ಇತ್ತೀಚೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವದ ಅಂಗವಾಗಿ ಇಂದಿರ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಯನ್ನು ಪಡೆದ ಹುಬ್ಬಳ್ಳಿಯ ಅಕ್ಕ ಫೌಂಡೇಶನ್‌ನ ಪರಿಸರವಾದಿ ವೀರಪ್ಪ ಅರಕೇರಿ ಅವರು ತಮಗೆ ಸಿಕ್ಕ ಪ್ರಶಸ್ತಿ ಮೂಲದ ರೂಪಾಯಿ 5000/-(ಐದುಸಾವಿರ) ಹಣವನ್ನು ಚೆಕ್ ಮೂಲಕ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಭೇಟಿ ಮಾಡಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದರು.
ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅರಕೇರಿಯವರಿಗೆ ಅಭಿನಂದಿಸಿ, ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಪರಿಸರದ ಕುರಿತು ಕಾಳಜಿ ಮಾಡಬೇಕಿದೆ. ಆ ದಿಶೆಯಲ್ಲಿ ಎಲ್ಲರೂ ಪ್ರಯಾಣಿಸೋಣ ಎಂದರು.
ಇದನ್ನೂ ಓದಿ ಧಾರವಾಡ | ಕಿತ್ತೂರಿನ ಇತಿಹಾಸದ ಸಮಗ್ರ ಸಾಹಿತ್ಯ ಇನ್ನೂ ಪ್ರಕಟವಾಗದೇ ಇರುವುದು ವಿಪರ್ಯಾಸ: ರಾಜಶೇಖರ ಬಿರಾದಾರ
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಸಾಹಿತಿ, ಪರಿಸರವಾದಿ ಕೆ. ಎಚ್.ನಾಯಕ, ಹುಬ್ಬಳ್ಳಿ ಇನ್ನರ ವ್ಹೀಲ್ ಅಧ್ಯಕ್ಷೆ ಯಶೋಧಾ ಅಂಗಡಿ, ಕಾರ್ಯದರ್ಶಿ ಸುಮಂಗಲಾ ಹಿರೇಮಠ, ಸುನೀತಾ ಮುದಕಣ್ಣವರ, ಮಾಲಾ ಮನಗುಂಡಿ, ಗೀತಾ ಹಂಚಾಟೆ ಇದ್ದರು.





