ಧಾರವಾಡದ ಜೆಎಸ್ಎಸ್ ಕಾಲೇಜಿನ ಗುಡ್ಡದ ಮೇಲಿನ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ‘ಆಕಾಶ ಆಕಾರ ಚಂದಾತಲೇ ಬಹು ಪರಾಕ’ ಎಂದು ವಂಶ ಪಾರಂಪರಿಕ ಕಾರ್ಣಿಕ ಗೊರವಯ್ಯ ಸಿರಿಮಲ್ಲ ತಿಪ್ಪಣ್ಣ ಶಿರೋಳ ಬಿಲ್ಲನ್ನು ಏರಿ ಕಾರ್ಣಿಕ ನುಡಿದರು.
ಇದನ್ನೂ ಓದಿ ಧಾರವಾಡ | ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮ
ಭಾನುವಾರ ಸಂಜೆ 4.30ಕ್ಕೆ ನಡೆದ ಈ ಕಾರ್ಣಿಕ ನುಡಿಯನ್ನು ಕೇಳಿದ ಭಕ್ತ ಸಮೂಹ ಕೇಕೇ ಹಾಕಿತು. ಏಳು ಕೋಟಿ, ಏಳು ಕೋಟಿ, ಏಳು ಕೋಟಿ ಚಾಂಗಮಾಲೋ ಎನ್ನುತ್ತಾ ಕಾರ್ಣಿಕವನ್ನು ವಿವಿಧ ಬಗೆಯಲ್ಲಿ ವಿಶ್ಲೇಷಿಸಿಕೊಂಡರು. ನಾಡಿನಲ್ಲಿ ಜನರು ಸುಖ, ಸಂತೋಷ, ನೆಮ್ಮದಿಯಿಂದ ಇರಲಿದ್ದಾರೆ ಮಳೆ, ಬೆಳೆಗೆ ಯಾವುದೇ ಕೊರತೆ ಇಲ್ಲದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸುತ್ತವೆ ಮತ್ತು ಪ್ರಜೆಗಳೇ ಪ್ರಭುಗಳು ಆಗುತ್ತಾರೆ ಎಂದು ನುಡಿದರು.





