂ.ಎಂ.ಚಿಕ್ಕಮಠ, ನಾಗರಾಜ ಹಡಗಲಿ, ಡಾ. ಅನಿಲಕುಮಾರ ಮುಗಳಿ, ಕಿರಣ ಮಹಾಲೆ, ಕೃತಿಕಾ ಸ್ನೇಹಾ, ಸೋನಮ್, ಅಕ್ಷತಾ, ಜಯಶ್ರೀ, ಸಂಪ್ರೀತಾ, ತೀಶಾ, ಪ್ರಣವ, ಸೋಹನ, ಮತ್ತು ಆದರ್ಶ, ಸೇರಿದಂತೆ ಗಜಾನನ ಮಹಾಲೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...