ಧಾರವಾಡ | ಹಲವು ವರ್ಷಗಳಿಂದ ಮುಚ್ಚಿದ್ದ ಗೋದಾಮಿನಲ್ಲಿ ಕೊನೆಗೂ ಸೋಯಾಬೀನ್ ಖರೀದಿ ಕೇಂದ್ರ ಉದ್ಘಾಟನೆ

Date:

‌15 ವರ್ಷಗಳಿಂದ ಸ್ಥಗಿತಗೊಂಡಿದ್ದ ಗೋದಾಮು ಇಂದಾದರೂ ಬಳಕೆಗೆ ದೊರೆತಿದೆ. ಆದರೆ ಇದೊಂದು ಆರಂಭ ಮಾತ್ರ. ಇನ್ನೂ ರಾಜ್ಯದ ಅನೇಕ ಕಡೆಗಳಲ್ಲಿ ಇಂತಹ ಹಾಳುಬಿದ್ದ ಗೋದಾಮುಗಳು, ಒಣಗಿದ ಕಾಲುವೆಗಳು, ಮುಚ್ಚಿದ ಕಟ್ಟಡಗಳು ರೈತರ ದುಃಖಕ್ಕೆ ಸಾಕ್ಷಿಯಾಗಿವೆ. ಸಂಶಿಯ ಈ ಗೋದಾಮು ಒಂದು ಮಾದರಿಯಾಗಿ, ಉಳಿದೆಲ್ಲವನ್ನೂ ಸರ್ಕಾರ ಕೂಡಲೇ ದುರಸ್ತಿಪಡಿಸಿ ರೈತರ ಬಳಕೆಗೆ ಅನುಕೂಲ ಮಾಡಿಕೊಡಬೇಕು. 

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಸುಮಾರು 15 ವರ್ಷಗಳಿಂದ ಹಾಳುಬಿದ್ದಿದ್ದ ಎಪಿಎಂಸಿ ಉದ್ಘಾಟನೆಯೂ ಆಗದೆ, ಯಾವುದೇ ಉಪಯೋಗಕ್ಕೂ ಬಾರದೆ ಮುಚ್ಚಿಹೋಗಿದ್ದ ಗೋದಾಮು ಅನಾವರಣಗೊಂಡಿದ್ದು, ಸೋಯಾಬೀನ್ ಖರೀದಿ ಕೇಂದ್ರ ಉದ್ಘಾಟನೆಯಾಗಿದೆ.

500 ಮೆಟನ್ ಸಾಮರ್ಥ್ಯದ ಗೋದಾಮಿನ ಕುರಿತು ಈ ದಿನ.ಕಾಮ್ ಎರಡು ಬಾರಿ ವರದಿ ಪ್ರಕಟಿಸಿತ್ತು. ಅಲ್ಲದೆ ಹಲವು ಮಾಧ್ಯಮ ಸಂಸ್ಥೆಗಳ ವರದಿ ಮತ್ತು ರೈತರ ನಿರಂತಹ ಹೋರಾಟದ ಫಲವಾಗಿ ಇದೀಗ ಸೋಯಾಬಿನ್ ಖರೀದಿ ಕೇಂದ್ರ ಪ್ರಾರಂಭವಾಗಿದೆ.

