ತಂಬಾಕು ತಿನ್ನುವುದು ಎಂದರೆ ದುಡ್ಡು ಕೊಟ್ಟು ರೋಗ ಖರೀದಿಸಿದಂತೆ. ತಂಬಾಕಿನ ಪೊಟ್ಟಣದ ಮೇಲೆ ಎಚ್ಚರಿಕೆ ಎಂದು ನಮೂದಿಸಿದ್ದರೂ, ಜನರು ಬೇಜವಾಬ್ದಾರಿಯಿಂದ ತಿನ್ನುತ್ತಿದ್ದಾರೆ’ ಎಂದು ತಂಬಾಕು ನಿರ್ಮೂಲನಾ ಕೋಶದ ಕಾರ್ಯಕರ್ತೆ ವೀಣಾ ಎನ್ ಬೇಸರ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ‘ವಿಶ್ವ ತಂಬಾಕು ರಹಿತ ದಿನ’ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ತಂಬಾಕು ಸೇವನೆಯಿಂದ ಕ್ಯಾನ್ಸರ್ ಮಾತ್ರವಲ್ಲದೆ ಅಧಿಕ ರಕ್ತದೊತ್ತಡ, ಮಧುಮೇಹ, ತಲೆ ಕೂದಲು ಉದುರುವಿಕೆ, ದೃಷ್ಟಿ ಕ್ಷೀಣಿಸುವಿಕೆ, ಹೃದಯ ಸಂಬಂಧಿ ಕಾಯಿಲೆಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಹೀಗೆ ವ್ಯಸನಿಯು ತಂಬಾಕು ಸೇವನೆಯಿಂದ ಹಲವು ರೋಗಗಳನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಾನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಬುದ್ಧನ ಜೀವನ ತತ್ವಗಳು ಎಲ್ಲ ಕಾಲಕ್ಕೂ ಬೆಲೆಯುಳ್ಳವುಗಳಾಗಿವೆ: ದಸಂಸ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ
ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ ಖಾದರ್, ಸಿವಿಲ್ ನ್ಯಾಯಾಧೀಶೆ ಗಾಯತ್ರಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಸೂಪಿಯಾ ದಾಸರಿ, ವಕೀಲ ಯು ಎಂ ಪಾಟೀಲ, ಎಸ್ ಎನ್ ತೊಂಡುರು, ಚಂದ್ರಕಲಾ ಪ್ರಭಾಕರ್, ಗೀತಾ ಜಿ, ತಹಶೀಲ್ದಾರ್ ವಿರೇಶ ಅಂಗಡಿ ವೈ ಎಂ, ಜಿ ಬಿ ಸೊರಟೂರು ಇದ್ದರು.





