ಧಾರವಾಡ | ಕುಂದಗೋಳದಲ್ಲಿ ಉದ್ದು ಖರೀದಿ ಕೇಂದ್ರ ಉದ್ಘಾಟನೆ

Date:

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಎಪಿಎಂಸಿ ಗೋದಾಮು ಆವರಣದಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎನ್.ಸಿ.ಸಿ.ಎಫ್ ಸಂಸ್ಥೆಯ ಪರವಾಗಿ 2025-26ನೇ ಸಾಲಿನ ಎಫ್.ಎ.ಕ್ಯೂ ಗುಣಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಯರಗುಪ್ಪಿ ಉದ್ದು ಖರೀದಿ ಕೇಂದ್ರವನ್ನು ಶಾಸಕ ಎಮ್ ಆರ್ ಪಾಟೀಲ ಉದ್ಘಾಟಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪ್ರತಿ ಕ್ವಿಂಟಲ್’ಗೆ ಉದ್ದು ರೂ.7800/-  ಬೆಂಬಲ ಬೆಲೆ ನಿಗದಿಯಾಗಿದ್ದು, ಖರೀದಿ ಪ್ರಮಾಣ ಒಬ್ಬ ರೈತರಿಂದ ಗರಿಷ್ಠ 30 ಕ್ವಿಂಟಲ್ ( ಪ್ರತಿ ಎಕೆರೆಗೆ 5 ಕ್ವಿಂಟಲ್ ಮಾತ್ರ ) ಈ ಖರೀದಿ ಕೇಂದ್ರದ ಸದುಪಯೋಗವನ್ನು ಕ್ಷೇತ್ರದ ರೈತರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಇದನ್ನೂ ಓದಿ ಹುಬ್ಬಳ್ಳಿ | ಕೋ-ಆಪರೇಟಿವ್ ಸೊಸೈಟಿಗೆ ಬೆದರಿಸಿ 1.5 ಕೋಟಿ ಬೇಡಿಕೆ ಇಟ್ಟಿದ್ದ ಐವರ ಬಂಧನ

ಈ ಸಂದರ್ಭದಲ್ಲಿ  ಬಸವಣ್ಣಜ್ಜನವರು, ಶಿವಾನಂದ ಸ್ವಾಮಿಗಳು, ಡಾ. ಅರವಿಂದ ಕಟಗಿ, ಉಮೇಶ ಹೆಬಸೂರ್, ದಾನಪ್ಪ ಗಂಗಾಯಿ, ಹರ್ಷಿತಾ ಕಟಗಿ ಹಾಗೂ ರೈತ ಮುಖಂಡರು ಮತ್ತು ಬಿಜೆಪಿ ಪಕ್ಷದ ಮುಖಂಡರು   ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...