ಹೌದು, ತಾಲೂಕಿನಲ್ಲಿ ದೊಡ್ಡ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂಶಿ ಗ್ರಾಮದಲ್ಲಿ ಎಪಿಎಂಸಿ ಪ್ರದೇಶವು ಸುಮಾರು ಹದಿನೈದು ವರ್ಷಗಳಿಂದ ಯಾವುದೇ ಉಪಯೋಗಕ್ಕೆ ಬಾರದೆ, ಮುಳ್ಳುಗಂಟ ಬೆಳೆದು, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿತ್ತು. ಇನ್ನು ಹಾಳುಬಿದ್ದ ಎಪಿಎಂಸಿ ಪ್ರಾಂಗಣದಲ್ಲಿ 2013-14ನೇ ಸಾಲಿನಲ್ಲಿ, ಡಬ್ಲ್ಯೂಐಎಫ್ ಯೋಜನೆ ಅಡಿಯಲ್ಲಿ‌ 2019-20ನೇ ಸಾಲಿನಲ್ಲಿ ನಿರ್ಮಿಸಿದ 500 ಮೆಟನ್ ಸಾಮರ್ಥ್ಯದ ಗೋದಾಮು ಉದ್ಘಾಟನೆಯೂ ಆಗದೆ ಮುಚ್ಚಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಗೋದಾಮು ಉದ್ಘಾಟನೆ

ಈ ಬಗ್ಗೆ ಈ ದಿನ.ಕಾಮ್ ಎರಡು ಸಲ ವಿಶೇಷ ವರದಿಯನ್ನು ಪ್ರಕಟಿಸಿದ್ದು, ಅಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ತಂದಿತ್ತು. ಇದೀಗ ನವೆಂಬರ್ 10ರಂದು ಮುಚ್ಚಿದ್ದ ಗೋದಾಮಿನಲ್ಲಿ ಇದೀಗ ಶಾಸಕ ಎಂ ಆರ್ ಪಾಟೀಲ್ ಅವರು ಕುಂದಗೋಳ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನ ಸೋಯಾಬೀನ್ ಖರೀದಿ ಕೇಂದ್ರವನ್ನು ಉದ್ಘಾಟಿಸಿದ್ದಾರೆ.

ಈ ಕುರಿತು ಈ ದಿನ.ಕಾಮ್ ಜತೆಗೆ ಗುರುಪಾದಪ್ಪ ಬಂಕದ ಮಾತನಾಡಿ, “ಸಂಪೂರ್ಣ ಮುಚ್ಚಿಹೋಗಿದ್ದ 500 ಮೆಟನ್ ಸಾಮರ್ಥ್ಯದ ಗೋದಾಮನ್ನು ರೈತರಿಗೆ ಅನುಕೂಲವಾಗುವಂತೆ ಪ್ರಾರಂಭಿಸಬೇಕೆಂದು ಹಲವು ಬಾರಿ ರೈತ ಸಂಘಟನೆಯಿಂದ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವು.‌ ಅದರ ಜತೆಗೆ ಈ ದಿನ ಸುದ್ಧಿ‌ ಮಾಧ್ಯಮವೂ ರೈತರ ಸಮಸ್ಯೆಗೆ ಧಾವಿಸಿ, ಹಾಳುಬಿದ್ದ ಎಪಿಎಂಸಿ ಮತ್ತು ಮುಚ್ಚಿದ್ದ ಗೋದಾಮು ಕುರಿತು ವರದಿ ಮಾಡಿತ್ತು. ಆದ್ದರಿಂದ ಇವತ್ತು ಸೋಯಾಬೀನ್ ಖರೀದಿ ಕೇಂದ್ರ ಪ್ರಾರಂಭವಾಗಿದೆ. ಆದರೆ; ರೈತರು ಬೆಳೆದ ಸೋಯಾಬೀನ್ ಬೆಳೆಯನ್ನು ಮಾರಿದ ಮೇಲೆ ಖರೀದಿ ಕೇಂದ್ರ ತೆರೆಯಲಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ಮುನ್ನವೇ ಪ್ರಾರಂಭಿಸಿದ್ದಿದ್ದರೆ ದಲ್ಲಾಳಿಗಳ ಕಾಟವಾದರೂ ತಪ್ಪುತ್ತಿತ್ತು. ಇನ್ನು ಹಾಳುಬಿದ್ದ ಎಪಿಎಂಸಿ ಕೂಡಾ ಆದಷ್ಟು ಬೇಗನೇ ಸ್ವಚ್ಛವಾಗಲಿ” ಎಂದು ಒತ್ತಾಯಿಸಿದರು. ರೈತರು ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರ ತೆರೆದಿದ್ದಾರೆ. ನಾಮಕಾವಸ್ಥೆ ಆಗಿದೆ. ದಲ್ಲಾಳಿಗಳ ದರ್ಬಾರ್ ಹೆಚ್ಚಾಗಬಹುದು. ಮನುಷ್ಯ ಹೊಟ್ಟೆ ಹಸಿವಾದಾಗ ಊಟ ಮಾಡಬೇಕು. ಆ ಹಿನ್ನೆಲೆಯಲ್ಲಿ ರೈತರು ಮಾರಾಟ ಮಾಡಿದಮೇಲೆ ಕಾಟಾಚಾರಕ್ಕೆ ಖರೀದಿ ಕೇಂದ್ರ ಪ್ರಾರಂಭವಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳ ಸದುಪಯೋಗ ಸರಿಯಾಗಿ ಆಗುವುದಿಲ್ಲ. ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರವನ್ನು ಸರಿಯಾದ ಸಮಯಕ್ಕೆ ತೆರೆಯಬೇಕು. ಈ ಬೆಗ್ಗೆ ಹಲವು ಬಾರಿ ಮನವಿ ಕೊಡಲಾಗಿದೆ. ಯಾರೂ ತೆಲೆಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ರೈತರು ಹೋರಾಟಕ್ಕೆ ಮುಂದಾಗುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಸರ್ಕಾರ ಎಚ್ಛೆತ್ತುಕೊಳ್ಳುತ್ತದೆ. ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ, ರೈತರ ನೋವಿಗೆ ಸ್ಪಂದಿಸುವ ದಿನಗಳು ಬಂದಿಲ್ಲ ಎಂದು ನೋವು ವ್ಯಕ್ತಪಡಿಸಿದರು.

