ಕನ್ನಡವು ಮಕ್ಕಳ ಭವಿಷ್ಯದ ಭಾಷೆ. ಕನ್ನಡಕ್ಕಿರುವ ಭವಿಷ್ಯ ಬೇರೆ ಯಾವ ಭಾಷೆಗೂ ಇಲ್ಲ ಎಂದು ಕರ್ನಾಟಕ ಕುಲಪುರೋಹಿತ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ರಂಜಾನ್ ದರ್ಗಾ ಹೇಳಿದರು.
ಕನ್ನಡ ಸಾಹಿತ್ಯ ವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ “ರೈಸಿಂಗ್ ಸ್ಟಾರ್ ಆರ್ಟ ಆಯಿಂಡ್ ಕಲ್ಚರಲ್ ಅಕಾಡೆಮಿ” ಸಂಯುಕ್ತ ಆಶ್ರಯದಲ್ಲಿ ನ.19ರಂದು ಆರ್.ಎಲ್.ಎಸ್ ಆವರಣದಲ್ಲಿ ಏರ್ಪಡಿಸಿದ್ದ “ಸಾಹಿತಿಗಳ ನಡೆ, ಕನ್ನಡ, ಉರ್ದು ಶಾಲೆಗಳೆಡೆ” ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕನ್ನಡ ಉಳಿಸಿ ಬೆಳೆಸಲು ಹಾಗೂ ಸಾಹಿತ್ಯಾಸಕ್ತಿ ಉಣಬಡಿಸಲು ಇಂದು ನೀವಿರುವ ಶಾಲೆಗಳಿಗೆ ಸಾಹಿತಿಗಳು ಬಂದು, ನಿಮ್ಮಲ್ಲಿ ಕನ್ನಡದ ಬೀಜ ಬಿತ್ತುತ್ತಿರುವ, ಮತ್ತು ಅದು ಹೆಮ್ಮರವಾಗಿಸುವ ಕನಸನ್ನು ಹೊತ್ತ, ಸಂಸ್ಥೆಯ ಆದ್ಯಕ್ಷ ಸಾಹಿತಿ ಮಹಮ್ಮದಲಿ ಗೂಡುಭಾಯಿ ಅವರ ಕಾರ್ಯ ಶ್ಲಾಘನೀಯ. ಇವರಂತೆ ಹಲವು ಸಂಘ ಸಂಸ್ಥೆಗಳು ಕನ್ನಡ ಉಳಿಸಲು ಪಣ ತೊಡಬೇಕಿದೆ ಎಂದರು.
ನಿವೃತ್ತ ಪೋಲಿಸ ಉಪಾಧೀಕ್ಷಕ ವೈ.ಎಸ್. ಏಗನಗೌಡರ ಮಾತನಾಡಿ, ಕನ್ನಡ ಭಾಷೆ, ಎಲ್ಲ ಭಾಷೆಗಳಿಗಿಂತಲೂ ಅತ್ಯಂತ ಸರಳ ಮತ್ತು ಸುಂದರವಾಗಿದೆ. ಶಾತವಾಹನರ ಕಾಲದಿಂದ ಕದಂಬ, ಚಾಲುಕ್ಯರೂ ಕೂಡ ಬಳಸಿ ಬೆಳೆಸಿದ ಭಾಷೆ. ಈ ಭಾಷೆಗೆ ತನ್ನದೇ ಅಸ್ತಿತ್ವ ಇದೆ ಎಂದರು. ಆರ್.ಎಲ್.ಎಸ್ ಶಾಲೆಯ ಉಪ ಪ್ರಾಚಾರ್ಯರ ಆರ್.ಬಿ.ಬಾನಪ್ಪನವರ ಮಾತನಾಡಿ, ಎರಡು ಸಾವಿರ ವರ್ಷಗಳ ಹಿಂದಿನ ಇತಿಹಾಸ ಕನ್ನಡಕ್ಕಿದ್ದು, ಇದನ್ನು ಉಳಿಸಿ ಬೆಳೆಸಲು ದಿಟ್ಟ ಹೆಜ್ಜೆ ಇಟ್ಟಿರುವ ಕನ್ನಡ ಸಾಹಿತ್ಯವರ್ಧಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಕ.ವಿ.ವಿ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಹಾಗೂ ಸಾಹಿತಿ ಚಂದ್ರಶೇಖರ ರೊಟ್ಟಿಗವಾಡ ಮಾತನಾಡಿ, ಕನ್ನಡವು ಹೃದಯ ಭಾಷೆಯೊಂದಿಗೆ ತಾಯಿ ಭಾಷೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ಇಂದಿನ ಯುವಕರದ್ದಾಗಿದೆ. ಶರಣರು ಮತ್ತು ದಾಸರು ಅತ್ಯಂತ ಸರಳವಾಗಿ ಕನ್ನಡದಲ್ಲಿ ವಚನಗಳನ್ನು ಮತ್ತು ದಾಸ ಪದಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಯುವ ಸಮೂಹಕ್ಕೆ ಕನ್ನಡ ಭಾಷೆಯ ಜ್ಞಾನ ಅತೀ ಅವಶ್ಯಕವಾಗಿದೆ ಎಂದರು.
ಇದನ್ನೂ ಓದಿ ಧಾರವಾಡ | ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ
ಸಾಹಿತಿ ಮಹಮ್ಮದಲಿ ಗೂಡುಭಾಯಿ, ಇಂಡಿಪೆಂಡೆಂಟ್ ಸಂಗ್ರಾಮ ನ್ಯೂಸ್‌ನ ಎಂ.ಕೆ.ನದಾಫ, ಮುಸ್ಕಾನ ನದಾಫ, ಪ್ರಮೀಳಾ ಜಕ್ಕಣ್ಣವರ ವೇದಿಕೆಯಲ್ಲಿದ್ದರು. ಬಿ.ಕೆ ಸೋದರ ವಂದಿಸಿದರು. ಸುಧಾ ಕಬ್ಬೂರ ನಿರೂಪಿಸಿದರು. ರೈಸಿಂಗ್ ಸ್ಟರ‍್ಸ ಆರ್ಟ ಆಯಿಂಡ್ ಕಲ್ಚರಲ್ ಸಂಸ್ಥೆಯ ನಿರ್ದೇಶಕ ಹಾಗೂ ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ ಅತಿಥಿಗಳಿಗೆ ಪುಸ್ತಕ ಮತ್ತು ಪುಷ್ಪ ನೀಡುತ್ತಾ, ಸ್ವಾಗತಿಸಿದರು.





