ಧಾರವಾಡ | ಎನ್ಎ‌ಸ್ಎ‌ಸ್ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ: ಡಾ. ಲಿಂಗರಾಜ ಅಂಗಡಿ

Date:

ಎನ್ಎ‌ಸ್ಎ‌ಸ್ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹುಬ್ಬಳ್ಳಿ ತಾಲೂಕು ಶರೇವಾಡ ಗ್ರಾಮದಲ್ಲಿ ಎಸ್‌ಜೆ‌ಎಮ್‌ವಿ‌ಎಸ್ ಮಹಿಳಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವೊಂದರಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಸಿ ನೆಡುವ ಮೂಲಕ ‘ಆರೋಗ್ಯವೇ ಭಾಗ್ಯ’ ವಿಷಯದ ಕುರಿತು ಪ್ರೊ. ಎಸ್ ಎಚ್ ಹಿರೇಗೌಡರ ಮಾತನಾಡಿ, ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಆರೋಗ್ಯ ಕೆಡುತ್ತದೆ. ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಳ್ಳೆಯ ಆಲೋಚನೆ ಹೊಂದಬೇಕು. ಮೊಬೈಲನ್ನು ಮಿತವಾಗಿ ಬಳಸಬೇಕು ಎಂದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಡಾ. ಎಚ್ ವಿ ಬೆಳಗಲಿ, ಸಿದ್ದಪ್ಪ ಹನ್ನಿ, ವಿರೂಪಾಕ್ಷಪ್ಪ ಯಡವನ್ನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಡಾ. ಶಿವಲೀಲಾ ವೈಜಿನಾಥ ಸ್ವಾಗತಿಸಿದರು. ಡಾ. ತಾಯಣ್ಣ ಎಚ್, ಮಮ್ತಾಜ್ ಬೇಗಂ ತಹಸೀಲ್ದಾರ್ ವೇದಿಕೆ ಮೇಲಿದ್ದರು. ಸೌಂದರ್ಯ ನೂಲ್ವಿ ನಿರೂಪಿಸಿದರು. ಎನ್ಎ‌ಸ್ಎ‌ಸ್ ಸ್ವಯಂ ಸೇವಕಿಯರು ಎನ್ಎಸ್ಎಸ್ ಗೀತೆ ಪ್ರಸ್ತುತ ಪಡಿಸಿದರು. ಅನಿತಾ ಹಂಡೆನವರ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...