ಗೋದಾಮು

ಸೋಯಾಬಿನ್ ಖರೀದಿ ಕೇಂದ್ರದ ಸಂಗಮೇಶ ಮಾತನಾಡಿ, “ಖರೀದಿ ಕೇಂದ್ರವೇನೋ ಪ್ರಾರಂಭವಾಗಿದೆ. ಆದರೆ; ಇಂದಿಗೂ ಕುಡುಕರ ಸಮಸ್ಯೆ ಬಗೆಹರಿದಿಲ್ಲ.‌ ಈಗಲೂ ಗೋದಾಮಿನ ಹಿಂಭಾಗದಲ್ಲಿ ಕೊಂಡೊಯ್ದು ಸಾರ್ವಜನಿಕರು ಕುಡಿಯುತ್ತ ಕುಳಿತುಕೊಳ್ಳುತ್ತಾರೆ. ಒಂದೆರಡು ಸಲ ಅವರಿಗೆ ತಿಳಿಹೇಳಲೂ ಹೋಗಿದ್ದೇನೆ. ಆದರೆ; ಅವರಾರೂ ಕೇಳುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು. ಈಗಾಗಲೇ 30 ಜನ ರೈತರು ರೆಜಿಸ್ಟರ್ ಆಗಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ಎಲ್ಲಿಯೇ ರೆಜಿಸ್ಟರ್ ಮಾಡಿದ್ದರೂ ಸಂಶಿ ಗ್ರಾಮದ ಸೋಯಾಬಿನ ಖರೀದಿ ಕೇಂದ್ರಕ್ಕೆ ಬಂದು ಕೊಡಬಹುದು. ಕ್ರಮೇಣವಾಗಿ ಗೋವಿನಜೋಳ, ಕಡ್ಲಿ, ಉದ್ದು, ಶೇಂಗಾ ಖರೀದಿ ಪಾಯಿಂಟ್ ತೆರೆಯಲಾಗುವುದು. ಸದ್ಯದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಖರೀದಿ ಸಮಯದಲ್ಲಿ ಸಮಸ್ಯೆ ಯಂಟಾಗಬಹುದು. ಮತ್ತು ಮಾರುಕಟ್ಟೆಯಲ್ಲಿ ಸೋಯಾಬಿನ್ 4400 ರೂ. ಇದೆ ಆದರೆ; ನಮ್ಮಲ್ಲಿ 5200ಕ್ಕೆ ಖರೀದಿ ಮಾಡಿಕೊಳ್ಳುತ್ತೇವೆ” ಎಂದರು.

