ಭೌಗೋಳಿಕ ಮಾಹಿತಿ ವ್ಯವಸ್ಥೆ GIS ತಂತ್ರಜ್ಞಾನವು ವಿಪತ್ತು ನಿರ್ವಹಣೆ, ಪರಿಸರ ಸಂರಕ್ಷಣೆ, ಕೃಷಿ, ಸಾರಿಗೆ ವ್ಯವಸ್ಥೆ, ಸ್ಮಾರ್ಟ್ ಸಿಟಿ ಯೋಜನೆ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಡಾ. ಮೋಹನ್ ಎಸ್ ನಗರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ, ಭೌಗೋಳಿಕ ಮಾಹಿತಿ ವ್ಯವಸ್ಥೆ ತಂತ್ರಜ್ಞಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
GIS ಬಳಸುವ ಪ್ರಾಯೋಗಿಕ ವಿಧಾನಗಳು, ಉಪಗ್ರಹ ನಕ್ಷೆ ಮಾಹಿತಿಗಳು, ಸ್ಥಳಾನುಗುಣ ವಿಶ್ಲೇಷಣೆ ಹಾಗೂ ಆಧುನಿಕ ಜಿಯೋ–ಟೆಕ್ನಾಲಜಿಗಳ ಕುರಿತು ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಐ ಎ ಮುಲ್ಲಾ ಮಾತನಾಡಿ, GIS ತಂತ್ರಜ್ಞಾನದಲ್ಲಿ ಪರಿಣಿತಿ ಪಡೆಯಲು ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿವೆ ಎಂದರು. ಡಾ. ಗಿರೀಶ್ ನಿರೂಪಿಸಿದರು. ಡಾ ಎನ್. ಬಿ. ನಾಲತವಾಡ, ಸ್ವಾಗತಸಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಡಾ, ಎಸ್ ಎಸ್ ಅದೋನಿ ವಂದಿಸಿದರು. ಕುಮಾರಿ ಉಮೇಜಾ ಶೇಖ್ ಕುರಾಣ ಪಠಣ್ ಮಾಡಿದರು. ಕುಮಾರಿ ದೇವಮ್ಮಾ ಶ್ಲೋಕ ಪಠಿಸಿದರು.
ಇದನ್ನೂ ಓದಿ ಧಾರವಾಡ | ವಿದ್ಯಾರ್ಥಿಗಳಲ್ಲಿ ಸಂವಹನ ಕಲೆ ಇರದಿದ್ದರೆ ಪರಿಪೂರ್ಣತೆ ಬರುವುದಿಲ್ಲ: ಪ್ರೊ. ಎಂ. ವಾಯ್. ಸಾವಂತ
ಕಾರ್ಯಕ್ರಮದಲ್ಲಿ ಭೂಗೋಳಶಾಸ್ತ್ರದ ಪ್ರಾಧ್ಯಾಪಕಿ ಅಂಜುಮ್ ಶೇಕ್ ಅತಿಥಿ ಪರಿಚಯಿಸಿದರು. ಪ್ರೊ. ಮುಬಾರಕ್ ಮುಲ್ಲಾ ಸೇರಿದಂತೆ ಶಿಕ್ಷಕರ ವೃಂದ, ವಿವಿಧ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. GIS ನ ಕಾರ್ಯಪಧ್ಧತಿಯನ್ನು ತೋರಿಸುವ ಡಿಜಿಟಲ್ ಮ್ಯಾಪಿಂಗ್ ಪ್ರದರ್ಶನ, ಪ್ರಾಜೆಕ್ಟ್ ಮಾದರಿಗಳ ಪ್ರದರ್ಶನ ಮತ್ತು ವಿಡಿಯೋ ಪ್ರೆಸೆಂಟೇಶನ್ ನಡೆಯಿತು.





