ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಬೃಹತ್ ಹೋರಾಟದಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ ನಡೆದಿದ್ದು, ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ರಫೀಕ್ ತಹಸೀಲ್ದಾರ್ ಅವರ ತಲೆಗೆ ಕಲ್ಲಿನೇಟು ಬಿದ್ದು ಗಾಯವಾಗಿದೆ.
ಇದನ್ನೂ ಓದಿ ಧಾರವಾಡ | ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ
ಒಂದೆಡೆ ಪ್ರತಿಭಟನೆ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರೆ; ಮತ್ತೊಂದೆಡೆ ಬಿಜೆಪಿ ನಾಯಕರು ಈ ಪ್ರತಿಭಟನೆಯಲ್ಲಿ ಧುಮುಕಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಛಲವಾದಿ ನಾರಾಯಣಸ್ವಾಮಿ, ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಕೂಡ ಭಾಗವಹಿಸಿದ್ದಾರೆ.
CM ಮತ್ತು DCM ತಮ್ಮ ಕುರ್ಚಿ ಕಿತ್ತಾಟದಲ್ಲಿ ರಾಜ್ಯದಲ್ಲಿ ಮೀಸಲಾತಿ ಗೊಂದಲ ಸೃಷ್ಟಿಸಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡದೆ ಸ್ಪರ್ಧಾರ್ಥಿಗಳ ಜೀವನ ನರಕ ಮಾಡಿದೆ ಇದು ಹೀಗೆ ಮುಂದುವರಿದ್ರೆ ಮುಂದೆ ಸರ್ಕಾರಕ್ಕೆ ಉಳಿಗಾಲವಿಲ್ಲ ಅದಕ್ಕೆ ಬೇಗ ಹೈಕೋರ್ಟನ ಮಧ್ಯಂತರ ಆದೇಶ ಪಡೆದು ನೇಮಕಾತಿ ಅಧಿಸೂಚನೆ ಮಾಡಿ ಎಂದು ಮನವಿ ಮಾಡುತ್ತೇವೆ. pic.twitter.com/i31bTH5riv
— PAVAN RAJPUT (@PavanRa98594779) February 24, 2026