ಈ ಬಗ್ಗೆ ಸಂಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶಗೌಡ ಪಾಟೀಲ್ ಮಾತನಾಡಿ, “ಇದರ ಕುರಿತು ನನ್ನ ಗಮನಕ್ಕೆ ಬಂದಿರುವುದಿಲ್ಲ. ಖರೀದಿ ಕೇಂದ್ರದವರು ನನಗೆ ತಿಳಿಸಿದ್ದರೆ ನಾನು‌ ಕ್ರಮಕೈಗೊಳ್ಳುತ್ತಿದ್ದೆ. ಆದರೂ; ಚರ್ಚೆ ಮಾಡಲಾಗುವುದು. ಈ ಕುರಿತು ಜನರಿಗೂ ಅರ್ಥವಾಗಬೇಕು” ಎಂದರು.

ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ದ್ಯಾವನೂರ ಮಾತನಾಡಿ, “ಶಾಸಕರಾದ ಎಂ. ಆರ್. ಪಾಟೀಲ ಉದ್ಘಾಟಿಸಿದ ಸೋಯಾಬಿನ್ ಖರೀದಿ ಕೇಂದ್ರವು ಆಮೇಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಬಹುತೇಕ ರೈತರು ಸೋಯಾಬಿನ ಮಾರಾಟ ಮಾಡಿದ್ದಾರೆ. ಅಲ್ಲಲ್ಲಿ ಸ್ವಲ್ಪ ಆರ್ಥಿಕವಾಗಿ ಸಬಲರಿದ್ದವರು ಮಾರಾಟ ಮಾಡದೇ ಇಟ್ಟುಕೊಂಡಿರಬಹುದು. ಅಂತವರಿಗೆ ಸದ್ಯ ಅನುಕೂಲವಾಗುತ್ತದೆ. ಇನ್ನು ಖರೀದಿ ಕೇಂದ್ರದ ಕುರಿತು ಪ್ರಚಾರದ ಕೊರತೆಯಿದ್ದು, ರೈತರು ಅದರ ಸದುಪಯೋಗ ಮಾಡಿಕೊಳ್ಳಬೇಕಿದೆ. ಮತ್ತು ಇಲ್ಲಿ ಖರೀದಿ ಕೇಂದ್ರವಿದ್ದರೂ ಕೆಲವರು ಕುಂದಗೋಳಕ್ಕೆ ಹೋಗಿ ಮಾರಾಟ ಮಾಡುತ್ತಿದ್ದಾರೆ. ಅದು ಯಾವ ಕಾರಣಕ್ಕೆ ಎಂದು ತಿಳಿದುಕೊಳ್ಳಬೇಕಿದೆ” ಎಂದರು.

ಗೋದಾಮಿನ ಮೊದಲ ಸ್ಥಿತಿ

ಒಟ್ಟಿನಲ್ಲಿ ಹಲವು ವರ್ಷಗಳಿಂದ ಬೀಗ ಬಿದ್ದಿದ್ದ, ಗೋದಾಮಿನಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗಿರುವುದರಿಂದ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಪುನಃ ಯಾವುದೇ ಕಾರಣಕ್ಕೂ ಖರೀದಿ ಕೇಂದ್ರವನ್ನು ಮುಚ್ಚಬಾರದು ಎಂಬುದು ಸ್ಥಳೀಯ ರೈತರ ಆಗ್ರಹವಾಗಿದೆ.

