ದಿಂಗಾಲೇಶ್ವರ ಸ್ವಾಮೀಜಿ ವಿಚಾರವಾಗಿ ನಾನು ಯಾರ ಬಳಿಯೂ ಹೋಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ (ಮಾರ್ಚ್ 30) ಹುಬ್ಬಳ್ಳಿಯಲ್ಲಿ ಹೇಳಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, “ನಾನು ಮುರುಘಾಮಠಕ್ಕಾಗಲಿ ಮತ್ತು ತಿಪಟೂರು ಷಡಕ್ಷರಿ ರುದ್ರಮುನಿ ಸ್ವಾಮೀಜಿ ಮಠಕ್ಕಾಗಲಿ, ಯಾರ ಬಳಿಯೂ ಹೋಗಿಲ್ಲ, ಯಾವುದೇ ಸ್ವಾಮೀಜಿಗಳನ್ನು ಭೇಟಿಯಾಗಿ ಮಾತನಾಡಿಲ್ಲ” ಎಂದು ತಿಳಿಸಿದರು.
ದಿಂಗಾಲೇಶ್ವರ ಶ್ರೀಗಳು ತಮಗೆ ಕ್ಷೇತ್ರ ಬದಲಾವಣೆ ಬಗ್ಗೆ ಕೊಟ್ಟ ಗಡುವು ನಾಳೆಗೆ ಮುಗಿಯುತ್ತದೆಯಲ್ಲ ಎಂಬ ಪ್ರಶ್ನೆಗೆ, ದಿಂಗಾಲೇಶ್ವರ ಶ್ರೀಗಳು ನೀಡಿದ ಗಡುವು ಮುಗಿದಮೇಲೆ ಏನಾಗುವುದೊ ಕಾದುನೋಡೋಣ ಎಂದರು.
ದಿಂಗಾಲೇಶ್ವರ ಶ್ರೀಗಳು ಸ್ವತಂತ್ರ ಅಭ್ಯರ್ಥಿಯ ಬಗ್ಗೆ ಧಾರವಾಡ ಮುರುಘಾ ಮಠದ ಶ್ರೀಗಳು ಕೊಟ್ಟ ಪತ್ರಿಕಾ ಪ್ರಕಟಣೆ ಮತ್ತು ಮರುದಿನ ಹೇಳಿದ ಹೇಳಿಕೆ ಓದಿದ್ದೇನೆ. ಆದರೆ, ಈ ಬಗ್ಗೆ ಹೆಚ್ಚಿನದೇನು ಗೊತ್ತಿಲ್ಲ ಎಂದು ತಿಳಿಸಿದರು.




