ಧಾರವಾಡ | ಸಾಧನೆ ಹಾದಿಯಲ್ಲಿ ಸಮಸ್ಯೆಗಳು ಬರುವುದು ಸಹಜ: ಜಿಲ್ಲಾಧಿಕಾರಿ ದಿವ್ಯಪ್ರಭು

Date:

ಸಾಧನೆಗೆ ಗುರಿ ಅತಿ ಮುಖ್ಯವಾಗುತ್ತದೆ, ಸಾಧನೆಯ ಸಮಯದಲ್ಲಿ ಸಮಸ್ಯೆ ಬರುವುದು ಸಹಜ. ಗುರಿಯು ಅಚಲವಾದರೆ ಅಸಾಧಾರಣ ಸಾಧನೆ ಸಾಧ್ಯ. ನಿಗದಿತ ಅವಧಿಯ ಪರಿಶ್ರಮವು ಶಾಶ್ವತವಾದ ಸಿಹಿಫಲ ನೀಡುವುದು. ಸಮಸ್ಯೆಗೆ ಕುಂದಿದರೆ ಸಾಧನೆ ಸಾಧ್ಯವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ನಗರದ ಅಂಜುಮನ್ ಕಲಾವಿಜ್ಞಾನ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯ, ಮಹಿಳಾ ಸಬಲೀಕರಣ ಕೋಶ ಹಾಗೂ ಇತಿಹಾಸ ವಿಭಾಗ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ “ಕಿತ್ತೂರು ರಾಣಿ ಚನ್ನಮ್ಮ 19ನೇ ಶತಮಾನದ ಪೌರಾಣಿಕ ರಾಣಿ”, ಎಂಬ ವಿಚಾರ ಸಂಕೀರ್ಣದ ಅತಿಥಿಯಾಗಿ ಆಗಮಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಸ್ತ್ರೀಯರಿಗೆ ಮುಕ್ತ ಅವಕಾಶ ನೀಡಿದಾಗ ಪ್ರತಿಭೆ ಹೊರಬರಲು ಸಾಧ್ಯ. ಅದೇ ರೀತಿ ಮಾನಸಿಕ ಚಂಚಲತೆಯಿಂದ ಮುಕ್ತರಾಗಬೇಕು. ಹಾಗೂ ಮಹಿಳೆ ಸ್ವಯಂ ಅರಿವು ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಬಶೀರ್ ಅಹಮದ್ ಜಾಗೀರದಾರ ರಾಣಿ ಚೆನ್ನಮ್ಮ ಸಾಧನೆಯನ್ನು ಪ್ರಶಂಶಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಎಸ್. ಎ. ಸರ್ಗಿರೋ, ಖಜಾಂಚಿ ಮಹಮ್ಮದ್ ರಫಿಕ್ ಶಿರಹಟ್ಟಿ, ಪ್ರಾಚಾರ್ಯ ಡಾ. ಎನ್. ಎಂ‌ ಮಕಾಂದಾರ್ ಹಾಗೂ ಐ. ಕ್ಯೂ. ಏ. ಸಿ ಸಂಯೋಜಕ ಡಾ. ಎನ್.ಬಿ ನಲತವಾಡ, ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಮಂಜುಳಾ ಎಲಿಗಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಹೊಸ ಪುಸ್ತಕ | ಮಾನವೀಯತೆಯ ಉಳಿವಿಗೆ ಪ್ರತಿರೋಧದ ದನಿ ʼಸ್ವಾಭಿಮಾನದ ಗತ್ತಿನ್ಯಾಗʼ

ಕಾರ್ಯಕ್ರಮದಲ್ಲಿ ಬಿತ್ತಿ ಚಿತ್ರ ಸ್ಪರ್ಧೆ ಏರ್ಪಡಿಸಿದ್ದರು. ಪ್ರೊ. ಆಸ್ಮಾ ನದಾಫ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ರಾಣಿ ಚೆನ್ನಮ್ಮಳ ಕಿರು ನಾಟಕದ ಮೂಲಕ ಆರಂಭಿಸಿದರು. ಕುಮಾರಿ ಸ್ವಾಲೆಹ, ಕುರಾನ ಪಠಿಸಿದರು. ಕುಮಾರ್ ಪ್ರವೀಣ್ ಲಮಾಣಿ ಭಗವದ್ಗೀತೆಯ ಶ್ಲೋಕವನ್ನು ಪಠಿಸಿದರು. ಇಂಗ್ಲಿಷ್ ವಿಭಾಗದ ಡಾ. ಆಸ್ಮಾನಾಜ್ ಬಳ್ಳಾರಿ ಅತಿಥಿಗಳ ಪರಿಚಯಿಸಿ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸೈಯದ್ ತಾಜುನ್ನೀಸಾ ನಿರೂಪಿಸಿದರು. ಖೈರುದ್ದೀನ್ ಶೇಕ್, ಯಾಸಿನ ಹಾವೇರಿ ಪೇಟ್, ನಜೀರ್ ಬಲಬಟ್ಟಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...