ಪ್ರಾಣಿ ಕಡಿತದ ನಂತರ ಲಸಿಕೆಯನ್ನು ಸರಿಯಾಗಿ ತೆಗೆದುಕೊಳ್ಳುವ ಮೂಲಕ ಮಾನವರು ರೇಬಿಸ್ ರೋಗವನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ವಿಶ್ವ ರೇಬಿಸ್ ದಿನಾಚರಣೆಯ ಪ್ರಯುಕ್ತ ಸೆ.29ರಂದು ಧಾರವಾಡ ಪಶು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ‘ಸಾರ್ವಜನಿಕ ಆರೋಗ್ಯಕ್ಕಾಗಿ ರೇಬಿಸ್ ನಿಯಂತ್ರಣ ಕುರಿತಾದ ತಾಂತ್ರಿಕ ಕಾರ್ಯಾಗಾರ’ದಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ.ಎಸ್.ಎಮ್. ಹೊನಕೇರಿ ಉದ್ಘಾಟಿಸಿ, ಮಾತನಾಡಿ ತಿಳಿಸಿದರು.
ಕಾರ್ಯಾಗಾರದ ಅದ್ಯಕ್ಷತೆ ವಹಿಸಿದ್ದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ, ಜಿಲ್ಲೆಯ ಎಲ್ಲಾ ಪಶುವೈದ್ಯರು ಸೆಪ್ಟೆಂಬರ ತಿಂಗಳಿನಲ್ಲಿ ಶಾಲಾ-ಕಾಲೇಜುಗಳಲ್ಲಿ ನಡೆಸಿದ ರೇಬೀಸ್ ಜಾಗೃತಿ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ, ರೋಗದ ನಿಯಂತ್ರಣಕ್ಕಾಗಿ ಒಂದು ತಿಂಗಳವರೆಗೆ ಎಲ್ಲ ಸರ್ಕಾರಿ ಪಶು ಚಿಕಿತ್ಸಾಲಯಗಳಲ್ಲಿ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ಉಚಿತವಾಗಿ ನಾಯಿ ಹುಚ್ಚು ರೋಗದ ವಿರುದ್ದ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು. ಇದೇ ವೇಳೆ ರೇಬಿಸ್ ರೋಗ ತಡೆಗಟ್ಟುವ ಮಾಹಿತಿಯ ಭಿತ್ತಿ ಪತ್ರಗಳನ್ನು ಸಭೆಯಲ್ಲಿ ಬಿಡುಗಡೆಗೊಳಿಸಿದರು.
ಡಾ. ಸುನಿಲ್ ಕುಮಾರ ಕೆ.ಎಮ್. ರೇಬಿಸ್ ರೋಗನಿರ್ಣಯ (ಡಯಗ್ನೋಸಿಸ್) ಮತ್ತು ರೋಗದ ನಿಯಂತ್ರಣದಲ್ಲಿ (ಕಂಟ್ರೊಲ್) ಆದ ಹೊಸ ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ಪಶುವೈದ್ಯರುಗಳಿಗೆ, ಸಿಬ್ಬಂದಿಗಳಿಗೆ ಸಭೆಯಲ್ಲಿ ರೇಬಿಸ್ ರೋಗ ನಿರೋದಕ ಲಸಿಕೆಯನ್ನು ಹಾಕಿಸಲಾಯಿತು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅಸ್ತು; ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ: ಶಶಿಕಲಾ
ಮುಖ್ಯ ಅತಿಥಿಯಾಗಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಎಲ್.ಪರಮೇಶ್ವರ ನಾಯಕ ಹಾಗೂ ಉಪನಿರ್ದೆಶಕ ಡಾ.ಪ್ರಮೋದ ಮೂಡಲಗಿ, ಡಾ.ಆರ್.ಎ.ಪಾಟೀಲ, ಡಾ.ಎಮ್.ಎನ್.ಪಾಟೀಲ, ಪಶುವೈದ್ಯಕೀಯ ಅಧ್ಯಕ್ಷ ಡಾ.ಕೃಷ್ಣಪ್ಪ ರಾಥೋಡ ಮತ್ತು ಇತರ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ಪಶುವೈದ್ಯರು ಉಪಸ್ಥಿತರಿದ್ದರು.





