ಶಿಕ್ಷಣ ತಜ್ಞ, ಸಮಾಜ ಸುಧಾರಕ ಹಾಗೂ ಅಲಿಗಢ್ ಮುಸ್ಲಿಂ ವಿಶ್ವ ವಿದ್ಯಾಲಯದ ಸಂಸ್ಥಾಪಕ ಸರ್. ಸಯ್ಯದ್ ಅಹ್ಮದ್ ಖಾನ್ ಅವರ ಆದರ್ಶಗಳನ್ನು ಅನುಸರಿಸಿ ಶಿಕ್ಷಣದ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಧಾರವಾಡ ಅಂಜುಮನ್ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ. ಐ ಎ ಮುಲ್ಲಾ ಹೇಳಿದರು.
ಸರ್. ಸಯ್ಯದ್ ಅಹ್ಮದ್ ಖಾನ್ ಅವರ ಜನ್ಮದಿನವನ್ನು “ಸರ್ ಸಯ್ಯದ್ ದಿನ”ವಾಗಿ ಆಚರಿಸಿದ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಬ್ದುಲ್ ಖಾದಿರ್ ಸರ್ಗಿರೋ “ಸರ್ ಸಯ್ಯದ್ ಅವರ ನವಚೇತನಾತ್ಮಕ ಚಿಂತನೆ ಮತ್ತು ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | RSS ಕಚೇರಿಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಕಾರ್ಯಕ್ರಮದಲ್ಲಿ ಕುಮಾರಿ ಸಬಿಹಾ ಕಾಜಿ ಕುರ್‌ಆನ್ ಪಠಣ ಮಾಡಿದರು. ಗುಲ್ನಾಜ್ ಕಾಜಿ ಕಾರ್ಯಕ್ರಮ ನಿರುಪಿಸಿದರು, ಡಾ. ನಾಲತವಾಡ ಸ್ವಾಗತಿಸಿದರು. ಡಾ. ಆಯೇಷಾ ಚಕೋಲಿ ಅತಿಥಿ ಪರಿಚಯಿಸಿದರು. ಡಾ. ಫಾತಿಮಾ ದರೋಗಾ ವಂದಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಹಾಜರಿದ್ದರು.





