ಕಲಘಟಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಪಂಚಾಯತಿ ಜಮಾಬಂದಿ ಕಾರ್ಯಕ್ರಮವನ್ನು ಸೆಪ್ಟೆಂಬರ 6 ರಿಂದ ಸೆಪ್ಟೆಂಬರ 15 ರವರೆಗೆ ಆಯೋಜಿಸಲಾಗಿದ್ದು, ಜಮಾಬಂದಿ ಕಾರ್ಯಕ್ರಮ ಆಯೋಜನೆಗೊಂಡ ಗ್ರಾಮ ಪಂಚಾಯತಿ, ದಿನಾಂಕ, ಜರುಗಿಸುವ ವೇಳೆ ಹಾಗೂ ಸಮನ್ವಯ ಅಧಿಕಾರಿಗಳ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯತಗಳಲ್ಲಿ ಪ್ರಕಟಿಸಲಾಗಿದೆ.
ಈ ಸುದ್ಧಿ ಓದಿದ್ದೀರಾ? ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳದಲ್ಲಿ ಪುಸ್ತಕ ಮಳಿಗೆಗಳಿಗೆ ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗಾಗಿ ಮಡಕಿಹೊನ್ನಳ್ಳಿ, ದುಮ್ಮವಾಡ, ಕುರುವಿನಕೊಪ್ಪ, ದಾಸ್ತಿಕೊಪ್ಪ, ತಾವರಗೇರಿ, ಮುಕ್ಕಲ್, ದೇವಲಿಂಗಕೊಪ್ಪ, ಗುಡ್ಡದಹುಲಿಕಟ್ಟಿ, ಬೀರವಳ್ಳಿ, ಸಂಗಮೇಶ್ವರ, ಜಿನ್ನೂರ, ಮುತ್ತಗಿ, ಮಿಶ್ರಿಕೋಟಿ, ಗಂಭ್ಯಾಪೂರ, ಜಿ. ಬಸವನಕೊಪ್ಪ, ಹಿರೇಹೊನ್ನಳ್ಳಿ, ದೇವಿಕೊಪ್ಪ, ತಬಕದಹೊನ್ನಳ್ಳಿ, ಗಂಜಿಗಟ್ಟಿ, ತಂಬೂರ, ಸೂಳಿಕಟ್ಟಿ, ಸೂರಶೆಟ್ಟಿಕೊಪ್ಪ, ಬಮ್ಮಿಗಟ್ಟಿ, ಉಗ್ಗಿನಕೇರಿ, ಭೋಗೆನಾಗರಕೊಪ್ಪ, ಬೆಲವಂತರ, ಗಳಗಿ, ಬೇಗೂರ ಗ್ರಾಮ ಪಂಚಾಯತ ಅಥವಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕಲಘಟಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





