ಧಾರವಾಡ | ಪ್ರೊ. ಶಿ. ಶಿ. ಬಸವನಾಳ ಲೇಸೆನಿಸಿಕೊಂಡು ಬದುಕಿದ ಪುಣ್ಯಪುರುಷರು: ಡಾ. ರುದ್ರೇಶ ಮೇಟಿ

Date:

ಪ್ರೊ. ಶಿ. ಶಿ. ಬಸವನಾಳರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆ ಕನ್ನಡ ಸಾಹಿತ್ಯದ ಉನ್ನತಿಗಾಗಿ ಶ್ರಮಿಸಿದ ಮಹಾ ಕಾಯಕಯೋಗಿಗಳು. ಮತ್ತು ಎಲ್ಲರಂತೆ ಬದುಕದೇ ಎಲ್ಲರಿಗಾಗಿ ಲೇಸೆನಿಸಿಕೊಂಡು ಬದುಕಿದ ಪುಣ್ಯಪುರುಷರು ಎಂದು ಅಂಜುಮನ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರುದ್ರೇಶ ಮೇಟಿ ಧಾರವಾಡದ ಕೆ.ಎಲ್.ಇ. ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾತನಾಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು, ಆಯೋಜಿಸಿದ್ದ ‘ಪ್ರೊ. ಶಿ. ಶಿ. ಬಸವನಾಳವರ ಬದುಕು-ಬರಹ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಮಾತನಾಡುತ್ತಾ, ಅಂದಿನ ಮುಂಬೈ ಪ್ರಾಂತದ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಸವನಾಳರು, ಪುಣೆಯಂತೆ ಉತ್ತರ ಕರ್ನಾಟಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುವಂತಹ ಶಿಕ್ಷಣ ಸಂಸ್ಥೆ ಕಟ್ಟಬೇಕೆಂಬ ಮಹಾದಾಸೆ ಹೊಂದಿ ಕೆ.ಎಲ್.ಇ. ಸಂಸ್ಥೆ ಸ್ಥಾಪನೆಗೆ ಕಾರಣರಾದ ಸಪ್ತರ್ಷಿಗಳಲ್ಲೊಬ್ಬರಾಗಿ ಬೆಳಗಾವಿಯ ಲಿಂಗರಾಜ ಕಾಲೇಜು, ಧಾರವಾಡದ ಆರ್.ಎಲ್.ಎಸ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು.

ಇಂದು ಕೆ.ಎಲ್.ಇ. ಅಂತರಾಷ್ಟ್ರೀಯ ಖ್ಯಾತಿ ಪಡೆಯಲು ಶಿ.ಶಿ. ಬಸವನಾಳರ ಶ್ರಮವೂ ಇದೆ. ಶಿ. ಶಿ. ಬಸವನಾಳ ಓದಿದ್ದು ಇತಿಹಾಸ ಹಾಗೂ ಅರ್ಥೈಶಾಸ್ತ್ರವಾದರೂ ಕನ್ನಡದ ಪ್ರಖಾಂಡ ಪಂಡಿತರಾಗಿದ್ದರು. ವಚನ ಸಾಹಿತ್ಯ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರ. ವೀರಶೈವ ಸಾಹಿತ್ಯಕ್ಕೂ ಸಂಬAಧಿಸಿದ ಕೃತಿ ರಚಿಸಿದ್ದಾರೆ. ಸಮರ್ಥ ಸಂಪಾದಕರಾಗಿ, ಸಂಶೋಧಕರಾಗಿ ಅನುಮಪ ಸೇವೆಗೈದಿದ್ದಾರೆ. ಬಹುಭಾಷಾ ವಿಶಾರದರಾದ ಅವರು ಪಡೆದದ್ದಕ್ಕಿಂತ ಸಮಾಜಕ್ಕಾಗಿ ನೀಡಿದ್ದೇ ಜಾಸ್ತಿ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದತ್ತಿದಾನಿ ರವೀಂದ್ರ ಶಿ. ಬಸವನಾಳ ದತ್ತಿ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮೃತ್ಯುಂಜಯ ಕಾಲೇಜಿನ ಪ್ರಾಚಾರ್ಯ ಡಾ. ನೀಲಕ್ಕ ಪಾಟೀಲ ಮಾತನಾಡಿ, ಪ್ರೊ. ಶಿ. ಶಿ. ಬಸವನಾಳ ಅವರದು ಘನವಾದ ಬದುಕು. ಅವರ ಬದುಕಿನ ಅವಧಿ ಕಡಿಮೆಯಾದರೂ ಸಾಧಿಸಿದ ಸಾಧನೆ ದೊಡ್ಡದು. ಅವರು ಬಹುಮುಖ ವ್ಯಕ್ತಿತ್ವದ ವಿಭಿನ್ನ ನೆಲೆಯ ಸಾಧಕರು ಎಂದು ಸ್ಮರಿಸಿದರು. ಪ್ರೊ. ಶಿ.ಶಿ. ಬಸವನಾಳ 132ನೇ ಜನ್ಮ ದಿನದ ಪ್ರಯುಕ್ತ ಆರ್.ಎಲ್.ಎಸ್. ಆವರಣದಲ್ಲಿರುವ ಪ್ರೊ. ಶಿ.ಶಿ. ಬಸವನಾಳ ಮತ್ತು ಶಿರಸಂಗಿ ಲಿಂಗರಾಜ ದೇಸಾಯಿಯವರ ಪುತ್ಥಳಿಗೆ ಸಂಘದಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು ಎಂದರು.

ಇದನ್ನೂ ಓದಿ ಧಾರವಾಡ | ನಿಮ್ಮ ಮೊಬೈಲ್‍ ಕಳೆದು ಹೋಗಿದೆಯೇ? ಹುಡುಕಲು ಈ ಆ್ಯಪ್‍ನ್ನು ಡೌನಲೋಡ ಮಾಡಿಕೊಳ್ಳಿ

ಕು. ಸುಶ್ಮೀತಾ ಪ್ರಾರ್ಥಿಸಿದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಡಾ. ರೆಹಮಾನ ಗೊರಜನಾಳ ಪರಿಚಯಿಸಿದರು. ಡಾ. ಬಾಬು ಬೆಣ್ಣಿ ವಂದಿಸಿದರು. ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಅಶೋಕ ಚಿಕ್ಕೋಡಿ, ಶಂಕರಲಿಂಗ ಶಿವಳ್ಳಿ, ಡಾ. ಮೃತ್ಯುಂಜಯ ಶೆಟ್ಟರ, ಆರ್.ಬಿ. ಬನಪ್ಪನವರ, ಶರಣಪ್ಪ ಬಂಡ್ಯಾಳ, ಡಾ. ಮೊನೊಲಿಸಾ ಅಕ್ಕಿಹಾಳ, ಸಿ.ವ್ಹಿ. ಕಣಬರ್ಗಿ, ಹರಿಹರ, ಮಾಧುರಿ ಚಿಕ್ಕೋಡಿ ಸೇರಿದಂತೆ ಶಿ.ಶಿ. ಬಸವನಾಳ, ಚಿಕ್ಕೋಡಿ ಕುಟುಂಬದವರು, ಹಿತೈಷಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...