ಅಬ್ದುಲ್ ಕಲಾಂ ಅವರ ಜೀವನದಿಂದ ಯುವಕರು ಪ್ರೇರಣೆ ಪಡೆಯಬೇಕು. ಕಲಾಂ ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವಮಟ್ಟಕ್ಕೆ ತಂದು ನಿಲ್ಲಿಸಿದ ಮಹಾನ್ ವಿಜ್ಞಾನಿ ಎಂದು ನಗರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಚಾರ್ಯ ಡಾ. ಎಂ.ಎನ್.ಮೀರಾನಾಯ್ಕ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎ.ಐ.ಮುಲ್ಲಾ ಮಾತನಾಡಿ, ಡಾ.ಕಲಾಂ ಅವರ ಜೀವನದಿಂದ ಕಲಿಯುವುದು ಬಹಳವಿದೆ. ದೊಡ್ಡ ಕನಸು ಕಾಣುವುದು, ಕಠಿಣ ಪರಿಶ್ರಮ, ದೇಶಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುವುದು ಹೀಗೆ ಮಾಡಿದರೆ, ಭಾರತ ಭಿವೃದ್ಧಿಶೀಲ ರಾಷ್ಟ್ರವಾಗುತ್ತದೆ ಎಂದು ಹೇಳಿದರು.
ಈ ಸುದ್ಧಿ ಓದಿದ್ದೀರಾ? ಹುಬ್ಬಳ್ಳಿ | ಮಂಕುತಿಮ್ಮನ ಕಗ್ಗ ಜೀವನದ ಧರ್ಮವನ್ನು ಸಾರುತ್ತದೆ: ಮುರಳಿಧರ ಮಳಗಿ
ಪತ್ರಿಕೋದ್ಯಮದ ಮುಖ್ಯಸ್ಥ ಡಾ. ಎಸ್.ಎಸ್.ಆದೋನಿ, ಡಾ. ಎ.ಎಸ್.ಬಳ್ಳಾರಿ, ಬೋಧಕರು, ವಿದ್ಯಾರ್ಥಿಗಳು ಇದ್ದರು. ಅಸದುಲ್ಲಾ ಮಕಾಂದರ ಸ್ವಾಗತಿಸಿದರು. ಬೋಧಕಿ ಕಾವ್ಯ ಶ್ಲೋಕ ಪಠಿಸಿದರು. ಶೃತಿ ಯಾವಗಲಮಠ ನಿರೂಪಿಸಿದರು. ಡಾ. ಎನ್.ಬಿ.ನಾಲತವಾಡ ವಂದಿಸಿದರು.





