ಹೆಸರಾಂತ ಸಂಗೀತಗಾರರಾದ ಡಾ. ಮಲ್ಲಿಕಾರ್ಜುನ ಮನ್ಸೂರ ಹೆಸರಿನ ಕಲಾಭವನವು ಹಲವು ವರ್ಷಗಳಿಂದ ಯಾವುದೇ ಸಭೆ ಸಮಾರಂಭಗಳಿಗೆ ಉಪಯೋಗಕ್ಕೆ ಬಾರದೆ ಮುಚ್ಚಿದ್ದನ್ನು ಮತ್ತು ಹಲವು ನಿರುಪಯುಕ್ತ ವಸ್ತುಗಳನ್ನು ತುಂಬಿದ್ದನ್ನು ಖಂಡಿಸಿ, ಸಮುದಾಯ, ಕರ್ನಾಟಕ ಪತ್ರಕರ್ತರ ಒಕ್ಕೂಟ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ರಂಗಭೂಮಿ ಕಲಾವಿದರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ನಡೆಸಿ, ಮನವಿ ಸಲ್ಲಿಸಿದರು.
ಧಾರವಾಡದ ಪವಿತ್ರ ಭೂಮಿಯಲ್ಲಿ ನಿರ್ಮಿಸಿದ ಡಾ. ಮಲ್ಲಿಕಾರ್ಜುನ ಮನ್ಸೂರ ಭವನದ ದೈನಿಕ ಬಾಡಿಗೆ ಹೆಚ್ಚಾಗಿರುವ ಬಡ ಕಲಾಕಾರರು ಬಾಡಿಗೆ ಪಡೆದು ತಮ್ಮ ಪ್ರತಿಭೆ ತೋರಿಸದಿರುವ ಕಾರಣ ಕಲಾ ಆಸಕ್ತರಿಗೆ ತುಂಬಾ ನಿರಾಶೆಯಾಗಿದೆ. ರಿಯಾಯಿತಿ ದರದಲ್ಲಿ ಬಾಡಿಗೆ ಕೊಟ್ಟಲ್ಲಿ ಪಾಲಿಕೆಗೂ ಲಕ್ಷಾಂತರ ರೂಪಾಯಿ ಆದಾಯವೂ ಬರುತ್ತಿತ್ತು. ಅಚ್ಚು ಕಟ್ಟಾಗಿಯೂ ಉಳಿಯುತ್ತಿತ್ತು. ತನ್ನ ಸಂಗೀತದ ಮೂಲಕ ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಮಲ್ಲಿಕಾರ್ಜುನ ಮನ್ಸೂರ ಕಟ್ಟೆಯ ಮೇಲೆ ಕುಡುಕರು, ಪುಂಡಪೋಕರಿಗಳು, ದುಷ್ಟಟದ ವಿದಾರ್ಥಿಗಳು ತಮ್ಮ ಮಜಾಮಾಡುವ ತಾಣವಾಗಿಸಿದ್ದಾರೆ. ಈ ಹಾವಳಿಯನ್ನು ತಪ್ಪಿಸಲು ಕಲಾಕಾರಿಗೆ, ರಂಗಕರ್ಮಿಗಳಿಗೆ, ಚರ್ಚಾಕೂಟಗಳಿಗೆ, ಉದ್ಯಮದ ಶಿಬಿರಗಳಿಗೆ, ಸಂಸ್ಕೃತಿಕ ಕಾರ್ಯಕ್ರಮ ಮಾಡುವವರಿಗೆ, ಹತ್ತು ಹಲವು ಬಗೆಯ ಕಾರ್ಯಕ್ರಮಗಳಿಗೆ ಯೋಗ್ಯ ರಿಯಾಯಿತಿ ದರದಲ್ಲಿ ಬಾಡಿಗೆ ನೀಡಲು ಉತ್ತರ ಕರ್ನಾಟಕ ಫೀಲ್ಕ ಚೆಂಬರ ಮತ್ತು, ಕರ್ನಾಟಕ ಪತ್ರಕರ್ತರ ಒಕ್ಕೂಟವು ವಿನಂತಿಸಿಕೊಳ್ಳುತ್ತದೆ ಎಂದು ಮನವಿ ಪತ್ರದಲ್ಲಿ ಕಾಣಿಸಿದ್ದಾರೆ.
