ಉದ್ಯೋಗಾಕಾಂಕ್ಷಿಗಳಿಗೆ ಟಾಪ್ 10 ಪ್ರಶಿಕ್ಷಣಾರ್ಥಿಗಳ ಮೂಲಕ ವಿಶೇಷ ತರಬೇತಿ ನೀಡಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಯಿಂದ ನಿರ್ಧರಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ 10 ಶಾಲಾ- ಕಾಲೇಜುಗಳಲ್ಲಿ 5 ದಿನಗಳ ಕಾಲ ಉಚಿತ ಕಾರ್ಯಗಾರವನ್ನು ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಅವಳಿನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಇದೀಗ ಬೆಳಗಾವಿಯಲ್ಲಿ ಅಧಿವೇಶನ ನಡೆದಿದೆ. ಈ ಅಧಿವೇಶನಕ್ಕೆ ಹಲವಾರು ಕಡೆಗಳಿಂದ ಪಿಎಸ್ಐ ಪ್ರಶಿಕ್ಷಣಾರ್ಥಿಗಳು ಬಂದಿದ್ಧಾರೆ. ಇದೇ ವೇಳೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳಿಗಾಗಿ ವಿಶೇಷ ಕೋಚಿಂಗ್ ನೀಡಲು ನಿರ್ಧರಿಸಲಾಗಿದೆ. ನಗರದ ಹತ್ತು ಕಾಲೇಜು ಹಾಗೂ ಕೋಚಿಂಗ್ ಸೆಂಟರ್ಗಳಲ್ಲಿ ಇಂದಿನಿಂದಲೇ ತರಬೇತಿ ಆರಂಭವಾಗಿದೆ. ಈಗಾಗಲೇ 2 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಧಾರವಾಡದ ಕೆ. ಸಿ.ಡಿ ಕಾಲೇಜು, ಗುರುಕುಲ ಪಿ.ಯು ಕಾಲೇಜು, ವೈದ್ಯಮಠ ಕಾಂಪ್ಲೆಕ್ಸ್, ಗುರುದೇವ ಪಿ.ಯು. ಕಾಲೇಜು, ಪೂರ್ಣ ಪಿ.ಯು ಕಾಲೇಜು, ಪಾವಟೆನಗರದ ಕೆ.ಯು.ಡಿ ಕಾಲೇಜು, ಪ್ರಿಸಂ ಪಿ.ಯು ಕಾಲೇಜು, ಹಳಿಯಾಳನಾಕ ಸೃಷ್ಟಿ ಪಿ.ಯು ಕಾಲೇಜು, ಕ್ಲಾಸಿಕ್ ಪಿಯು/ಡಿಗ್ರಿ ಕಾಲೇಜು, ಭಾರತಿ ನಗರದ ಮದೀನಾ ಕಾಲೇಜು, ಸಿದ್ಧರಾಮೇಶ್ವರ ಕಾಲೇಜು ಒಟ್ಟು 10 ಶಾಲಾ-ಕಾಲೇಜುಗಳಲ್ಲಿ ಡಿ. 15 ಸೋಮವಾರ ಬೆಳಿಗ್ಗೆ 6:00 ಗಂಟೆಯಿಂದ 10:00 ಗಂಟೆವರೆಗೆ ನೋಂದಣಿ ಇರುತ್ತದೆ. ನೋಂದಣಿ ಮಾಡಿಕೊಂಡವರು ಮಾತ್ರ ಕಾರ್ಯಗಾರದಲ್ಲಿ ಪಾಲ್ಗೊಳ್ಳಬಹುದು. ಸೋಮವಾರದಿಂದ ಸಾಯಂಕಾಲ 4:00 ಗಂಟೆಯಿಂದ 8 ಗಂಟೆಯವರೆಗೆ ಕಾರ್ಯಗಾರ ಪ್ರಾರಂಭವಾಗಲಿದ್ದು, ನಂತರ ಪ್ರತಿದಿನ ಬೆಳಿಗ್ಗೆ 6 ರಿಂದ 10, ಸಾಯಂಕಾಲ 4 ರಿಂದ 8 ಗಂಟೆಯವರೆಗೆ ಕಾರ್ಯಗಾರ ನಡೆಯಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ ಧಾರವಾಡ | ಗಾಂಜಾ ಮಾರಾಟ; ನಾಲ್ವರ ಬಂಧನ
ಪರಿಸರ ಮತ್ತು ಪರಿಸರ ವಿಜ್ಞಾನ ವಿಷಯದ ಕುರಿತು ಅಂದಪ್ಪ ಬಳಿಗಾರ, ಭೂಗೋಳಶಾಸ್ತ್ರ-ಮಾಲಾಶ್ರೀ ಜಾಧವ್, ಇತಿಹಾಸ-ಜಯಲಕ್ಷ್ಮಿ, ಪ್ರಚಲಿತ ವಿದ್ಯಮಾನಗಳು-ಅನಿಲ್ ಕುಮಾರ್, ಅರ್ಥಶಾಸ್ತ್ರ-ಎಮ್.ಡಿ. ಅಜರುದ್ದೀನ್, ನೀತಿ-ಪ್ರಶಾಂತ ಗೌಡ, ಸ್ಟಾಟಿಕ್ ಜಿಕೆ-ಕುಲದೀಪ್ ಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ-ಪ್ರದೀಪ್ ತೋಟಗೇರ್, ಅನುವಾದ ಮತ್ತು ನಿಖರತೆ, ಬರವಣಿಗೆ-ಸಂತೋಷ ಧೂಳಖೇಡ, ಪ್ರಬಂಧ-ನಂದಿನಿ ಕೆ.ಎಮ್. ಕಾರ್ಯಗಾರದಲ್ಲಿ ವಿಷಯವಾರು ಸಂವಾದ ನಡೆಸುವ ಅಧಿಕಾರಿಗಳು.





