ಧಾರವಾಡ | ನಿರ್ಗತಿಕರ ಸೇವೆಯೇ ನಿಜವಾದ ಧರ್ಮವೆಂದಿದ್ದಾರೆ ವಿವೇಕಾನಂದರು: ಶಶಿಧರ ಹೊಸಳ್ಳಿ

Date:

ಹಸಿದವನಿಗೆ ಅನ್ನವನ್ನು ನೀಡದ, ಕೆಳಗೆ ಬಿದ್ದವರ ಮೇಲೆಬ್ಬಿಸದ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಮತ್ತು ನಿರ್ಗತಿಕರ ಸೇವೆಯೇ ನಿಜವಾದ ಧರ್ಮವೆಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ ಎಂದು ಶಶಿಧರ ಹೊಸಳ್ಳಿ ತಿಳಿಸಿದರು.

ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ವಿವೇಕಾನಂದ ಸ್ಫೂರ್ತಿ ಫೌಂಡೇಷನ್’ನ ಸಹಯೋಗದಲ್ಲಿ ‘ವಿವೇಕ ವೇದಿಕೆ-2026’ ಶೀರ್ಷಿಕೆ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜ. 12ರಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಗ್ರಾಪಂ ಮೈದಾನದಲ್ಲಿ ಹಮ್ಮಿಕೊಂಡಿದ್ದರು.

ಈ ವೇಳೆ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ಸ್ವಾಮೀ ವಿವೇಕಾನಂದರು ಏಳಿ ಎದ್ದೇಳಿ ಎಂದು ಕರೆನೀಡಿದ್ದರೂ, ಯುವಕರು ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಅವರ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ; ಏನಾದರೂ ಸಾಧಿಸಬಹುದು. ಯುವಕರು ಸಮಾಜಕ್ಕಾಗಿ ಕಿಂಚಿತ್ತಾದರೂ ಬದುಕಬೇಕು ಎಂಬುದು ವಿವೇಕಾನಂದರ ಕರೆಯಾಗಿತ್ತು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುಂದಗೋಳದ ಬಸವಣ್ಣಜ್ಜನವರು ಮಾತನಾಡಿ, ಮನುಷ್ಯರು ಬದುಕು ಕಟ್ಟಿಕೊಳ್ಳುವ ಬಗ್ಗೆ ಸ್ವಾಮಿ ವಿವೇಕಾನಂದರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ.‌ ಅದ್ಯಾತ್ಮದ ಶಕ್ತಿಯಾಗಿ ರೂಪುಗೊಂಡಿರುವ ವಿವೇಕಾನದರು ಭಾರತಕ್ಕೆ ಅದ್ಭುತವಾದ ಅಧ್ಯಾತ್ಮದ ಕೊಡುಗೆ ನೀಡಿದ್ದಾರೆ. ಅಣ್ಣಾ ಅಜಾರೆ ವಿವೇಕಾನಂದರಿಂದ ಸ್ಫೂರ್ತಿಗೊಂಡ ಕುರಿತು ಸ್ಮರಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಮ್ಮಿಕೊಂಡಿದ್ದು, ನಿಜಕ್ಕೂ ಶ್ಲಾಘನಿಯ ಎಂದು ಶೌರ್ಯ ವಿಪತ್ತು ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶೌರ್ಯ ವಿಪತ್ತು ಸಂಸ್ಥೆಯ ಜಿಲ್ಲಾಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ವಿವೇಕಾನಂದರು ನಾನು ಮಡಿದರೂ ನನ್ನ ವಿಚಾರಗಳು ಬದುಕುತ್ತವೆ ಎಂದು ಸಾರಿದ್ದಾರೆ. ಭಾರತವೆಂದರೆ ಅನ್ಯ ದೇಶಗಳ ದೃಷ್ಟಿಯಲ್ಲಿ ಕೀಳರಿಮೆ ಇತ್ತು. ಅದನ್ನು ವಿವೇಕಾನಂದರು ತೊಡೆದುಹಾಕಿದರು. ಭಾರತದಲ್ಲಿರುವ ವಿವಿಧತೆಯಲ್ಲಿನ ಏಕತೆಯನ್ನು, ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ಹೀಗೆ ಎಲ್ಲರೂ ಒಂದಾಗಿ ಬದುಕುತ್ತಿರುವ ಬಗ್ಗೆ ವಿದೇಶಕ್ಕೆ ತಿಳಿಸುವುದಕ್ಕಾಗಿ ವಿವೇಕಾನಂದರು ಚಿಕ್ಯಾಗೋ’ದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು ಎಂದರು.

ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ವಿವಿಧ ಕೋರ್ಸ್ ಗಳ ನಡೆಸಲು ಸರ್ಕಾರದಿಂದ ದೊರೆತ ಮಾನ್ಯ ಫಲಕವನ್ನು ಬಿಡುಗಡೆಗೊಳಿಸಿದರು. ತಾಲೂಕಿನ ಪತ್ರಕರ್ತರಿಗೆ, ಗ್ರಾಮದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ, ರೈತ ಮುಖಂಡರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿದರು. ಪ್ರಕಾಶ ಬತ್ತಿ ಸ್ವಾಗತಿಸಿದರು. ರವಿ ಬಾವುಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸವದೇವರು ಮಾತನಾಡಿದರು. ಪವಿತ್ರಾ ಬಾವುಟೆ ನಿರೂಪಿಸಿದರು.

ಇದನ್ನೂ ಓದಿ ಧಾರವಾಡ | ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕು: ಸುನೈನಾ

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೀರಿಶಗೌಡ ಪಾಟೀಲ, ಉಪಾದ್ಯಕ್ಷೆ ಲೀಲಾವತಿ ಸೂಲದ, ಶಿವಾನಂದ ಪೂಜಾರ, ಅಂದಾನೆಪ್ಪ ಉಪ್ಪಿನ,  ಗುರುಪಾದಪ್ಪ ಬಂಕದ,  ಪ್ರಕಾಶಗೌಡ ಪಾಟೀಲ, ರಾಜು ಪುಟ್ಟಣ್ಣನವರ,  ವಿದ್ಯಾಧರ ಸುಂಕದ, ಲೋಕೇಶ ಸರಾವರಿ, ಹಾಲಪ್ಪ ತಡಾಳ, ಯಲ್ಲಪ್ಪ ದ್ಯಾವನೂರು, ಶರಣಪ್ಪ ಬಾವುಟೆ, ಮಹ್ಮದ್ ಸಾಧಿಕ ಶಿರಹಟ್ಟಿ, ಜುಂಜಪ್ಪ ಚಲವಾದಿ, ಯಲ್ಲಪ್ಪ ಮುಳಗುಂದ, ರಮೇಶ ಅತ್ತಿಗೇರಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...