ಏಕಮುಖ ರಸ್ತೆಯಲ್ಲಿ ಬಂದ ವಾಹನ ಒಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಸಮೀಪದ ಗದಗ್-ಹುಬ್ಬಳ್ಳಿ ರಸ್ತೆಯ ಬಾಲಾಜಿ ದಾಬಾ ಎದುರು ನಡೆದಿದೆ.
ಹನುಮಂತಪ್ಪ ಭಜಂತ್ರಿ (35) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಅಪಘಾತದಿಂದ ಗಾಯಗೊಂಡಿದ್ದ ಹನುಮಂತಪ್ಪ ಹಾಗೂ ಅವರೊಂದಿಗಿದ್ದ ಅಳಿಯನನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಾತಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತೊಟ್ಟಿದ್ದಾರೆ.
ಇದನ್ನೂ ಓದಿ ಧಾರವಾಡ | ಹಲವು ವರ್ಷಗಳಿಂದ ಮುಚ್ಚಿದ್ದ ಗೋದಾಮಿನಲ್ಲಿ ಕೊನೆಗೂ ಸೋಯಾಬೀನ್ ಖರೀದಿ ಕೇಂದ್ರ ಉದ್ಘಾಟನೆ
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





