ಧಾರವಾಡ | ಕನ್ನಡ ಮಾತನಾಡುವುದು ಮನೆಯಿಂದಲೇ ಪ್ರಾರಂಭವಾಗಲಿ: ಸತೀಶ್ ತುರಮರಿ

Date:

ಕನ್ನಡದ ಪ್ರತಿಯೊಂದು ಪದಗಳ ಉಚ್ಛಾರದೊಂದಿಗೆ ತೊಟ್ಟಿಕ್ಕುವ ಜೇನಿನ ಹನಿಗಳ ಸ್ವಾದ ಸವಿಯುವ ಭಾಗ್ಯವನ್ನು ನಾವೆಲ್ಲ ದಿನದಿಂದ ದನಕ್ಕೆ ಕಳೆದುಕೊಳ್ಳುವ ಈ ಸಂದರ್ಭದಲ್ಲಿ ‘ಕನ್ನಡ ಸಾಹಿತ್ಯವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ’ಯನ್ನು ಹುಟ್ಟುಹಾಕಿದ್ದು ತುಂಬಾ ಸಂತಸ ತಂದಿದೆ. ಕನ್ನಡ ಮಾತನಾಡುವುದು ಮತ್ತು ಮಾತನಾಡಿಸುವುದು ಪ್ರತಿ ಮನೆಗಳ ತಾಯಂದಿರಿಂದಲೇ ಮತ್ತೆ ಪ್ರಾರಂಭಿಸಲು ಪಣ ತೊಡಬೇಕಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ್ ತುರಮರಿ ಹೇಳಿದರು.

ಜ. 31ರಂದು ಧಾರವಾಡದ ರಾ ಹ ದೇಶಪಾಂಡೆ ಸಭಾಭವನದಲ್ಲಿ ಕನ್ನಡ ಉಳಿಸಲು, ಬೆಳೆಸಲು ಪಣ ತೊಡಿರಿ ಎಂಬ ಘೋಷವಾಕ್ಯದೊಂದಿಗೆ ‘ಕನ್ನಡ ಸಾಹಿತ್ಯವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ’ಯ ಉದ್ಘಾಟನೆ ಮತ್ತು ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡುತ್ತಾ,

ಕನ್ನಡ ಮಾತನಾಡುವುದನ್ನು ಮತ್ತೆ ಮನೆಗಳಿಂದಲೇ ಪ್ರಾರಂಭಿಸುದರಲ್ಲಿ ಪ್ರಮುಖ ಪಾತ್ರ ತಾಯಂದಿರದ್ದಾಗಿದೆ. ಮಗು ಜನ್ಮಿಸಿದ ಕ್ಷಣದಿಂದ, ಮಾತು ಕಲಿಯುವವರೆಗೆ, ಸಂಪೂರ್ಣ ಜ್ಞಾನ ಪಡೆಯುವವರೆಗೆ ತಾಯಿಯೇ ಗುರುವಾಗಿರುವುದರಿಂದ ಕನ್ನಡ ಉಳಿಸಲು, ಕನ್ನಡ ಬೆಳೆಸಲು ತಾಯಿಯು ಪಣತೊಟ್ಟಲ್ಲಿ ಭಾಷಾಭಿಮಾನ, ಭಾಷಾಪ್ರೇಮ, ಸಾಹಿತ್ಯ ಅಭಿರುಚಿಯು ರಕ್ತದ ಕಣಕಣದಲ್ಲೂ ತುಂಬಿ ಹರಿಯುವುದರಲ್ಲಿ ಸಂದೇಹವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಯುವಜನರನ್ನು ಕರೆತರುವ ಕೆಲಸವಾಗಲಿ. ಕವಿಗಳು, ಸಂಗೀತಗಾರರು ತಮ್ಮ ಮಕ್ಕಳಿಗೆ ಸಂಗೀತ, ಕವಿತೆ, ಕಲೆಗಳನ್ನು ಕಲಿಸುವಂತಾಗಲಿ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂಸ್ಥೆಯ ಅಧ್ಯಕ್ಷ ಮಹಮ್ಮದ್ಅಲಿ ಗುಡೂಭಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ದ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.

ಮೂಲ ಜಾನಪದ ಕಲಾವಿದ ರಾಮು ಮೂಲಗಿ ಗಂಜರ ಭಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡವು ನಮ್ಮೆಲ್ಲರ ತಾಯಿ ಭಾಷೆಯಾಗಿದೆ. ಇತ್ತೀಚಿಗೆ ಕುಟುಂಬಗಳಲ್ಲಿ ಕನ್ನಡಪರ ಕಾಳಜಿ ಕಡಿಮೆಯಾಗುತ್ತಿದೆ. ಮತ್ತು ಇತ್ತೀಚಿಗೆ ಬರುವ ಜಾನಪದ ಹಾಡುಗಳು (ಡಿಜೆ) ಮೂಲ ಜನಪದಗಳಲ್ಲ. ಅವುಗಳಿಂದ ನಮ್ಮ ಸಂಸ್ಕೃತಿಯು ಹಾಳಾಗುತ್ತಿದೆ. ಜನಪದ ಸಾಹಿತ್ಯವು ತಾಯಿಬೇರಾಗಿದ್ದು, ಆ ಸಾಹಿತ್ಯಕ್ಕೆ ನಾವೆಲ್ಲರೂ ಮಾಲೀಕರಾಗಿದ್ದೇವೆ ಎಂದರು.

ಈ ವರದಿ ಓದಿದ್ದೀರಾ? ಧಾರವಾಡ | ಫೆ. 3 ಮತ್ತು 4ಕ್ಕೆ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ನಂತರ ಕವಿಗಳು‌ ಮತ್ತು ಕವಿಯತ್ರಿಯರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಪದಗ್ರಹಣ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿ ಮಹಮ್ಮದ್ಅಲಿ ಗುಡೂಭಾಯಿ, ಉಪಾಧ್ಯಕ್ಷರಾಗಿ ಜಿ ವಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಬಿ ಕೆ ಸೋದರ, ಸಹ ಕಾರ್ಯದರ್ಶಿ ಪುಷ್ಪಾ ಹಿರೇಮಠ, ಕೋಶಾಧಿಕಾರಿ (ಖಜಾಂಚಿ) ರಮೇಶ ಗಾಯಕವಾಡ, ಕಾರ್ಯಕಾರಿ ಸದಸ್ಯರುಗಳಾಗಿ; ಊರ್ಮಿಳಾ ಜಕ್ಕಣ್ಣವರ, ಸುಧಾ ಕಬ್ಬೂರ, ವೀಣಾ ಆಯ್ಕೆಯಾದರು. ಎಪಿಎಂಸಿ ಮಾಜಿ ಅಧ್ಯಕ್ಷ, ಸಮಾಜ ಸೇವಕ ಕೃಷ್ಣಾ ಕೋಳನಟ್ಟಿ ವೇದಿಕೆ ಮೇಲಿದ್ದರು. ಸುಧಾ ಕಬ್ಬೂರ ನಿರೂಪಣೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...