ಈ ಮೂಲಕ ಕಲೆ. ಸಾಹಿತ್ಯ, ಸಂಗೀತದ ತವರೂರ ಧಾರವಾಡದ ಬಹುತೇಕ ಕುಟುಂಬಗಳಲ್ಲಿ ಒಬ್ಬ ಸಾಹಿತಿಯಾಗಿಯೋ, ಕಲಾಕಾರನಾಗಿಯೋ, ಸಂಗೀತಗಾರನಾಗಿಯೋ ಜನಿಸಿ ವಿಶ್ವದಾದ್ಯಂತ ಹೆಸರು ಮಾಡುವುದರ ಮೂಲಕ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಸತತ 12 ವರ್ಷಗಳಿಂದ ಅನೇಕ ನಿರ್ಮಾಪಕರನ್ನು, ನಿರ್ದೇಶಕರನ್ನು ಸಾಹಿತಿ ಕಲಾವಿದರನ್ನು ಪ್ರೋತ್ಸಾಹಿಸುತ್ತ ಅನೇಕ ಚಲನಚಿತ್ರಗಳನ್ನು ನಿರ್ಮಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿ, ತನ್ನದೇ ಆದ ಹೆಸರನ್ನು ಅಚ್ಚಳಿಯದೇ ಉಳಿಸಿಕೊಂಡಿರುವುದಲ್ಲದೆ, ಅನೇಕ ಯುವ ಕಲಾವಿದರನ್ನು ಗುರುತಿಸಿ ಬೆಳಕಿಗೆ ತಂದಿದೆ. ಇಂಥ ಚಟುವಟಿಕೆಗಳನ್ನು ನಿರಂತರವಾಗಿ ಮಂದುವರೆಸಲು ಜಿಲ್ಲಾಧಿಕಾರಿಗಳು ಪ್ರೋತ್ಸಾಹಿಸುವರೆಂಬ ನಂಬಿಕೆಯಿದೆ. ಆದ್ದರಿಂದ ಈ ಮನವಿಗೆ ಸ್ಪಂದಿಸಿ ರಿಯಾಯಿತಿ ದರದಲ್ಲಿ ಬಾಡಿಗೆ ಕೊಡಲು ಅತೀ ಶೀಘ್ರವಾಗಿ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ ಧಾರವಾಡ | ಪ್ರೊ. ಶಿ. ಶಿ. ಬಸವನಾಳ ಲೇಸೆನಿಸಿಕೊಂಡು ಬದುಕಿದ ಪುಣ್ಯಪುರುಷರು: ಡಾ. ರುದ್ರೇಶ ಮೇಟಿ
ಈ ವೇಳೆ ಬಿ ಐ ಈಳಗೇರ, ಎಮ್ ಕೆ ನದಾಪ್, ಸತೀಶ ಮುರಗೋಡ, ಬಿ ಕೆ ಸೋದರ, ಪ್ರಸಾದ್, ವಿನೋದ ಗೋಟ್ಕೆ, ರಾಹುಲ್ ದತ್ತಪ್ರಸಾದ್, ಮಹಮ್ಮದ್‌ಅಲಿ ಗೂಡುಭಾಯಿ, ಕಿರಣ ಸಿದ್ಧಾಪುರ, ಪುಷ್ಪಾ ಹಿರೇಮಠ, ವಿವಿಧ ಸಂಘಟಕರು, ಕಲಾವಿದರು, ರಂಗಕರ್ಮಿಗಳು, ಹೋರಾಟಗಾರರು, ಪತ್ರಕರ್ತರು ಇದ್ದರು.





