ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕಾರ್ಮಿಕ ಸಂಹಿತೆಗಳ ಜಾರಿಯನ್ನು ವಿರೋಧಿಸಿ ಇಂದು AIUTUC ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಸಭೆ ಮತ್ತು ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯಲ್ಲಿ ಲೇಬರ್ ಕೋಡ್ಗಳ ಸಾಂಕೇತಿಕ ಪ್ರತಿಯನ್ನು ಸುಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ದೇವದಾಸ್ ಮಾತನಾಡಿ, ಉದ್ಯೋಗಿಗಳನ್ನು ವಜಾ ಮಾಡಲು ಅಥವಾ ಕಾರ್ಖಾನೆಗಳನ್ನು ಮುಚ್ಚಲು ಸರ್ಕಾರದ ಅನುಮತಿಯ ಅಗತ್ಯವಿರುವ ಸಂಸ್ಥೆಗಳ ಗಾತ್ರವನ್ನು ಹೆಚ್ಚಿಸಲಾಗಿದ್ದು ಇದರಿಂದ ಸುಲಭವಾಗಿ ಕಾರ್ಮಿಕರನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ಇದು ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತದೆ.
ಅಲ್ಲದೇ ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುವುದು; ಕೈಗಾರಿಕಾ ಸಂಬಂಧಗಳ ಸಂಹಿತೆಯು ಮುಷ್ಕರ ನಡೆಸುವ ಹಕ್ಕನ್ನೇ ಕಸಿದುಕೊಳ್ಳುತ್ತದೆ. ಮತ್ತು ಕಾರ್ಮಿಕರ ಸಂಘಟಿತ ಚೌಕಾಸಿ (Collective Bargaining) ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಆದ್ದರಿಂದ ಈ ಲೇಬರ್ ಕೋಡ್ ಗಳು ಬಂಡವಾಳಶಾಹಿ ಗಳ ಪರ ಮತ್ತು ಕಾರ್ಮಿಕ ವಿರೋಧಿ ನೀತಿಗಳಾಗಿವೆ. ಕೂಡಲೇ ಈ ನೀತಿಯನ್ನು ರದ್ದು ಮಾಡಬೇಕು ಎಂದರು.
ಡಿ. ನಾಗಲಕ್ಷ್ಮಿ ಮಾತನಾಡಿ, ಕಾರ್ಮಿಕ ಹಕ್ಕುಗಳು ಕಾರ್ಮಿಕರ ತ್ಯಾಗ ಬಲಿದಾನಗಳಿಂದ ರೂಪಿತವಾಗಿದ್ದು ಅವುಗಳಲ್ಲಿ ಒಂದೇ ಏಟಿಗೆ ಮಾಲೀಕರ ಪರ ಮಾಡಿ ಕಾರ್ಮಿಕರಿಗೆ ಹಲ್ಲುಕ್ಕಿಂತ ಹಾವಿನಂತೆ ಮಾರ್ಪಾಡುಗೊಳಿಸಿ ಲೇಬರ್ ಕೋಡ್ ಜಾರಿಗೆ ತರಲಾಗಿದೆ. ಕಾರ್ಮಿಕರ ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಸಂಸ್ಥೆಗಳಿಗೆ ಅವಕಾಶ ನೀಡುವುದು, ಮಹಿಳೆಯರಿಗೆ ರಾತ್ರಿ ಪಾಳೆ ಜಾರಿ, ಫಿಕ್ಸ್ಡ್ ಟರ್ಮ್ ಎಂಪ್ಲಾಯ್ಮೆಂಟ್ ಇತ್ಯಾದಿಗಳೆಲ್ಲವೂ ಅತ್ಯಂತ ಕಾರ್ಮಿಕ ವಿರೋಧಿಯಾಗಿವೆ. ಇದರ ವಿರುದ್ಧ ದೇಶದಾದ್ಯಂತ ದುಡಿಯುವ ಜನತೆ ಬೀದಿಗಳಿದು ಪ್ರತಿಭತಿಸಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ್, ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಯೋಗಪ್ಪ ಜೋತೆಪ್ಪನವರ್, ಅಲ್ಲಾಭಕ್ಷ ಕಿತ್ತೂರ್, ಬಸವನಗೌಡ, ಗಿರಿಸಾಗರ್, ಶಾನ್ವಾಜ್ ಅಕ್ಕುರ್, ಚಂದ್ರು ಕಂಪ್ಲಿ ಕೊಪ್ಪ ಪಾಲ್ಗೊಂಡಿದ್ದರು.