ಈ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಕಟ್ಟಡ ಉದ್ಘಾಟನೆಯೇ ಆಗದೆ, ರಾಜಕೀಯ ಆಟಾಟೋಪಕ್ಕೆ ಬಲಿಯಾಗಿ ಸಾರ್ವಜನಿಕ ಹಣದ ದುಂದುವ್ಯಯಕ್ಕೆ ಸಾಕ್ಷಿಯಾಗಿತ್ತು. ಇಂದು ಅದೇ ಗೋದಾಮು ರೈತರ ಸೋಯಾಬೀನ್‌ ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ(MSP) ಖರೀದಿಸುವ ಕೇಂದ್ರವಾಗಿ ತೆರೆದಿದೆ. ಇದರಿಂದ ಸಂಶಿ ಮತ್ತು ಸುತ್ತಮುತ್ತಲಿನ 30-40 ಗ್ರಾಮಗಳ ರೈತರಿಗೆ ನಿತ್ಯದ ಓಡಾಟ, ಬೆಲೆ ಕುಸಿತದ ಆತಂಕ ಮತ್ತು ಮಧ್ಯವರ್ತಿಗಳ ಶೋಷಣೆಯಿಂದ ಮುಕ್ತಿ ಸಿಕ್ಕಿದಂತಾಗಿದೆ.

ಇದನ್ನೂ ಓದಿದ್ದೀರಾ? ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು

ಈ ಘಟನೆಯು ಒಂದೆಡೆ ಸರ್ಕಾರಿ ಯೋಜನೆಗಳು ಸಮಯಕ್ಕೆ ಸರಿಯಾಗಿ ಜಾರಿಗೆ ಬರದಿದ್ದರೆ ಎಷ್ಟು ದೊಡ್ಡ ನಷ್ಟವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಆದರೂ ಮತ್ತೊಂದೆಡೆ ನಿಷ್ಕ್ರಿಯ ಸಂಪನ್ಮೂಲಗಳನ್ನು ಪುನಃ ಚೇತನಗೊಳಿಸಿ ರೈತರಿಗೆ ನೇರ ಲಾಭ ಒದಗಿಸಬಹುದೆಂಬ ಆಶಾಕಿರಣವನ್ನೂ ತೋರಿಸುತ್ತದೆ. ಈ ಬೆಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಕರೆಮಾಡಿದಾಗ; ಶಾಸಕ ಎಂ.ಆರ್.ಪಾಟೀಲ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

15 ವರ್ಷಗಳಿಂದ ಸ್ಥಗಿತಗೊಂಡಿದ್ದ ಗೋದಾಮು ಇಂದಾದರೂ ಬಳಕೆಗೆ ದೊರೆತಿದೆ. ಆದರೆ ಇದೊಂದು ಆರಂಭ ಮಾತ್ರ. ಇನ್ನೂ ರಾಜ್ಯದ ಅನೇಕ ಕಡೆಗಳಲ್ಲಿ ಇಂತಹ ಹಾಳುಬಿದ್ದ ಗೋದಾಮುಗಳು, ಒಣಗಿದ ಕಾಲುವೆಗಳು, ಮುಚ್ಚಿದ ಕಟ್ಟಡಗಳು ರೈತರ ದುಃಖಕ್ಕೆ ಸಾಕ್ಷಿಯಾಗಿವೆ. ಸಂಶಿಯ ಈ ಗೋದಾಮು ಒಂದು ಮಾದರಿಯಾಗಿ, ಉಳಿದೆಲ್ಲವನ್ನೂ ಸರ್ಕಾರ ಕೂಡಲೇ ದುರಸ್ತಿಪಡಿಸಿ ರೈತರ ಬಳಕೆಗೆ ಅನುಕೂಲ ಮಾಡಿಕೊಡಬೇಕು.

IMG 20240805 WA0207
ಶರಣಪ್ಪ ಗೊಲ್ಲರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...